ನೈಸರ್ಗಿಕ ಕೃಷಿಗೆ ಆದ್ಯತೆ ನೀಡಿ: ಡಾ. ಎಸ್.ಎಸ್. ಅಂಗಡಿ
ಸAಜೆವಾಣಿ ವಾರ್ತೆ,
ವಿಜಯಪುರ,ಜು.೩೦:ನಗರ ಹೊರವಲಯದ ಹಿಟ್ನಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ೧೫ ದಿವಸಗಳ ಸಮಗ್ರ ಪೋಷಕಾಂಶ ನಿರ್ವಹಣೆ ಸರ್ಟಿಫಿಕೇಟ್ ಕೋರ್ಸನ ಉದ್ಘಾಟನಾ ಸಮಾರಂಭ ಜರುಗಿತು.
ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಸ್. ಎಸ್. ಅಂಗಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಪೂರ್ವಜ್ಜರು ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿ ಕೃಷಿ ಮಾಡುತ್ತಿದ್ದರು. ಅವರಿಗೆ ಯಾವುದೇ ಸಮಸ್ಯೆಯಿರಲಿಲ್ಲ. ಏಕೆಂದರೆ ಅವರು ಹೇರಳವಾಗಿ ತಿಪ್ಪೆಗೊಬ್ಬರ, ಕೃಷಿ ತ್ಯಾಜ್ಯ ಭೂಮಿಗೆ ಬಳಸುತ್ತಿದ್ದರು. ಆದರೆ ಹಸಿರು ಕ್ರಾಂತಿ ಸಂದರ್ಭದಲ್ಲಿ ಹೆಚ್ಚಿಗೆ ಇಳುವರಿ ತೆಗೆಯಲು ಅಧಿಕ ರಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕ ಬಳಸಿದ್ದರಿಂದಾಗಿ ಭೂಮಿಯ ಫಲವತ್ತತೆ ಕುಂಠಿತಗೊAಡಿತ್ತು. ಈಗ ಮಣ್ಣನ್ನು ಸಂರಕ್ಷಿಸಲು ಮತ್ತೆ ನಾವು ಹಳೆಯ ಪದ್ಧತಿಯನ್ನು ಅನುಸರಿಸಬೇಕಾಗಿದೆ ಎಂದರು.
ತರಬೇತಿ ಪಡೆದ ನಂತರ ರೈತರಿಗೆ ಸೂಕ್ತ ಸಲಹೆಗಳನ್ನು ನೀಡುವುದರ ಜೊತೆಗೆ ಸಾವಯವ ಮತ್ತು ಜೈವಿಕ ಗೊಬ್ಬರಗಳ ಬಳಕೆ, ಮಣ್ಣು ಮತ್ತು ನೀರು ಸಂರಕ್ಷಣೆ ಬೆಳೆ ಪರಿವರ್ತನೆ, ಕೃಷಿ ಯಂತ್ರೋಪಕರಣಗಳ ಬಳಕೆ ಇತ್ಯಾದಿ ಕುರಿತಂತೆ ರೈತರಿಗೆ ಕಾಲ ಕಾಲಕ್ಕೆ ಮಾರ್ಗದರ್ಶನ ಮಾಡಬೇಕೆಂದರು.
ಕೃಷಿ ಮಹಾವಿದ್ಯಾಲಯ ಡೀನ್ ಡಾ. ಎ. ಭೀಮಪ್ಪ ಮಾತನಾಡಿ, ಕೃಷಿ ಇಲಾಖೆಯು ಸುಸ್ಥಿರ ಕೃಷಿ ಹಾಗೂ ಲಾಭದಾಯಕವಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ವಿಶೇಷವಾಗಿ ಯುವಕರನ್ನು ಕೃಷಿಯೆಡೆಗೆ ಆಕರ್ಷಿಸಬೇಕಾಗಿದೆ. ಕಾರಣ ಇಲಾಖೆಯು ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾಗಿದೆ. ರೈತರಿಗೆ ಭೂಫಲವತ್ತತೆ, ಸಮಗ್ರ ಪೋಷಕಾಂಶಗಳ ನಿರ್ವಹಣೆಗಾಗಿ ಸೂಕ್ತ ರಸಗೊಬ್ಬರಗಳನ್ನು ಶಿಫಾರಸ್ಸು ಪ್ರಮಾಣದಲ್ಲಿ ಬಳಸಲು ಸಲಹೆ ನೀಡಬೇಕಾಗಿದೆ. ಕಾರಣ ಈ ತರಬೇತಿಯಿಂದ ತಾವೆಲ್ಲ ರೈತರಿಗೆ ಸೂಕ್ತ ಮಾಹಿತಿ ಜೊತೆಗೆ, ಉತ್ತಮ ಗುಣಮಟ್ಟದ ರಸಗೊಬ್ಬರ ಪೂರೈಸಲು ಸಲಹೆ ನೀಡಿದರು.
