ಸದೃಢ ದೇಹಕ್ಕೋಸ್ಕರ ಸದೃಢ ಹೃದಯ ಬೇಕು; ನಟಿ ಅಧಿತಿ ಪ್ರಭುದೇವ
ಸಂಜೆವಾಣಿ ವಾರ್ತೆ
ದಾವಣಗೆರೆ, ಸೆ. 29; ಈ ವಿಶ್ವ ಹೃದಯ ದಿನದ ನಡಿಗೆ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುವುದು ಬೇಡ, ಇದು ನಿರಂತರವಾಗಿರಲಿ. ನಿಮಗೆ ಇಷ್ಟವಾದ ಚಿತ್ರಕಲೆ, ಹಾಡು, ನೃತ್ಯ ಇರಲಿ, ನಿಮ್ಮ ಮನಸ್ಸಿನ್ನು ಉಲ್ಲಾಸಭರಿತವಾಗಿ ಇಟ್ಟುಕೊಳ್ಳಲು ಏನು ಕಲಿಯಬೇಕೋ ಅದೆಲ್ಲವನ್ನೂ ಕಲಿತು ಖುಷಿಯಾಗಿರಿ ಎಂದು ಚಲನಚಿತ್ರ ನಟಿ, ದಾವಣಗೆರೆಯ ಅಧಿತಿ ಪ್ರಭುದೇವ ಹೇಳಿದರು.  ನಗರದ ಮೋತಿ ವೀರಪ್ಪ ಕಾಲೇಜು ಸಮೀಪ ಇರುವ ಎಸ್‌ಎಸ್‌ಐಎಂಎಸ್ ಅಂಡ್ ರೀಸರ್ಚ್ ಸೆಂಟರ್ ಆವರಣದಲ್ಲಿ  ಬೆಳಿಗ್ಗೆ ಎಸ್‌ಎಸ್ ನಾರಾಯಣ ಹೃದಯಾಲಯದಿಂದ ಯೂಸ್ ಆಕ್ಷನ್ ಫಾರ್ ಹಾರ್ಟ್ ಧ್ಯೇಯವಾಕ್ಯದೊಂದಿಗೆ ಆಯೋಜಿಸಿದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಸ್ಯಹಾರಕ್ಕೆ ನಾವು ಹೊಂದಿಕೊಳ್ಳುವುದರಿಂದ ಬಹಳಷ್ಟು ಬದಲಾವಣೆಗಳನ್ನು ನಮ್ಮ ದೇಹದಲ್ಲಿ ಕಾಣಬಹುದು. ಏನೇ ತಿಂದರೂ ಮಿತವಾಗಿ ತಿನ್ನಿರಿ. ಸದೃಢವಾದ ದೇಹಕ್ಕೋಸ್ಕರ ಸದೃಢವಾದ ಹೃದಯ ಇರಬೇಕು. ಅದು ಇರಬೇಕೆಂದರೆ ಸದೃಢವಾದ ಮನಸ್ಸು ಇರಬೇಕು. ನಮ್ಮ ದೇಹದ, ನಮ್ಮ ಆಲೋಚನೆಗಳ ಬಗ್ಗೆ ಕಂಟ್ರೋಲ್ ಇರಬೇಕು. ಆಗ ಮಾತ್ರ ನಮ್ಮ ಬಾಡಿ, ನಮ್ಮ ಜೀವನ ಹತೋಟಿಗೆ ಬರುತ್ತದೆ. ವಿದ್ಯಾರ್ಥಿಗಳು, ವೈದ್ಯರು, ಅಧಿಕಾರಿಗಳು, ಕಾರ್ಮಿಕರು ಪ್ರತಿಯೊಬ್ಬರಿಗೂ ಕೂಡಾ ಒತ್ತಡ(ಸ್ಟೆçಸ್) ಎನ್ನುವುದು ಫ್ಯಾನ್ಸಿ ವರ್ಡ್ ಆಗಿದೆ. ನಮ್ಮ ಜೀವನದಲ್ಲಿ ಬಲವಾದ ನಂಬಿಕೆ ಇಟ್ಟುಕೊಂಡರೆ ನಮ್ಮ ಜೀವನ ಸೂಪರ್ ಆಗಿರುತ್ತದೆ. ಬೇರೆ ಯಾವ ಕೆಟ್ಟ ಆಲೋಚನೆ, ಆಹಾರ, ಅಭ್ಯಾಸ ಬೇಡ ಬರೀ ಒಳ್ಳೆತನವನ್ನು ನಮ್ಮ ಮನಸ್ಸಿನಲ್ಲಿ, ನಮ್ಮ ಹೃದಯದಲ್ಲಿ ತುಂಬಿಕೊAಡರೆ ನಮ್ಮ ಹೃದಯ ಪವಿತ್ರವಾಗಿ, ಆರೋಗ್ಯವಾಗಿ ಇರುತ್ತದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ, ವೈದ್ಯರು ಎಂದರೆ ದೇವರು ಎಂಬ ಭಾವನೆ ಇದೆ. ಹೃದಯ ಮಾನವದ ಒಂದು ಮುಖ್ಯ ಭಾಗವಾಗಿದೆ. ಹೃದಯಾಘಾತ ಆಗದೇ ಇರದೇ ರೀತಿ, ಆದಾಗ ಯಾವ ರೀತಿಯಾಗಿ ನಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ವಾಕಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಎಲ್ಲ ರೀತಿಯ ಜನರು ನಿತ್ಯ ಒತ್ತಡದ ಜೀವನ ನಡೆಸುತ್ತಿದ್ದಾರೆ. ಇದರಿಂದ ಹೃದಯಾಘಾತಗಳು ಆಗುವ ಸಂಭವವಿದೆ. ಪೌಷ್ಠಿಕಾಂಶಯುಕ್ತ ಆಹಾರ ಸೇವನೆ, ನಿತ್ಯ ಯೋಗ, ಧ್ಯಾನ ಮಾಡುವುದರಿಂದ, ದೈಹಿಕ ವ್ಯಾಯಾಮದಿಂದ ಇಂತಹ ಹೃದಯಾಘಾತದಂತಹ ಖಾಯಿಲೆಗಳನ್ನು ತಡೆಯಲು ಸಾಧ್ಯ ಎಂದರು.