ಲಿಂ. ಜಗದ್ಗುರು ಡಾ.ಮಹಾಂತ ಶಿವಾಚಾರ್ಯರ  ಜನ್ಮದಿನೋತ್ಸವ ಆಚರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೯; ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ  34ನೇ ವಾರ್ಡ್ ಘಟಕದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಘಟಕಗಳ ಸಹಯೋಗದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ಲಿಂಗೈಕ್ಯ ಜಗದ್ಗುರು ಡಾ.ಮಹಾಂತ ಶಿವಾಚಾರ್ಯರ 87ನೇ ಜನ್ಮದಿನೋತ್ಸವ ಆಚರಿಸಿ ನಂತರ ಪ್ರಸಾದ ವಿತರಣೆ ಮಾಡಲಾಯಿತು. ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಹಾಗೂ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷರಾದ ಬಿ.ಸಿ.ಉಮಾಪತಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಗೆ ಉಪಮೇಯರ್  ಸೋಗಿ ಶಾಂತಕುಮಾರ್, ಎಂ.ದೊಡ್ಡಪಪ್ಪ, ಶ್ರೀಧರ್, ಶಿವಶಂಕರ್, ಮಲ್ಲಿನಾಥ, ಶ್ರೀಮತಿ ಸುಷ್ಮಾ ಪಾಟೀಲ್, ಶ್ರಿಮತಿ ವೀಣಾ ನಟರಾಜ್ ಬೆಳ್ಳೂಡಿ, ಪಾರ್ವತಿ ಮತ್ತಿಹಳ್ಳಿ, ರಶ್ಮಿ ಕುಂಕೋದ್, ಸುರಶ್, ಶಿವಕುಮಾರ್, ಮಹೇಶ್ವರಪ್ಪ, ಬಸವರಾಜ್ ಉಚ್ಚಂಗಿದುರ್ಗ,ತಿಪ್ಪೇಸ್ವಾಮಿ,  ಚಂದ್ರಶೇಖರ್ ನೂಲಾ,ರಮೇಶ್, ಮತ್ತು ಹರ ಸೇವಾ ಸಂಸ್ಥೆ ಹಾಗೂ ಎಲ್ಲಾ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.