ಶಿಕ್ಷಣ ಹುಲಿಯ ಹಾಲು ಇದ್ದಂತೆ,ಅದನ್ನು ಕುಡಿದವರು ಘರ್ಜಿಸಲೇಬೇಕುಮಹಿಳೆ ಅಬಲೆ ಅಲ್ಲ, ಸಬಲೇ ಎಂದು ನಿರೂಪಿಸಲು ಓದಿ : ಡಾ.ನಾಗಲಕ್ಷ್ಮಿ ಕರೆ
ಕಲಬುರುಗಿ: ಜು.೨೯:ಇಂದಿನ ಸ್ಪರ್ಧಾತ್ಮಕ ಯುಗದಲ್ಲು ಸಹ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ ನಿಲ್ಲುತ್ತಿಲ್ಲ. ಅದನ್ನು ಮೆಟ್ಟಿ ನಿಲ್ಲಬೇಕು. ಶಿಕ್ಷಣ ಎಂಬ ಹಾಲನ್ನು ಕುಡಿಯಿರಿ, ನಂತರ ತಾವೆ ಘರ್ಜಿಸುತ್ತಿರಿ ಎಂದು ಕರೆ ನೀಡಿ, ಮಹಿಳೆ ಅಬಲೆ ಅಲ್ಲ ಎಂಬುವುದು ಸಾಬಿತು ಪಡಿಸಲು ಎಲ್ಲರೂ ಕಡ್ಡಾಯವಾಗಿ ಓದಿ ಎಂದು ವಿದ್ಯಾರ್ಥಿನಿಯರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಕರೆ ನೀಡಿದರು.
ಪಟ್ಟಣದಲ್ಲಿನ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿ ಮಾತನಾಡಿದರು. ವಿದ್ಯಾರ್ಥಿನಿಯರು ತಮ್ಮ ಸಮಸ್ಯೆಗಳ ಕುರಿತು ಸಕಾರಾತ್ಮಕವಾಗಿ ಮಾತನಾಡಿದ ಚೌದರಿರವರು, ತತಕ್ಷಣವೇ, ಸಂಬAಧಿಸಿದ ಅಧಿಕಾರಿಗಳನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡರು.
ನAತರ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹೆಣ್ಣುಮಕ್ಕಳ ಹಕ್ಕುಗಳ ಕುರಿತು ಜಾಗೃತ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಸೂಚಿಸಿದರು. ಯಾವುದೇ ಕಾರಣಕ್ಕೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಎಚ್ಚರಿಸಿದರು.
ಪಿಯು ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಮಾತನಾಡಿ, ಕಾಲೇಜಿಗೆ ಶೌಚಾಲಯ ಇದೆ.ಆದರೆ ಐದಾರು ನೂರು ವಿಧ್ಯಾರ್ಥಿನಿಯರಿಗೆ ಇನ್ನೂ ಶೌಚಾಲಯಗಳ ಕೊರತೆ ಇರುವ ಕುರಿತು ಸಂಭAದಿಸಿದ ಇಲಾಖೆಯ ಮುಖ್ಯಸ್ಥರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಬಾಲಕೀಯರ ಮತ್ತು ಮಹಿಳೆಯರಿಗೆ ಸಂಭAದಿಸಿದ ಸಮಸ್ಯೆಗಳ ಕುರಿತು, ಮತ್ತು ಸೌಕರ್ಯಗಳ ಬಗ್ಗೆ ಇಲಾಖೆಯಿಂದ ಇರುವ ಮಾಹಿತಿಗಳ ಪಟ್ಟಿಯನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ ತಿಳಿಸಿದರು
ನಂತರ ಮಂದೇವಾಲ ಗ್ರಾಮದಲ್ಲಿ ಆರೋಗ್ಯ ಶಿಬಿರ ಉದ್ಘಾಟಿಸಿ, ಮಾತನಾಡಿದ ಅವರು, ರೋಗಿಗಳ ಸಮಸ್ಯೆಗಳನ್ನು ಆಲಿಸಿ, ಆಸ್ಪತ್ರೆಯನ್ನು ಪರಿಶಿಸಿದರು.ಆಸ್ಪತ್ರೆಯ ಅಚ್ಚುಕಟ್ಟಾದ ವ್ಯವಸ್ಥೆಗೆ ಡಾ.ನಾಗಲಕ್ಷಿö್ಮÃ ಚೌದರಿ ಮೆಚ್ಚುಗೆ ವ್ಯಕ್ತಪಡಿಸಿದರು.ಮಂದೇವಾಲ ಗ್ರಾಮಸ್ಥರು ನಗು ಮಗು ಅಂಬುಲೇನ್ಸ ಒದಗಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಮಲ್ಲಣ್ಣ ಯಲಗೋಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಕುಮಾರ ರಾಠೋಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ತಾಲ್ಲೂಕು ವೈದ್ಯಾಧಿಕಾರಿ ಡಾ.ಸಿದ್ದು ಪಾಟೀಲ್, ತಾಪಂ ಇಓ ರೇವಣಸಿದ್ದಪ್ಪ ಗೌಡರ, ಸಿಪಿಐ ರಾಜೆಸಾಬ ನದಾಫ, ಪಿಎಸ್‌ಐ ಸುರೇಶಕುಮಾರ ಚವ್ಹಾಣ, ಅಶೋಕ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.