ಲಿಂಗಧಾರಣೆಯಿಂದ ದೇಹವೇ ದೇವಾಲಯ: ಕಾಶಿ ಜಗದ್ಗುರುಗಳು
ಕಲಬುರಗಿ ಜು.29: ದೇಹದ ಮೇಲೆ ಇಷ್ಟ ಲಿಂಗವನ್ನು ಧರಿಸುವ ದೇಹವು ದೇವಾಲಯದಷ್ಟು ಪವಿತ್ರವಾಗುತ್ತದೆ. ಎಂಬ ವಿಚಾರವನ್ನು ಕಾಶಿ ಜಗದ್ಗುರು ಡಾ. ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಸೊಗಸನಗೇರಿಯ ಶ್ರೀ ಗುರುಶಾಂತ ಲೀಂಗೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಸಿದ್ಧಾಂತಶಿಖಾಮಣಿಯ ಪ್ರವಚನ ಕಾರ್ಯಕ್ರಮದ ಆರ್ಶೀವಚನ ನೀಡಿದ ಅವರು, ಭೂಮಿಯ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದರೆ, ಆ ಭೂಮಿಯು ಒಂದು ಪವಿತ್ರವಾದ ಕ್ಷೇತ್ರವಾಗುವಂತೆ ದೇಹದ ಮೇಲೆ ಇಷ್ಟ ಲಿಂಗವನ್ನು ಧರಿಸಿದರೆ, ಪ್ರತಿಯೊಬ್ಬರ ದೇಹವೂ ಕೂಡ ಒಂದು ಪವಿತ್ರವಾದ ದೇವಾಲಯವಾಗಿ ಪರಿಣಮಿಸುತ್ತದೆ ಎಂದರು.
ಸನಾತನ ವೀರಶೈವ ಧರ್ಮದ ಸಂಸ್ಥಾಪಕರಾದ ಶ್ರೀ ಜಗದ್ಗುರು ಪಂಚಾಚಾರ್ಯರು ಭೂಲೋಕದಲ್ಲಿ ಯುಗಯುಗಗಳಲ್ಲಿ ಅವತರಿಸಿ ಸಮಸ್ತ ದೇವ, ದಾನವ ಮತ್ತು ಮಾನವರಿಗೆ ದೀಕ್ಷೆಯನ್ನು ಮಾಡಿ ಇಷ್ಟಲಿಂಗವನ್ನು ಧರಿಸುವುದರ ಮೂಲಕ ಸರ್ವರಿಗೂ ಸಮಾನತೆ ಹಕ್ಕನ್ನು ದಯಪಾಲಿಸಿದ್ದಾರೆ. ಇಷ್ಟಲಿಂಗ ಧಾರಣೆಗೆ ವರ್ಣಾಶ್ರಮಗಳ, ಸ್ತಿçÃ-ಪುರುಷರ ಭೇದ ಭಾವವಿರುವುದಿಲ್ಲ. ಎಲ್ಲ ವರ್ಣಗಳ, ಎಲ್ಲಾ ಆಶ್ರಮಗಳ, ಎಲ್ಲ ದೇಶಗಳ ಜನರು ಅಪೇಕ್ಷ ಪಟ್ಟರೆ ಅವರಿಗೆ ವಿಧಿವತ್ತಾಗಿ ದೀಕ್ಷಾ ಸಂಸ್ಕಾರವನ್ನು ಕೊಟ್ಟು ಲಿಂಗ ದೀಕ್ಷೆಯನ್ನು ಮಾಡಿ ಇದೇ ಜನ್ಮದಲ್ಲಿ ಶಿವಯೋಗ ಸಾಧನೆಯಿಂದ ಶಿವ ಸ್ವರೂಪನಾಗುವ ಸದಾವಕಾಶವನ್ನು ವೀರಶೈವ ಧರ್ಮದಲ್ಲಿ ಅನುಗ್ರಹಿಸಲಾಗಿದೆ ಎಂದು ಅವರು ಹೇಳಿದರು.
ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇÃತೃತ್ವ ವಹಿಸಿದ್ದರು. ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು, ಓಂಕಾರ್ ಸಿದ್ಧ ಶಿವಾಚಾರ್ಯರು, ಪಂಪಾಪತಿ ದೇವರು, ಶಿವಕಾಂತ್ ಮಹಾಜನ್, ಮಲ್ಲಿಕಾರ್ಜುನ್ ತಡಕಲ್, ಅಮೃತಪ್ಪ ಮಲಕಪ್ಪ, ಶಿವರಾಯ್ ಮೂಲಗೆ, ನೀಲಕಂಠ್ ಪತ್ತಾರ್, ಗುರುಲಿಂಗಯ್ಯಾ ಹಿತ್ತಲಶಿರೂರ್, ಮಹಾಂತಯ್ಯಾ ಸ್ವಾಮಿ ನಿಂಗದಳ್ಳಿ ಅವರಿಂದ ಸಂಗೀತ ಜರುಗಿತು. ಯುವ ಸಾಹಿತಿ ಶಿವಯ್ಯ ಮಠಪತಿ ಅವರು ಕಾರ್ಯಕ್ರಮ ನಿರೂಪಿಸಿದರು.