ಕೃಷಿರಂಗ ಉಳಿಯಲು ಯುವಕರು ಕೃಷಿಯತ್ತ ಮುಖ ಮಾಡಬೇಕು: ಡಾ. ರವೀಂದ್ರ ಬೆಳ್ಳಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೩೦: ಇಂದು ನೌಕರಿಯನ್ನು ಅರಿಸುತ್ತಾ ಯುವಕರು ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಇದರಿಂದಾಗಿ ಯುವ ಜನತೆ ಕೃಷಿಯಿಂದ ವಿಮುಖರಾಗುತ್ತಿರುವುದು ವಿಷಾದನೀಯ. ಯುವಕರು ಕೃಷಿ ಉಳಿಸಲು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ವಿಜಯಪುರ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ಜಿಲ್ಲೆಯ ನಿಡಗುಂದಿ ತಾಲೂಕಿನ ಬೀರಲದಿನ್ನಿ ಗ್ರಾಮದಲ್ಲಿ ಶ್ರೀ ಚ.ಚ. ಹೆಬ್ಬಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು, ಗೊಳಸಂಗಿಯಿAದ ಹಮ್ಮಿಕೊಂಡ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯಿಂದಾಗಿ ಅನೇಕ ಅವಿಷ್ಕಾರಗಳಾಗಿವೆ. ಕೃಷಿಯ ಜೊತೆಗೆ ಉಪಕಸಬುಗಳಾದ ಹೈನುಗಾರಿಕೆ, ಆಡು, ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ, ಮೀನು ಸಾಕಾಣಿಕೆ, ರೇಷ್ಮೆ ಕೃಷಿಯ ಮೂಲಕ ಲಾಭ ಗಳಿಸಬಹುದಾಗಿದೆ. ಶೇ. ೮೦ ರಷ್ಟು ಜನ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ಕೃಷಿಯೇ ಅವರ ಮೂಲ ಕಸಬಾಗಿದೆ. ಯುವಜನರು ಕೇವಲ ನೌಕರಿಗಾಗಿ ಆಸೆ ಪಡದೆ ನಮ್ಮ ಪೂರ್ವಜ್ಜರ ಕಸುಬಾದ ಕೃಷಿಯನ್ನು ಮುನ್ನಡಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಕಾರಣ ಯುವ ಪೀಳಿಗೆ ಕೃಷಿ ವಿವಿ ಮತ್ತು ಇಲಾಖೆಗಳಿಗೆ ಭೇಟಿ ಕೊಟ್ಟು ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಕೃಷಿಯನ್ನು ಲಾಭದಾಯಕ ಉದ್ಯೋಗವನ್ನಾಗಿ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಚಂದ್ರಪ್ಪ ಮಾದರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತಿ ಸದಸ್ಯ ಶಿವಾನಂದ ಹೊನ್ನಾಳ, ಪ್ರಗತಿಪರ ರೈತರಾದ ಅಶೋಕ ಗುಡದಿನ್ನಿ, ಪ್ರಭುಗೌಡ ಪಾಟೀಲ, ಆನಂದ ಚೌಧರಿ, ಕೆ.ಎಲ್. ದಶವಂತ, ಗ್ರಾಮದ ಹಿರಿಯರಾದ ಶೇಖಪ್ಪ ಪೂಜಾರಿ, ಶಾಂತಗೌಡ ಬಿರಾದಾರ, ಹನಮಂತ ಕೆಂಚರೆಡ್ಡಿ, ಪ್ರೊ. ಸುಭಾಸ ಡಿ. ಸೇರಿದಂತೆ ರಾಷ್ಟಿçÃಯ ಸೇವಾ ಯೋಜನೆಯ ಶಿಬಿರಾರ್ಥಿಗಳು, ರೈತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.