ರಕ್ತ ಹೀನತೆ ಹೋಗಲಾಡಿಸುವುದೆ ಪೋಷಣಾ ಅಭಿಯಾನ ಉದ್ದೇಶ
ಬೀದರ್:ಸೆ.29: ಬೀದರ ತಾಲ್ಲೂಕಿನ ಸಿರ್ಸಿ (ಎ) ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಪೋಷಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯಕುಮಾರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಈ ಪೋಷಣಾ ಅಭಿಯಾನ ಮಕ್ಕಳಲ್ಲಿ ಮತ್ತು ಗರ್ಭಣಿಯರಲ್ಲಿ ಜಾಗೃತಿ ಮೂಡಿಸಬೇಕು. ಅದೇರೀತಿ ಅವರಿಗೆ ಆಪೌಷ್ಠಿಕತೆ ಮತ್ತು ರಕ್ತ ಹೀನತೆ ಹೊಗಲಾಡಿಸುವುದೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಗ್ದಲ್ ವಲಯ ಮೇಲ್ವಿಚಾರಕಿ ಕುರುಣಾ ಭಂಕೂರ ಮತಾನಾಡಿ ಈ ರಾಷ್ಟ್ರೀಯ ಪೋಷಣಾ ಅಭಿಯಾನದ ಅಡಿಯಲ್ಲಿ ಬರುವ ಎಲ್ಲಾ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಲು ಜಾಗೃತಿ ಮೂಡಿಸಬೇಕಾಗಿದೆ. ಭಾರತವನ್ನು ಅಪೌಷ್ಠಿಕತೆ ಮುಕ್ತ ಭಾರತವನ್ನಾಗಿ ಮಾಡಲು ಪ್ರತಿಯೊಬ್ಬರ ಕೈಜೋಡಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿ ಎಂದರು. ಹಾಗೂ ಈ ಯೋಜನೆಯ ಮುಖ್ಯ ಗುರಿ ಮಕ್ಕಳಲ್ಲಿ ಉಂಟಾಗುವ ಕುಂಠಿತ ಬೆಳವಣಿಗೆಯನ್ನು ತಡೆಗಟ್ಟುವುದು ಹಾಗೂ ಕಡಿಮೆಗೊಳ್ಳಿಸುವುದು. ಚಿಕ್ಕ ಮಕ್ಕಳಲ್ಲಿ ಉಂಟಾಗುವ ರಕ್ತ ಹೀನತೆಯನ್ನು ಕಡಿಮೆಗೊಳಿಸುವುದು ಹಾಗೂ ಕಡಿಮೆ ತೂಕದ ಶಿಸುಗಳ ಜನನ ಮಟ್ಟವನ್ನು ಕಡಿಮೆ ಗೊಳಿಸುವುದು ಹೀಗೆ ಹಲವಾರು ಯೋಜನೆಗಳನ್ನು ಮಕ್ಕಳು ಹಾಗೂ ಗರ್ಭಣಿಯರು ಉಪಯೋಗವನ್ನು ಪಡೆದುಕೊಳಬೇಕು ಎಂದು ಹೇಳಿದರು. ಹಾಗೂ ದಿನನಿತ್ಯ ಮಕ್ಕಳು ಗರ್ಭಣಿಯರು ಸರಿಯಾದ ಹಸಿ ತರಕಾರಿ ಸೊಪ್ಪು, ಮೊಳಕೆ ಕಾಳುಗಳು, ಹಾಲು, ಮೊಟ್ಟೆ ಸೇವಿಸಿ ಆರೋಗ್ಯವಚಿತರಾಗಿರಬೇಕು ಇಲ್ಲದಿದ್ದರೆ ಮಕ್ಕಳಲ್ಲಿ ಪರಿಣಾಮ ಬೀರಿ ಅನೇಕ ರೋಗಗಳಿಗೆ ತುತ್ತಾಗುವ ಸಂಭವವಿರುತ್ತದೆ ಎಂದು ಹೇಳಿದರು.
ಅದೇರೀತಿ ಆಯುಷ್ಯ ಇಲಾಖೆ ಡಾ. ವೈಶಾಲಿ ಮಾತನಾಡಿ ಮಗುವಿಗೆ ತಾಯ ಎದೆ ಹಾಲೆ ಅತ್ಯುನ್ನತ ಪೌಷ್ಠಿಕ ಆಹಾರ ಅದರಿಂದ ತಾಯಂದಿರು ತಮ್ಮ ಮಗುವಿಗೆ ಸತತ ಆರು ತಿಂಗಳವರೆಗೆ ಎದೆ ಹಾಲು ಉಣಿಸಬೇಕು ಇದರಿಂದ ಮಕ್ಕಳಲ್ಲಿ ಉತ್ತಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಆಗಲು ಸಾದ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ ಅಧ್ಯಕ್ಷರಾದ ಶಾಂತಮ್ಮಾ ಜಾಣೆ, ಕಾರ್ಯದರ್ಶಿಯಾದ ಸ್ವಾಮಿದಾಸ, ಶಾಲೆಯ ಮುಖ್ಯೋಪಧ್ಯಾರಾದ ಶಿವರಾಜ ಕಮಲಾಪೂರೆ, ಎ.ಎನ್.ಎಮ್. ವಿಜಯಲಕ್ಷ್ಮಿ, ಕಲ್ಪನಾ, ಗೌರಮ್ಮಾ, ಸುಜಾತಾ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ, ಮಕ್ಕಳು, ಗರ್ಭಣಿಯರು ಉಪಸ್ಥಿತರಿದ್ದರು.