ಶಿವಕುಮಾರ ಎನ್ ಜಿಗೆ “ಸಮಾಜ ಸೇವಾ ರತ್ನ ರಾಷ್ಟ್ರಪ್ರಶಸ್ತಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೩೦; ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತ ನಿಧಿ ಕೇಂದ್ರದ ಸಂಯೋಜಕರಾಗಿ ವೃತ್ತಿ ಸೇವೆಯನ್ನು ಸಲ್ಲಿಸುತ್ತಿರುವ ಶಿವಕುಮಾರ ಎನ್ ಜಿ ಅವರ ಸಾಮಾಜಿಕ ಕಾರ್ಯಚಟುವಟಿಕೆ  ಗುರುತಿಸಿ *ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ(ರಿ.) ಬೆಂಗಳೂರು ಹಾಗೂ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ.) ಬೆಂಗಳೂರು ಸಹಯೋಗದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ, ಕನ್ನಡ ಭವನದ ನಯನ ಸಭಾಂಗಣ  ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಇವರಿಗೆ *”ಸಮಾಜ ಸೇವಾ ರತ್ನ ” ರಾಷ್ಟ್ರ ಪ್ರಶಸ್ತಿ* ಯನ್ನು ನೀಡಿ ಗೌರವಿಸಲಾಯಿತು. ಇವರ ಸಾಮಾಜಿಕ ಕಾರ್ಯಚಟುವಟಿಕೆಗಳು ಹೀಗೇ ಮುಂದುವರಿಯಲಿ ಎಂದು ಆತ್ಮ ಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ(ರಿ.) ಬೆಂಗಳೂರು ಹಾಗೂ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ.) ಬೆಂಗಳೂರು ಆಶಿಸಿದೆ.