ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯ: ಎಂ.ಆರ್. ಗಂಗಾಧರ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.೩೦- ಜಿಲ್ಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ದಿಪಡಿಸಲು ಸಂಘ ಸಂಸ್ಥೆಗಳ ಸಹಕಾರ ಹೆಚ್ಚಿನದ್ದಾಗಿದ್ದು, ಈ ನಿಟ್ಟಿನಲ್ಲಿ ವರ್ತಕರ ಸಂಘ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಉತ್ತೇಜನ ಮಾಡುವ ಕೆಲಸ ಮಾಡುತ್ತಿದೆ ಎಂದು ಚಾಮರಾಜನಗರ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ಎಂ.ಆರ್. ಗಂಗಾಧರ್ ತಿಳಿಸಿದರು.
ನಗರದ ವರ್ತಕರ ಭವನದಲ್ಲಿ ವರ್ತಕರ ಸಂಘದ ೫೮ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ವರ್ತಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಅವರು ಮಾತನಾಡಿದರು. ಚಾಮರಾಜನಗರ ಜಿಲ್ಲೆ ಹಿಂದುಳಿದ ಗಡಿ ಜಿಲ್ಲೆ ಎಂಬ ಮಾತು ದೂರವಾಗಬೇಕು. ಇಲ್ಲಿನ ಜನರಿಗೆ ಸಾಧನೆ ಮಾಡಬೇಕೆಂಬ ಕೆಚ್ಚು ತುಂಬ ಇದೆ. ನಮ್ಮ ವಿಶ್ವ ವಿದ್ಯಾಲಯದಲ್ಲಿ ಕನ್ನಡ, ಭೌತಶಾಸ್ತ್ರ ವಿಭಾಗದಲ್ಲಿ ರ್‍ಯಾಂಕ್ ಗಳಿಸಿ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಹಳಷ್ಟು ಮಂದಿಗೆ ಇಂಥ ಛಲ ಇದೆ. ಇವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.
ಹುಟ್ಟಿನಿಂದಲೇ ಯಾರು ದಡ್ಡರು ಹಾಗೂ ಬುದ್ದಿವಂತರು ಅಲ್ಲ. ಅವರು ಕಲಿಯುವ ವಾತಾವರಣ ಮತ್ತು ಪ್ರೋತ್ಸಾಹ ದೊರೆತರೆ ಎಲ್ಲರು ಸಹ ಸಾಧನೆ ಮಾಡುತ್ತಾರೆ. ಅಂಥ ವಾತಾವರಣವನ್ನು ನಾವು ನೀವು ಕಲ್ಪಿಸಿ ಜವಾಬ್ದಾರಿ ಇದೆ. ನಿಮ್ಮೂರಿನ ಪ್ರತಿಭೆ ಡಾ.ನಾಗೇಶ್ ಸಾಧನೆ ನಮ್ಮ ಮಕ್ಕಳಿಗೆ ಸ್ಪೂರ್ತಿಯಾಗಬೇಕು. ಅವರನ್ನು ಆಹ್ವಾನಿಸಿ, ಗೌರವಿಸುತ್ತಿರುವ ವರ್ತಕರ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆಗಳು. ಈ ಹಿಂದೆ ಚಾ.