ಪ್ರತಿಪಕ್ಷಗಳಿಗೆ ಮಾಡಲು ಕೆಲಸವಿಲ್ಲ:ಸಚಿವ ಶರಣಪ್ರಕಾಶ್ ಪಾಟೀಲ್
ಕಲಬುರಗಿ ಜು.29: ಪ್ರತಿಪಕ್ಷಗಳಿಗೆ ಮಾಡಲು ಕೆಲಸವಿಲ್ಲ. ಹಾಗಾಗಿ ಪಾದಯಾತ್ರೆಯ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದ ಮೇಲ್ಮಹಡಿಯಲ್ಲಿರುವ ಸಾಂಸ್ಕೃತಿಕ ಸಭಾಂಗಣದಲ್ಲಿ ಸೋಮವಾರ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಏನಿದೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು ನಿವೇಶನವನ್ನು ಹಂಚಿಕೆ ಮಾಡಿಲ್ಲ. ಬದಲಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಆಗಿದೆ ಎಂದು ತಿಳಿಸಿದರು.
ಬೆಂಗಳೂರಿನಿAದ ಮೈಸೂರುವರೆಗೆ ಮುಡಾ ಹಗರಣವನ್ನು ಖಂಡಿಸಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನೊಂದು ಕಡೆಗೆ ಕೂಡಲಸಂಗಮದಿAದ ಬಳ್ಳಾರಿಯವರೆಗೆ ಇನ್ನೊಂದು ಬಿಜೆಪಿ ತಂಡವು ಪಾದಯಾತ್ರೆಯ ಪ್ರತಿಭಟನೆಯನ್ನು ಮಾಡಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರಸ್ತಾಪಿಸಿದ ಅವರು, ಆಗಿನ ಸಂದರ್ಭದಲ್ಲಿ ಗಣಿ ಹಗರಣದ ಕುರಿತು ಪ್ರತಿಪಕ್ಷವಾಗಿ ಕಾಂಗ್ರೆಸ್ ಬೆಂಗಳೂರಿನಿAದ ಬಳ್ಳಾರಿಯವರೆಗೆ ಪಾದಯಾತ್ರೆಯ ಪ್ರತಿಭಟನೆ ಮಾಡಿದ್ದೆವು. ಆ ರೀತಿಯ ಪ್ರತಿಭಟನೆ ಬಿಜೆಪಿಯವರಿಂದ ಸಾಧ್ಯವಿಲ್ಲ ಎಂದು ತಿಳಿಸಿದರು.
ಹಿಂದೆ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಶೇಕಡಾ 40ರಷ್ಟು ಕಮೀಷನ್ ಪಡೆದು ಮೈ ಬೆಳೆಸಿಕೊಂಡಿದ್ದಾರೆ. ಈಗ ಪಾದಯಾತ್ರೆಯ ಮೂಲಕವಾದರೂ ತಮ್ಮ ಮೈ ಕರಗಿಸಿಕೊಳ್ಳಲಿ ಎಂದು ಅವರು ವ್ಯಂಗ್ಯವಾಡಿದರು.