ಧ್ರುವನಾರಾಯಣ್ ಸ್ಮರಣಾರ್ಥ ಉದ್ಯೋಗ ಮೇಳ
ಸಂಜೆವಾಣಿ ವಾರ್ತೆ
ನಂಜನಗೂಡು: ಜು.೩೦:- ಮಾಜಿ ಸಂಸದ ದಿ. ದ್ರವ ನಾರಾಯಣ್ ರವರ ೬೩ನೇ ವರ್ಷದ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಬೃಹತ್ ಉದ್ಯೋಗ ಮೇಳವನ್ನು ಜುಲೈ ೩೧ರ ಬುಧವಾರ ಬೆಳಗ್ಗೆ ೯ ರಿಂದ ಸಂಜೆ ೫ ರ ವರಿಗೆ ಜೆ.ಎಸ್.ಎಸ್ ಮಂಗಳ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಉದ್ಘಾಟಿಸುವರು
ತಾಲೂಕು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಕೇಶವಮೂರ್ತಿ ಮಾತನಾಡಿದ ಮಾಜಿ ಶಾಸಕರು ಸಂಸದರಾಗಿದ್ದ ಧ್ರುವನಾರಾಯಣ್ ರವರು ಬದುಕಿದ್ದಾಗ ಪ್ರತಿ ವರ್ಷವೂ ಅವರ ಹುಟ್ಟು ಹಬ್ಬದಂದು ಉಚಿತ ಆರೋಗ್ಯ ಶಿಬಿರ, ಉದ್ಯೋಗ ಮೇಳ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿತ್ತು.ಈ ವರ್ಷವೂ ೬೩ನೇ ಹುಟ್ಟು ಹಬ್ಬದ ಸ್ಮರಣಾರ್ಥ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಅನುಕೂಲವಾಗಲೆಂದು ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ನಿರುದ್ಯೋಗಿಗಳು ಪಡೆದು ಕೊಳ್ಳುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಪ್ರತಿಷ್ಠಿತ ಕಂಪನಿಗಳ ಜವಾಬ್ದಾರಿ ವಹಿಸಿರುವ ಪ್ರಕೃತ್ ಉದ್ಯೋಗ ಮೇಳದ ಮಾಹಿತಿ ನೀಡುತ್ತಾ ಈ ಉದ್ಯೋಗ ಮೇಳವು ವಿದ್ಯಾರ್ಥಿಗಳು ಹಾಗೂ ಕಂಪನಿಗಳಿಗೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ ಒಂದೇ ಸ್ಥಳದಲ್ಲಿ ನೂರಾರು ಕಂಪನಿಗಳು ಭಾಗವಹಿಸುವುದರಿಂದ ನಿರುದ್ಯೋಗಿ ಯುವಕರು ಕೆಲಸಕ್ಕಾಗಿ ಕಂಪನಿಗಳಿಗೆ ಅಲೆಯುವ ಪರಿಸ್ಥಿತಿ ಇಲ್ಲದೆ ತಮಗೆ ಬೇಕಾದ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ.
ಈ ಬಾರಿಯ ಉದ್ಯೋಗ ಮೇಳದಲ್ಲಿ ಮೈಸೂರು, ಚಾಮರಾಜನಗರ, ಬೆಂಗಳೂರು ಜಿಲ್ಲೆಗಳಿಂದ ೧೦೨ ಹೆಚ್ಚಿನಕಂಪನಿಗಳುಈಮೇಳದಲ್ಲಿ ಭಾಗವಹಿಸುವವು ಉದ್ಯೋಗಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುವಂತೆ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿ ಯುವಕರು ಇದರ ಸದುಪಯೋಗ ಪಡಿಸಿಕೊಳ್ಳಲು ಸೂಚಿಸಿದರು. ಕಳೆದಬಾರಿಏರ್ಪಡಿಸಲಾಗಿದ್ದಉದ್ಯೋಗಮೇಳದಲ್ಲಿ ೧೨೦೦ ಆಕಾಂಕ್ಷಿಗಳು ಭಾಗವಹಿಸಿದ್ದು ಅದರಲ್ಲಿ ೪೪೦ ನಿರುದ್ಯೋಗಿಗಳಿಗೆ ಕೆಲಸದೊರೆತು ಉತ್ತಮಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಉದ್ಯೋಗ ಮೇಳದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ್ ಮಾಜಿ ಸಂಸದ ಸುರೇಶ್ ಶಾಸಕರಾದ ಅನಿಲ್ ಚಿಕ್ಕಮಾದು ಗಣೇಶ್ ಪ್ರಸಾದ್ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಟ್ಟಣದ ಅಧ್ಯಕ್ಷ ಸಿಎಂ ಶಂಕರ್ ಬ್ಲಾಕ್ ಅಧ್ಯಕ್ಷ ಶ್ರೀಕಂಠು ಇದ್ದರು