ನಗರ ಪಾಲಿಟೆಕ್ನಿಕ್ ಮಾತ್ರ ಇತ್ತು. ಈಗ ವಿಶ್ವ ವಿದ್ಯಾನಿಲಯ ಬಂದಿದೆ. ಮೆಡಿಕಲ್, ಇಂಜಿನಿಯರಿಂಗ್, ಕೃಷಿ ಕಾಲೇಜು ಬಂದಿದೆ. ಜೆಎಸ್‌ಎಸ್ ಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿದೆ. ನಮ್ಮಲ್ಲಿಯು ಸಹ ೧೩ ಕೋರ್ಸ್‌ಗಳು ಇವೆ. ಇನ್ನು ೨೫ಕ್ಕು ಹೆಚ್ಚು ಕೋರ್ಸ್‌ಗಳನ್ನು ಅಳವಡಿಸುತ್ತಿದ್ದೇವೆ. ಇದೆಲ್ಲವನ್ನು ಜಿಲ್ಲೆಯ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಬೆಂಗಳೂರಿನ ಎಮ್ಸ್‌ನ ಕಾರ್ಡಿಯಾಲಜಿ ಮುಖ್ಯಸ್ಥ ಡಾ. ಸಿ.ಎಂ. ನಾಗೇಶ್ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, ಸಾಧನೆ ಸಾಧಕನ ಸೊತ್ತಾಗುತ್ತಿದೆ. ಇದಕ್ಕೆ ನಾನೇ ಉತ್ತಮ ನಿದರ್ಶನ. ನಾನು ೫ ತರಗತಿ ವ್ಯಾಸಂಗ ಮಾಡುತ್ತಿದ್ದಾಗಲೇ ವೈದ್ಯನಾಗಬೇಕು. ಹೃದಯ ತಜ್ಞನಾಗಬೇಕೆಂಬ ಅಸೆ ಹೊಂದಿ ಪುಸ್ತಕದಲ್ಲಿ ಬರೆದುಕೊಂಡೆ. ನಂತರ ಚಿನ್ನದ ಪದಕ ಪಡೆಯಬೇಕೆಂಬ ಛಲದೊಂದಿಗೆ ಏಕಾಗ್ರತೆ ಮತ್ತು ಕಠಿಣ ಪರಿಶ್ರಮದಿಂದ ಸಕರತ್ಮಾಕವಾಗಿ ಚಿಂತನೆ ಮಾಡುತ್ತಾದೆ ಯಶಸ್ಸು ಗಳಿಸಿದೆ. ಆದೇ ರೀತಿ ನೀವು ಸಹ ಒಂದು ಗುರಿಯನ್ನು ಇಟ್ಟುಕೊಂಡು ವ್ಯಾಸಂಗ ಮಾಡಿ, ಂiiಶಸ್ಸು ಗೊಳಿಸಿ. ಹೃದಯ ಸಂಬಂಧಿ ಖಾಯಿಲೆಗಳಿಂದ ಮುಕ್ತಿ ಹೊಂದಲು ವ್ಯಾಯಾಮ, ವಾಕ್, ಯೋಗ, ಪ್ರಾಣಯಾಮ ಹಾಗೂ ಕಾಲ ಕಾಲಕ್ಕೆ ತಕ್ಕಂತೆ ಪರೀಕ್ಷೆ ಮಾಡಿಸಿಕೊಂದು ಆರೋಗ್ಯದ ಕಡೆಗೂ ಹೆಚ್ಚಿನ ನಿಗಾ ವಹಿಸಿದರೆ, ಹೃದಯಾಘಾತವನ್ನು ತಪ್ಪಿಸಲು ಸಾಧ್ಯವಿದೆ ಎಂದರು.
ವರ್ತಕರ ಸಂಘದ ಅಧ್ಯಕ್ಷ ಎಚ್.ಬಿ ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಗೌರವ ಕಾರ್ಯದರ್ಶಿ ಕೆ.ಎಸ್. ಚಿದಾನಂದ ಗಣೇಶ್, ಉಪಾಧ್ಯಕ್ಷ ಸಿ.ಎಸ್. ಮಹೇಶ್‌ಕುಮಾರ್, ಸಹ ಕಾರ್ಯದರ್ಶಿ ಎಂ. ಕಮಲ್‌ರಾಜ್, ಖಜಾಂಚಿ ಎಚ್.ಬಿ. ವಿಶ್ವಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಎಸ್. ಬಾಲಸುಬ್ರಮಣ್ಯ, ನಿರ್ದೇಶಕರಾದ ಸಿ.ಎ. ನಾರಾಯಣ್, ರವಿಶಂಕರ್, ಸಿ.ಎಸ್. ಮಹೇಶ್‌ಕುಮಾರ್, ಎಸ್. ಸತೀಶ್, ಸಿ. ರಾಮಚಂದ್ರ, ಎ. ಶ್ರೀನಿವಾಸನ್, ಸಿ.ಜಿ. ಪದ್ಮಕುಮಾರ್, ಎಲ್. ಸುರೇಸ್, ಎಂ. ಯೊಗೀಶ್, ಗಣೇಶ್, ಸಿ.ಎಸ್. ಮೋಹನ್‌ಕುಮಾರ್, ವಿ. ವಿಶ್ವನಾಥ್, ಅಜಯ್, ಮಂಜುನಾಥ್, ಶಂಕರ್, ಸೈಯದ್ ಅಲ್ತಾಪ್, ಸದಸ್ಯರು ಹಾಗೂ ಕುಟುಂಬದವರು ಭಾಗವಹಿಸಿದ್ದರು