ವಿದ್ಯಾರ್ಥಿಗಳು ಜಾಲತಾಣಗಳ ಕಡೆಗೆ ಹೆಚ್ಚಿನ ಗಮನ ನೀಡಬೇಡಿ: ಬಗಲಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೩೦: ವಿಜಯಪುರ ನಗರದಲ್ಲಿ ಜಿಲ್ಲಾ ಕುರಬ ನೌಕರ ಸಂಘದ ವತಿಯಿಂದ ಪÀ್ರತಿ ವರ್ಷದಂತೆ ಈ ವರ್ಷವೂ ೨೦೨೩-೨೦೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಅತಿ ಹೆಚ್ಚು ಅಂಕ ಪಡೆದ ವಿಜಯಪುರ ಜಿಲ್ಲೆಯ ಎಲ್ಲ ಹಾಲುಮತ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಹೊಸದಾಗಿ ಸೇವೆಗೆ ಸೇರಿದ ನೌಕರರರಿಗೆ ಹಾಗೂ ವಯೋ ನಿವೃತ್ತಿ ಹೊಂದಿದ ನೌಕರರ ಅಭಿನಂದನಾ ಸಮಾರಂಭ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಹಾಲುಮತ ನೌಕರರ ಸಂಘ ಸಂಸ್ಥಾಪಕÀ ಚಂದ್ರಶೇಖರ ಬಗಲಿ ಮಾತನಾಡಿ, ಪ್ರತಿ ವರ್ಷವೂ ಜಿಲ್ಲಾ ಕುರುಬರ ಸಂಘದ ವತಿಯಿಂದ ಕುರುಬರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿರುವದು ಅತೀವ ಸಂತಸವನ್ನುAಟು ಮಾಡಿದೆ. ಇಂತಹ ಪುರಸ್ಕಾರದಿಂದ ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತದೆ. ಸಮಾದ ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿಯು ತಮ್ಮ ಶೈಕ್ಷಣಿಕ ಜೀವನದಲ್ಲಿ ಉನ್ನತ ಮಟ್ಟದಿಂದ ಉನ್ನತವಾದ ಹುದ್ದೆ ಅಲಂಕರಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಸಹ ಇಂದಿನ ಜಾಲತಾಣಗಳ ಕಡೆಗೆ ಹೆಚ್ಚಿನ ಗಮನ ನೀಡದೇ ತಮ್ಮ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಮಧ್ಯ ಭಾಗದಲ್ಲಿ ಸಂತ ಶ್ರೇಷ್ಠ ಕನಕದಾಸರ ಭವ್ಯ ಪುತ್ಥಳಿ ನಿರ್ಮಾಣವಾಗಲು ಕಾರಣಿಕರ್ತರಾದ ವಿಜಯಪುರ ನಗರ ಘಟಕದ ಕುರಬ ಸಂಘದ ಪದಾಧಿಕಾರಿಗಳಾದ ರಾಜು ಕಗ್ಗೋಡ, ಸುರೇಶ ಡೊಂಬಾಳೆ, ಮಾಂತೇಶ ಬೇವೂರ, ರಮೇಶ ಕಾಲೇಬಾಗ, ಮಹಾಂತೇಶ ಗುಗದಡ್ಡಿ ಅವರಿಂದ ವಿಜಯಪುರ ಜಿಲ್ಲಾ ಕುರಬ ಹಾಲುಮತ ನೌಕರ ಸಂಘ ಸ್ಥಾಪನೆಯಾಗುವಲ್ಲಿ ಕಾರಣಿಕರ್ತರಾದ ಚಂದ್ರಶೇಖರ ಬಗಲಿ ಸಂಸ್ಥಾಪಕ, ನಿಕಟಪೂರ್ವ ಅಧ್ಯಕ್ಷರು ಹಾಗೂ ಹಾಲಿ ಅಧ್ಯಕ್ಷ ಹಣಮಂತ ಸಂಖ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.