ದೈಹಿಕ ಶಿಕ್ಷಕರ  ಮಿಲಾಪ ಶಿಬಿರ
ಸಂಜೆವಾಣಿ ವಾರ್ತೆ
ಜಗಳೂರು.ಜು.೩೦: ಭಾರತ ಸೇವಾದಳ ದಾವಣಗೆರೆ ಜಿಲ್ಲೆ, ಭಾರತ ಸೇವಾದಳ ತಾಲೂಕು ಸಮಿತಿ  ಜಗಳೂರಿನ, ಸಾರ್ವಜನಿಕ ಶಿಕ್ಷಣ ಇಲಾಖೆ ಜಗಳೂರು ಇವರ ನೇತೃತ್ವದಲ್ಲಿ ತಾಲೂಕಿನ ದೈಹಿಕ ಶಿಕ್ಷಕರ  ಮಿಲಾಪ ಶಿಬಿರ ಮತ್ತು ಪುನಶ್ಚೇತನ ಶಿಬಿರವನ್ನು ಇಲ್ಲಿನ ಗುರುಭವನದಲ್ಲಿ ಏರ್ಪಡಿಸಲಾಗಿತ್ತು. ಜಿಲ್ಲಾ ಅಧ್ಯಕ್ಷರಾದ ಪ್ರೊ.ಚನ್ನಪ್ಪ ಪಲ್ಲಾಗಟ್ಪೆ ಅಧ್ಯಕ್ಷತೆ ವಹಿಸಿದ್ದರು.  ಉದ್ಘಾಟನೆ ಮಾಡಿದ ತಾಲೂಕು ಸೇವಾದಳದ ಅಧ್ಯಕ್ಷ ರಾಜು ಎನ್.ಎಸ್. ಮುಖ್ಯ ಅತಿಥಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್ ರೆಡ್ಡಿ, ಸೇವಾದಳದ ತಾಲ್ಲೂಕು  ಶಾಖಾನಾಯಕರಾದ ಪ್ರಸನ್ನಕುಮಾರ್ ಎ, ಬಿ.ಎಂ.ವಿಜಯಲಕ್ಷ್ಮಿ ಮತ್ತು ತಾಲ್ಲೂಕಿನ ಸೇವಾದಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.