ಅಸ್ಮಾಕಂ ಸಂಸ್ಕೃತಂ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.29: ನಗರದ  ಶ್ರೀಮದ್ ಜಗದ್ಗುರು ರೇಣುಕಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಇಂದು  “ಅಸ್ಮಾಕಂ ಸಂಸ್ಕೃತಂ” ಎಂಬ ಸಂಸ್ಕೃತ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮೋಹನ್ ಚೌದರಿ ಮೆರವೇರಿಸಿದರು. ಶಾಲೆಯ ಮುಖ್ಯ ಗುರು  ಎಂ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. 
ಸಂಯೋಜಕ ಮಹಾಂತೇಶ್ ಇವರು ಸಂಸ್ಕೃತ ವರ್ಣಮಾಲೆಗಳ ಉಚ್ಚಾರಣೆಯಿಂದ ಆಗುವ ಪ್ರಾಣಯಾಮವನ್ನು ವಿವರಿಸುವುದರ ವಿಷಯವಾಗಿ ಉಪನ್ಯಾಸ ನಡೆಸಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ಶಾಸ್ತ್ರಿಗಳು ನಿವೃತ್ತ ಸಂಸ್ಕೃತ ಮುಖ್ಯಗುರುಗಳು ಹಾಗೂ ಸಂಸ್ಕೃತ ಭಾರತೀಯ ಉತ್ತರ ಕರ್ನಾಟಕ ಪ್ರಾಂತ್ಯದ ಉಪಾಧ್ಯಕ್ಷ ಇವರು  ಸಂಸ್ಕೃತ ಭಾಷೆಯ ಮಹತ್ವವನ್ನು ವಿವರಿಸಿದರು ನಿರೂಪಣೆಯನ್ನು  ಬಿ.ಎಸ್.ನಾಗರತ್ನ ಸಹ ಶಿಕ್ಷಕಿ.  ಡಿ ದ್ಯಾಮಪ್ಪ ದೇಸಾಯಿ ಸಹಶಿಕ್ಷಕರು ಹಾಗೂ ಕಲಬುರ್ಗಿ ವಿಭಾಗದ ವಿಷಯ ಪರೀಕ್ಷಕರು
ವಂದನಾರ್ಪಣೆಯನ್ನು ನಡೆಸಿಕೊಟ್ಟರು