ರಾಜ್ಯ ನೋಡಲ್ ಅಧಿಕಾರಿ ಡಾ. ಗೋಪಾಲ ಎಮ್. ಮಾತನಾಡಿ, ಕೇಂದ್ರ ಸರ್ಕಾರವು ಈಗಿನ ಸಹಕಾರಿ ಪ್ರಾಥಮಿಕ ಕೃಷಿ ಪತ್ತಿನ ಕೇಂದ್ರಗಳನ್ನು ಪ್ರಧಾನ ಮಂತ್ರಿ ಕೃಷಿ ಸಮೃದ್ಧಿ ಯೋಜನೆಯಡಿಯಲ್ಲಿ ಒನ್ ಸ್ಟಾಪ್ ಶಾಪ್ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿ ಅವುಗಳ ಮೂಲಕ ರೈತರಿಗೆ ಬೀಜ, ಔಷಧಿ, ಗೊಬ್ಬರಗಳನ್ನು ಮಾರಾಟ ಮಾಡಿ ಜೊತೆಗೆ ತಾಂತ್ರಿಕ ಸಲಹೆ ನೀಡುವ ಗುರಿ ಹೊಂದಿದ್ದರ ಪ್ರಯುಕ್ತ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ ಮಾತನಾಡಿ, ಮಣ್ಣು ಪರೀಕ್ಷೆ ಆಧಾರದ ಮೇಲೆ ರೈತರಿಗೆ ರಸಗೊಬ್ಬರ ವಿತರಿಸಬೇಕು ಎಂದರಲ್ಲದೆ ರೈತರಿಗಾಗಿ ಹವಾಮಾನ ಸಲಹೆ, ಕೃಷಿ ಮಾಹಿತಿ ಒಳಗೊಂಡAತೆ ಎಲ್ಲ ಮಾಹಿತಿಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಿಬ್ಬಂದಿಗಳಿಗೆ ಒದಗಿಸಲು ಕ್ರಮವಹಿಸಲಾಗುವುದೆಂದರು.
ಅಧ್ಯಕ್ಷತೆ ವಹಿಸಿದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ೧೫ ದಿನಗಳ ತರಬೇತಿ ಅವಧಿಯಲ್ಲಿ ವಿವಿಧ ಸಸ್ಯ ಪೋಷಕಾಂಶಗಳು, ಮಣ್ಣು ಮತ್ತು ನೀರಿನ ಮಾದರಿ ಸಂಗ್ರಹಣೆ, ಪ್ರಾಯೋಗಿಕ ಎರೆಗೊಬ್ಬರ ತಯಾರಿಕೆ, ರಸಗೊಬ್ಬರಗಳನ್ನು ಮತ್ತು ಮಣ್ಣು ಸುಧಾರಕಗಳನ್ನು ಗುರುತಿಸುವುದು, ಮಣ್ಣಿನಲ್ಲಿ ಲಘು ಪೋಷಕಾಂಶಗಳ ವಿಶ್ಲೇಷಣೆ ಹಾಗೂ ರಸಗೊಬ್ಬರಗಳ ಲೆಕ್ಕಾಚಾರ ಇತ್ಯಾದಿ ವಿಷಯಗಳನ್ನು ನೀಡಲಾಗುವುದು. ಕಾರಣ ಎಲ್ಲರೂ ಸಮಯಕ್ಕನುಸಾರವಾಗಿ, ಕಡ್ಡಾಯವಾಗಿ ತರಬೇತಿಯಲ್ಲಿ ಭಾಗವಹಿಸಬೇಕೆಂದರು.
ಡಾ. ಎಸ್. ಎಂ. ವಸ್ತçದ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶ್ವೇತಾ ಮನ್ನಿಕೇರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಸನ್ನ ಪಿ. ಎಮ್. ಸ್ವಾಗತಿಸಿದರು. ಡಾ. ಕಿರಣಸಾಗರ ಡಿ. ವಂದಿಸಿದರು.
ಜಿ.ಪಂ. ಎನ್.ಆರ್.ಎಲ್.ಎಮ್. ವ್ಯವಸ್ಥಾಪಕ ಅಂಕಿತ ಜಾಧÀವ, ವಿಜ್ಞಾನಿಗಳಾದ ಡಾ. ವಿಜಯಲಕ್ಷಿö್ಮÃ ಮುಂದಿನಮನಿ, ಡಾ. ಶಿವರಾಜ ಕಾಂಬಳೆ, ಸಿಬ್ಬಂದಿ ಶ್ರೀಶೈಲ ರಾಠೋಡ, ಶ್ರೀದೇವಿ ಗೌಡನ್ನವರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಆಹ್ವಾನಿತರು ಉಪಸ್ಥಿತರಿದ್ದರು.