ಅಂಧರ ಸಾಧನೆಗೆ ಪುಷ್ಠಿ ನೀಡಲು ಅವಿಷ್ಕಾರ: ಎನ್.ವೀರಕಾತಯ್ಯ
ಸಂಜೆವಾಣಿ ನ್ಯೂಸ್
ಮೈಸೂರು: ಜು.೩೦:- ಧ್ವನಿ ಆಧಾರಿತ ಸಾಟ್‌ವೇರ್ ಅನ್ನು ಅಭಿವೃದ್ಧಿಪಡಿಸಿರುವುದು ಏಷ್ಯಾದಲ್ಲಿ ಇದೇ ಮೊದಲು. ಅಂಧರ ಸಾಧನೆಗೆ ಪುಷ್ಠಿ ನೀಡಲು ಇಂತಹ ಆವಿಷ್ಕಾರಗಳು ಅತ್ಯವಶ್ಯಕ ಎಂದು ಕೆಎಸ್‌ಇಸಿ ಅಂಧ ಸೊಸೈಟಿಯ ಅಧ್ಯಕ್ಷ ಎನ್. ವೀರಕ್ಯಾತಯ್ಯ ತಿಳಿಸಿದರು.
ನಗರದ ಲಕ್ಷ್ಮೀಪುರಂನ ಹೊಸ ಕಾಂತರಾಜ್ ರಸ್ತೆಯಲ್ಲಿರುವ ಸೋಹೋ ಬೋಟಿಕ್ ಹೋಟೆಲ್‌ನಲ್ಲಿ ಜು. ೨೮ ರಂದು ಸಿತಾರಾ ಐಟಿ ಇನೋವೇಷನ್?ಸ ಪ್ರೈ.ಲಿಮಿಟೆಡ್ ವತಿಯಿಂದ ನಡೆದ ಬ್ಯಾಂಕಿಂಗ್ ವೆಬ್ ಅಪ್ಲಿಕೇಷನ್ ಸಾಫ್?ಟವೇರ್ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಧರಾಗಿ ಹುಟ್ಟುವುದು ಮುಖ್ಯ ಅಲ್ಲ, ಅಂಧರಾಗಿ ಸಾಧಿಸುವುದು ಮುಖ್ಯ. ಸಾಧನೆಗೆ ಅಂಧತ್ವದಂತಹ ನ್ಯೂನ್ಯತೆಗಳು ಅಡ್ಡಿಯಾಗಲಾರವು. ಇಂದು ಜಗತ್ತಿನಾದ್ಯಂತ ಶೇ.೭೦ ರಿಂದ ೮೦ರಷ್ಟು ಸಾಫ್?ಟವೇರ್‌ಗಳು ಕೆಲಸ ನಿರ್ವಹಿಸಿದರೆ, ಕೇವಲ ಶೇ.೨೦ರಷ್ಟು ಅಷ್ಟೇ ಮನುಷ್ಯ ಮಾಡುತ್ತಿದ್ದಾನೆ. ತಂತ್ರಜ್ಞಾನ ಯುಗವಾಗಿರುವ ಇಂದು ಇಂತಹ ಸಾಫ್?ಟವೇರ್‌ಗಳು ನಮ್ಮಂತಹ ಅಂಧರಿಗೆ ಬಹುಪಯೋಗವಾಗಲಿದೆ ಎಂದರು.
ಸಹಕಾರ ಸಂಘಗಳು ಸಾರ್ವಜನಿಕ ವಿತರಣಾ ವ್ಯವಸ್ಥೆ, ದೊಡ್ಡ ಗ್ರಾಹಕರ ನೆಲೆ ಮುಂತಾದ ಹಲವಾರು ಚಟುವಟಿಕೆಗಳನ್ನು ಹೊಂದಿರುವುದರಿಂದ ಅಂಧರಿಗೆ ಖಾತೆಗಳ ಪುಸ್ತಕಗಳನ್ನು ನಿರ್ವಹಿಸುವುದು ಸವಾಲಾಗಿದೆ. ಏಕೆಂದರೆ ಅದರ ಬಳಕೆಗೆ ಅನುಗುಣವಾಗಿ ಅದನ್ನು ಕಾರ್ಯಗತಗೊಳಿಸಲು ಮೌಖಿಕವಾಗಿ ಸೂಚನೆಗಳನ್ನು ನೀಡಬೇಕಾಗುತ್ತದೆ. ಸಿತಾರಾ ಒದಗಿಸಿದ ಸಾ?ಟ್‌ವೇರ್‌ನಲ್ಲಿ ವಿಶೇಷ ವೈಶಿಷ್ಟ್ಯಗಳಿವೆ. ಅವುಗಳನ್ನು ಪ್ರದರ್ಶಿಸಲು ಕಂಪ್ಯೂಟರ್‌ನಲ್ಲಿ ಅದರ ಧ್ವನಿ ಮೋಡ್ ಅನ್ನು ಬಳಸುತ್ತದೆ. ಇದು ಕಂಪ್ಯೂಟರನ್ನು ನೋಡದೆ ಬಳಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.
ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ದೃಷ್ಟಿಹೀನ ವ್ಯಕ್ತಿಗಳಿಗೆ ಅವರ ಹಣಕಾಸು ನಿರ್ವಹಣೆಯಲ್ಲಿ ಪ್ರವೇಶ ಮತ್ತು ಸ್ವಾತಂತ್ರ್ಯವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಈ ನವೀನ ಮತ್ತು ಅಂತರ್ಗತ ತಂತ್ರಜ್ಞಾನದಿಂದ ಸಾಕಷ್ಟು ಸಹಾಯವಾಗಲಿದೆ.
ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗಳಿಗಾಗಿ ಧ್ವನಿ ಆಧಾರಿತ ಸಾಟ್‌ವೇರ್ ಅನ್ನು ಅಭಿವೃದ್ಧಿಪಡಿಸಿರುವುದು ಏಷ್ಯಾದಲ್ಲಿ ಇದೇ ಮೊದಲು ಎಂಬುದು ಹೆಮ್ಮೆಯ ವಿಷಯ ಎಂದು ನುಡಿದರು.
ಮಂಡಳಿ ನಿರ್ದೇಶಕ ರಾಘವೇಂದ್ರ ಮಾತನಾಡಿ, ಏಷ್ಯಾದಲ್ಲೇ ಪ್ರಪ್ರಥಮವಾಗಿ ಸ್ಥಾಪನೆಯಾಗಿರುವ ಸಹಕಾರ ಸಂಘ. ೨೦೧೯ರಲ್ಲಿ ಕಾರ್ಯ್ರಂಭಿಸಿ ೨೦೨೩-೨೪ರಲ್ಲಿ ಅನಾವರಣಗೊಳಿಸಲಾಗಿದೆ. ಪ್ರಸ್ತುತ ಸಂಘದಲ್ಲಿ ೫೭೬ ಸದಸ್ಯರಿದ್ದು, ೧೫೫೬ ಷೇರುಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೆ ೪ ಲಕ್ಷ ಲಾಭ ಗಳಿಸಲಾಗಿದೆ ಎಂದು ಹೇಳಿದರು.
ಈ ಸಾಫ್?ಟವೇರ್‌ನ ಮೂಲಕ ಪಾರದರ್ಶಕವಾಗಿ ಕೆಲಸ ನಿರ್ವಹಿಸಲು ಅಂಧ ಉದ್ಯೋಗಿಗಳಿಗೆ ಬ್ಯಾಂಕಿಂಗ್ ಮತ್ತು ಶೈಕ್ಷಣಿಕ ಸಾಫ್‌ಟವೇರ್ ಪರಿಹಾರಗಳನ್ನು ಒದಗಿಸಿಕೊಡುತ್ತದೆ. ಸದಸ್ಯರ ಡೇಟಾ, ದಾಖಲಾತಿ, ಬ್ಯಾಂಕ್ ದಾಖಲೆಗಳನ್ನು ನಮೂದಿಸಲು, ದೂರವಾಣಿ ಸಂಖ್ಯೆ ಹಾಕಲು ಮತ್ತು ಸದಸ್ಯರಿಗೆ ಸದಸ್ಯತ್ವ ಸಂಖ್ಯೆ ನೀಡಬಹುದು ಎಂದು ತಿಳಿಸಿದರು.
ಸಿತಾರಾ ಐಟಿ ಇನೋವೇಷನ್ ಕಂಪನಿ ಸಿಎಮ್‌ಡಿ ರಂಗ ರಾವ್ ಕೃಷ್ಣ, ಅಭಿಷೇಕ್, ಸುಮಾ ಕೃಷ್ಣ ಹಾಗೂ ವಿವಿಧ ಭಾಗಗಳ ಅಂಧ ಬ್ಯಾಂಕಿಂಗ್ ಉದ್ಯೋಗಿಗಳು ಹಾಜರಿದ್ದರು.