ಜಿ.ಎಂ ವಿವಿಯಲ್ಲಿ ಉದ್ಯೋಗ ಕೌಶಲ್ಯಗಳು ತರಬೇತಿ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೩೦; ನಗರದ  ಜಿಎಂ ವಿಶ್ವವಿದ್ಯಾಲಯದ ಎಂಬಿಎ ಮತ್ತು ಎಂಕಾಂ ವಿಭಾಗದ ವಿದ್ಯಾರ್ಥಿಗಳಿಗೆ ಮೂರು ದಿನದ ಉದ್ಯೋಗ ಕೌಶಲ್ಯತೆಗಳು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು. ಈ ತರಬೇತಿ ಕಾರ್ಯಕ್ರಮವನ್ನು ಪುಣೆ ಮೂಲದ ಗ್ಲೋಬಲ್ ಟ್ಯಾಲೆಂಟ್ ಟ್ರ್ಯಾಕ್ ಸಂಸ್ಥೆಯ ಸಹಯೋಗದಲ್ಲಿ ನುರಿತ ತಜ್ಞರುಗಳಿಂದ ಉದ್ಯೋಗಕ್ಕೆ ಬೇಕಾದ ಕೌಶಲ್ಯತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಲು ಮತ್ತು ಆ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ತಕ್ಕಂತೆ ತಯಾರು ಮಾಡುವ ಗುರಿಯೊಂದಿಗೆ ಮೂರು ದಿನದ ತರಬೇತಿ ಕಾರ್ಯಕ್ರಮಕ್ಕೆ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಡೀನ್ ಡಾ ಬಸವರಾಜ್ ಸ್ವಾಮಿ ಚಾಲನೆಯನ್ನು ನೀಡಿದರು. ನುರಿತ ತರಬೇತಿ ತಜ್ಞರುಗಳಾದ  ದಾಮೋದರನ್,  ಧಾಮೋದರ್ ರಾವ್,  ಧ್ರುವ ಬಿನಾನಿ ಮತ್ತು  ಆದಿ ಕೇಶವ ಉಪಸ್ಥಿತರಿದ್ದರು, ತರಬೇತಿ ಕಾರ್ಯಕ್ರಮದ ಮಹತ್ವ ಮತ್ತು ಮುಂಬರುವ ಕಂಪನಿಗಳ ಬಗ್ಗೆ ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್  ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ವಿಭಾಗದ ನಿರ್ದೇಶಕರಾದ ಡಾ ಶಿವಕುಮಾರ್, ಪ್ಯಾಕಲ್ಟಿ ಆಫ್ ಕಾಮರ್ಸ್ ನಿರ್ದೇಶಕಿ ಡಾ ಶ್ವೇತ ಎಚ್ಎಸ್, ಎಂಬಿಯ ವಿಭಾಗದ ಮುಖ್ಯಸ್ಥರು ಡಾ ಬಸವರಾಜ್ ಪಿ ಎಸ್, ವಿಭಾಗದ ಎಲ್ಲಾ ಅಧ್ಯಾಪಕ ವರ್ಗದವರು  ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.