ಜೀವ ವೈವಿಧ್ಯತೆಯಲ್ಲಿ ಹುಲಿಗಳ ಪಾತ್ರ ಪ್ರಮುಖ
ಕಲಬುರಗಿ ಜು.29:ಹುಲಿ ರಾಷ್ಟಿçÃಯ ಪ್ರಾಣಿ ಹಾಗೂ ಆಹಾರ ಜಾಲ ವ್ಯವಸ್ಥೆಯಲ್ಲಿ ಉನ್ನತ ಸ್ಥರದಲ್ಲಿದೆ. ಅದರ ನಾಶದಿಂದ ಆಹಾರ ಜಾಲದಲ್ಲಿ ಏರು-ಪೇರಾಗುತ್ತದೆ. ವಿವಿಧ ಕಾರಣಗಳಿಂದ ಶೇ.97ರಷ್ಟು ಹುಲಿಗಳು ನಾಶವಾಗಿದ್ದು, ಸುಮಾರು 3000 ಹುಲಿಗಳು ಉಳಿದಿವೆ. ಜೀವ ವೈವಿಧ್ಯತೆಯಲ್ಲಿ ಹುಲಿಗಳ ಪಾತ್ರ ಪ್ರಮುಖವಾಗಿದ್ದು, ಅವುಗಳ ಪ್ರಬೇಧವನ್ನು ಸಂರಕ್ಷಿಸಬೇಕಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ರಮೇಶ ಗಾಣಿಗೇರ ಅಭಿಮತಪಟ್ಟರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ‘ಕಿರು ಮೃಗಾಲಯ’ದಲ್ಲಿ ಅರಣ್ಯ ಇಲಾಖೆ, ಕಿರು ಮೃಗಾಲಯ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಇವುಗಳ ವತಿಯಿಂದ ಸೋಮವಾರ ಜರುಗಿದ ‘ವಿಶ್ವ ಹುಲಿಗಳ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹುಲಿಗಳ ಸಂಖ್ಯೆಗಳ ಆಧಾರದ ಮೇಲೆ ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳ ನಡುವೆ ಸಾಮ್ಯತೆಯಿದೆ. ಅಂದರೆ ಒಮ್ಮೆ ಕರ್ನಾಟಕ ಪ್ರಥಮ ಸ್ಥಾನವಾದರೆ, ಮತ್ತೊಮ್ಮೆ ಮಧ್ಯಪ್ರದೇಶವಾಗುತ್ತಿದ್ದು, ಸದ್ಯ ಇದೇ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಹುಲಿ ಗಣತಿ ಮಾಡಿ, ಸಂರಕ್ಷಿತ ಪ್ರದೇಶಗಳ ಮೂಲಕ ರಕ್ಷಣೆ ಮಾಡಲಾಗುತ್ತಿದೆ. ಹುಲಿ ಬೇಟೆಯಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. 2010ರಿಂದ ಈ ದಿನಾಚರಣೆ ಆಚರಿಸಲಾಗುತ್ತಿದ್ದು, ಹುಲಿಯ ಸಂರಕ್ಷಣಾ ಕ್ರಮಗಳು, ಜೀವ ವೈವಿಧ್ಯತೆಯಲ್ಲಿ ಹುಲಿಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು ದಿನಾಚರಣೆಯ ಉದ್ದೇಶವಾಗಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಸುಮೀತಕುಮಾರ ಎಸ್.ಪಾಟೀಲ ಮಾರ್ಗದರ್ಶನ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುನೀರ್ ಅಹಮ್ಮದ್ ಅವರ ಸಲಹೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದ ಅಧ್ಯಕ್ಷ ಅಸ್ಲಾಂ ಶೇಖ್, ಡಿಆರ್‌ಎಫ್‌ಓ ಮಲ್ಲಿಕಾರ್ಜುನ ಎಚ್.ಜಮಾದಾರ, ಅರಣ್ಯ ರಕ್ಷಕ ಕಾಂತಪ್ಪ ಪೂಜಾರಿ, ಪ್ರಾಣಿ ಪಾಲಕ ಸದಾನಂದ ಶಿರವಾಳ, ಅರಣ್ಯ ವೀಕ್ಷಕಿ ಶಿವಲೀಲಾ ತೆಗನೂರ, ಚಾಲಕ ಆಕಾಶ ಮರತೂರಕರ್ ಸೇರಿದಂತೆ ಇನ್ನಿತರರಿದ್ದರು.