ವೀರಶೈವ ಸಮುದಾಯದ ಏಳಿಗೆಗೆಹಾನಗಲ್ಲು ಶ್ರೀಗಳ‌ ಕೊಡುಗೆ ಸ್ಮರಣೀಯ; ಶ್ರೀರಾಮುಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.29: ಹಾನಗಲ್ಲು ಶ್ರೀಗಳು ಶತಮಾನದ ಹಿಂದೆಯೇ ವೀರಶೈವ ಲಿಂಗಾಯತ ಸಮಾಜವನ್ನು ಕಟ್ಟುವ, ಧರ್ಮ ರಕ್ಷಣೆ ಕಾರ್ಯವನ್ನು ವೀರಶೈವ ಲಿಂಗಾಯತ ಮಹಾಸಭೆಯನ್ನು ಸ್ಥಾಪಿಸುವ ಮೂಲಕ ಮಹತ್ ಕಾರ್ಯ ಮಾಡಿದ್ದಾರೆಂದು
ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಅವರು ನಿನ್ನೆ ಸಂಜೆ ನಗರದ ಕೊಟ್ಟೂರು ಸ್ವಾಮಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಾನಗಲ್ಲು ಶ್ರೀಗಳು ಮತ್ತು ಸಂಗನಬಸವ ಶ್ರೀಗಳ ಜಯಂತಿ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಶ್ರೀಗಳು ಜಂಗಮ ಸಮುದಾಯದ ಮೂಲಕ ಧರ್ಮ ರಕ್ಷಣೆಯ ಕಾರ್ಯಕ್ಕೆ ಮುಂದಾದರು. ಅವರ ಈ ಕಾರ್ಯ ಲಿಂಗಾಯತ ಸಮುದಾಯ ಉತ್ತಮ ಶಿಕ್ಷಣ ಪಡೆಯಲು ಶಿಕ್ಷಣ ಸಂಸ್ಥೆಗಳು ಜನ್ಮ ತಳೆಯಲು ಕಾರಣ ವಾಯ್ತು. ಅಂತಹ ಸಂಸ್ಥೆಗಳಲ್ಲಿ ವೀರಶೈವ ವಿದ್ಯಾವರ್ಧಕ ಸಂಘವೂ ಒಂದಾಗಿದೆ. ಇದರ ಮೂಲಕ ಎಲ್ಲ ವರ್ಗದ ಜನರೂ ಈ ಭಾಗದಲ್ಲಿ ಶಿಕ್ಷಣ ಪಡೆಯುಂತಾಯಿತು ಎಂದರು.
ಕೊಟ್ಟೂರು ಸಂಸ್ಥಾನ ಮಠದ ಶ್ರಿಗಳು ಆಶಿರ್ವಚನ ನೀಡಿ, ಯಾವ ಒಬ್ಬ ಗುರುವಿನಿಂದ ಅಜ್ಞಾನ, ದುಸ್ಥರವಾದ ಜೀವನ ದೂರವಾಗುವಂತೆ ಮಾಡುವಾತನೇ ಗುರುವು ಅಂತಹ ಶಜ್ತಿ ಇದ್ದುದು ಹಾನಗಲ್ಲು ಶ್ರೀಗಳು. ಅವರು ನಾಡಿನಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ಈ‌ನಾಡಿಗೆ ಶಿಕ್ಷಣ ದಾಸೋಹಿಗಳಾದರು. ಮಠಗಳು, ಭಕ್ತರು ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟರು. ಜನರಿಗೆ ಸಮಾಜ ಸೇವೆ ಮಾಡುವುದನ್ನು ತೋರಿಸಿಕೊಟ್ಟರು. ಅವರ ಸ್ಮರಣೆಯಿಂದ ನಾವೆಲ್ಲ ಸಮಾಜ ಸೇವೆಗೆ ಮುಂದಾಗಬೇಕು.  ಇಂದು ಇಲ್ಲಿ ನಡೆದ ಕಾರ್ಯಕ್ರಮ ಸಜ್ಜನರ ಸಮಾವೇಶ ಇಲ್ಲಿ ಎಲ್ಲರೂ ಸಮಾನರು ಇಂದಿನ ಪಾದಯಾತ್ರೆ ಮೂಲಕ ಪಡೆದ ಆನಂದ ಅವಿಸ್ಮರಣೀಯ ಎಂದರು.
ವೇದಿಕೆಯಲ್ಲಿ ಸೋಮಸಮುದ್ರ, ಶ್ರೀಧರಗಡ್ಡೆ, ಕುರುಗೋಡು, ಬೂದುಗುಂಪ ಮೊದಲಾದ  ಗ್ರಾಮಗಳ ಕೊಟ್ಟೂರು ಶಾಖಾ ಮಠಾಧೀಶರು, ಸಮುದಾಯದ ಮುಖಂಡರುಗಳಾದ ಹಾವಿನಾಳ್ ಶರಣಪ್ಪ, ಬಿ.ವಿ.ಬಸವರಾಜ್,
ಎಸ್.ಗುರುಲಿಂಗನಗೌಡ, ಮಹೇಶ್ವರಸ್ವಾಮಿ, ನಿಷ್ಟಿ ರುದ್ರಪ್ಪ, ಪತ್ರಕರ್ತ ಎನ್‌ವೀರಭದ್ರಗೌಡ,  ಸಿರುಗುಪ್ಪ ಚೆನ್ನ ಬಸವನ ಗೌಡ, ಜೆ.ಎಸ್.ವೀರೂಪಾಕ್ಷ, ಮಸೀದಿಪುರ ಸಿದ್ರಾಮನಗೌಡ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ, ನರೇಂದ್ರಬಾಬು ಮಿಂಚೇರಿ, ಎಸ್.ಮಲ್ಲನಗೌಡ,  ಬಿ.ಟಿ.ಪಾಟೀಲ್ ಮೊದಲಾದವರು ಇದ್ದರು.
ಇದಕ್ಕೂ ಮುನ್ನ ಹಾನಗಲ್ಲು ಶ್ರೀಗಳ ಪ್ರವಚನದ ಮಂಗಲದ ಕಾರ್ಯ ನಡೆಯಿತು.
ಕೊನೆಯಲ್ಲಿ ಶ್ರೀಧರಗಡ್ಡೆಯ ಸಂಗನಬಸವ ಶ್ರೀಗಳ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯುತು. ಬಂಡ್ರಾಳ್ ಮೃತ್ಯುಂಜಯ ಸ್ವಾಮಿ ಸ್ವಾಗತ ಮತ್ತು  ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಮಹಿಳೆಯರಿಂದ ಇಂದು ರಥೋತ್ಸವ:
ಇಂದು ಮಧ್ಯಾಹ್ನ 3 ಗಂಟೆಗೆ 1111 ಮಹಿಳೆಯರಿಗೆ ಉಡಿತುಂಬುವ ಮತ್ತು ನಂತರ ನೂತನ ರಥೋತ್ಸವ ಮಹಿಳೆಯರಿಂದಲೇ ಎಳೆಯಲಾಗುತ್ತದೆ. ಮಠದಿಂದ ಗವಿಯಪ್ಪ ಸರ್ಕಲ್ ನ ಬಸವೇಶ್ವರ ವೃತ್ತದ ವರೆಗೆ ರಥೋತ್ಸವ ನಡೆಯಲಿದೆ.