ನಗರದ ಕೆಲವು ಬಡಾವಣೆಗಳಲ್ಲಿ ನಾಲ್ಕು ದಿನಗಳ ಬದಲಾಗಿ ಮೂರು ದಿನಗೊಮ್ಮೆ ನೀರು ಸರಬರಾಜು
ಕಲಬುರಗಿ:ಜು.29:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿಯ ಭೀಮಾ ನದಿಯ ತಿರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ನದಿಯಲ್ಲಿ ನೀರಿನ ಲಭ್ಯತೆ ಹೆಚ್ಚಾಗಿರುವುದರಿಂದ ಕೋಟನೂರ (ಡಿ) ಜಲ ಶುದ್ಧೀಕರಣ ಕೇಂದ್ರದ ವ್ಯಾಪ್ತಿಯಲ್ಲಿ ನೀರು ಸರಬರಾಜು ಆಗುವ ಬಡಾವಣೆಗಳಿಗೆ ಈಗಾಗಲೇ ನಾಲ್ಕು ದಿವಸಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು, ಆದರೆ ಈಗ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರ ನಿರ್ದೇಶನದಂತೆ ನೀರು ಸರಬರಾಜಿನಲ್ಲಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಈ ಕೆಳಕಂಡ ಬಡಾವಣೆಗಳಿಗೆ ಮೂರು ದಿವಸಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಕಲಬುರಗಿ ಕೆಯುಡಬ್ಲೂö್ಯಎಸ್‌ಎಂಪಿ- ಕೆಯುಐಡಿಎಫ್‌ಸಿ, ಯೋಜನಾ ಅನುಷ್ಠಾನ ಘಟಕದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಕೋಟನೂರ ನೀರು ಶುದ್ಧೀಕರಣ ಕೇಂದ್ರದ ವ್ಯಾಪ್ತಿಯಲ್ಲಿ ನೀರು ಸರಬರಾಜಾಗುವ ವಾರ್ಡ್ ಹಾಗೂ ಬಡಾವಣೆಗಳ ವಿವರ ಇಂತಿದೆ. ವಾರ್ಡ್ ಸಂಖ್ಯೆ 46,49,51,52,53,54 ಮತ್ತು 55. ಪಿ ಆಂಡ್ ಟಿ ಕ್ವಾಟರ‍್ಸ್, ಸದಾಶಿವನಗರ, ಗಣೇಶನಗರ, ಬ್ಯಾಂಕ್ ಕಾಲೋನಿ, ರಹೆಮತ ನಗರ, ತಾರಫೈಲ್, ಗಾಬರೆ ಲೇಔಟ್, ದೇವಾ ನಗರ, ಬನಶಂಕರಿ ಕಾಲೋನಿ, ಸಾಯಿನಗರ, ಸಂತೋಷ ಕಾಲೋನಿ, ಜೇವರ್ಗಿ ಕಾಲೋನಿ, ಬಿದ್ದಾಪೂರ ಕಾಲೋನಿ,ಓಜಾ ಲೇಔಟ್, ಧರಿಯಾಪೂರ, ಅಂಬಿಕಾ ನಗರ, ಕರುಣೇಶ್ವರ ನಗರ, ಭಾಗ್ಯವಂತಿ ನಗರ, ಶಹಬಾಜ ಕಾಲೋನಿ, ಅಕ್ಕ ಮಹಾದೇವಿ ಕಾಲೋನಿ, ಮಹಾಲಕ್ಷಿö್ಮ ಕಾಲೋನಿ, ಹೌಸಿಂಗ್ ಬೋರ್ಡ, ಗುರುಶಾಂತಮ್ಮ ಲೇಔಟ್, ಧತ್ತನಗರ ಲೇಔಟ್, ಜಾಧಾವ ಕಾಲೋನಿ, ವರ್ಧಾ ನಗರ, ಉದಯನಗರ, ಜಮ್‌ಶೇಟಿ ನಗರ, ಹನುಮಾನ ನಗರ ತಾಂಡಾ ಹಾಗೂ ಇನ್ನಿತರ ಬಡಾವಣೆಗಳು.