ಸಿಎಂ ರಾಜೀನಾಮೆ ನೀಡಲಿ: ಮೆಟಗುಡ್ಡ ಆಗ್ರಹ
ಬೈಲಹೊಂಗಲ,ಜು೩೦: ಪುಕ್ಕಟೆ ಯೋಜನೆಗಳನ್ನು ಮುಂದಿಟ್ಟುಕೊAಡು ಅಧಿಕಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಮಾಜಿ ಶಾಸಕ ಜಗದೀಶ್ ಮೆಟಗುಡ್ಡ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಮಂಡಲ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿ ಪುಕ್ಕಟೆ ಯೋಜನೆಗಳ ಪ್ರಚಾರದ ಮೂಲಕ ರಾಜ್ಯದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ, ಬದಲಾಗಿ ಸಚಿವರ,ಅಧಿಕಾರಿಗಳ ಮೂಲಕ ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣದ ಮೂಲಕ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿ,ಪ್ರಸ್ತುತ ಕೇಂದ್ರ ಸರಕಾರ ಮಂಡಿಸಿದ ಬಜೆಟ್ ಎಲ್ಲ ವರ್ಗದ ಜನರಿಗೆ ಅನುಕೂಲಕರ ವೆಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಂದೀಪ ದೇಶಪಾಂಡೆ ಮಾತನಾಡಿ, ರಾಜ್ಯ ಸರಕಾರದ ವಿರುದ್ಧ ಬೆಂಗಳೂರಿನಿAದ ಮೈಸೂರಿನ ವರೆಗೆ ನಡೆಯಲಿರುವ “ಮೈಸೂರ್ ಚಲೋ” ಪಾದಯಾತ್ರೆಯಲ್ಲಿ ಪಾಲ್ಗೊಂಳುವAತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ,ಗುರು ಮೆಟಗುಡ್ಡ,ಮಂಡಲ ಅಧ್ಯಕ್ಷ, ಗುರುಪಾದ ಕಳ್ಳಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್,ಎಸ್, ಸಿದ್ದನಗೌಡರ್, ಜಿಲ್ಲಾ ಸಹಕಾರ ಪೃಕೋಷ್ಠ ಸಂಚಾಲಕ ಸುನೀಲ್ ಮರಕುಂಬಿ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ಮಂಡಲ ಉಪಾಧ್ಯಕ್ಷ ಸುಭಾಷ ತುರಮರಿ, ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಜಿಲ್ಲಾ ಓ.ಬಿ.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಹಡಪದ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಭಾಗಿಯಗಿದ್ದರು.