ಪೃಥ್ವಿ ಹೆಗಡೆಗೆ ನಾಟ್ಯ ಮಯೂರಿ ಪುರಸ್ಕಾರ
ತಾಳಿಕೋಟೆ:ಜು.29: ಪಟ್ಟಣದ ಶ್ರೀ ವಿರಕ್ತೇಶ್ವರ ಭರತನಾಟ್ಯ ಶಾಲೆಯ ವಿದ್ಯಾರ್ಥಿನಿ ಕುಮಾರಿ ಪೃಥ್ವಿ ಹೆಗಡೆ ಇವಳಿಗೆ ಧಾರವಾಡದ ಚಿರಾಯು ಕನ್ನಡ ಡಿಜಿಟಲ್ ಮೀಡಿಯಾ ಹಾಗೂ ಶ್ರೀನಿಧಿ ಪೌಂಡೇಶನ್ ವತಿಯಿಂದ ನಾಟ್ಯ ಮಯೂರ ರಾಷ್ಟಿçÃಯ ಪುರಸ್ಕಾರ ನೀಡಿ ಅಭಿನಂದಿಸಲಾಗಿದೆ.
ರವಿವಾರರಂದು ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಚಿರಾಯು ಅಸೋಸಿಯಶನ್, ಶ್ರೀ ನಿಧಿ ಪೌಂಡೇಶನ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಟ್ಯ ಮಯೂರ ರಾಷ್ಟಿçÃಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ.
ಪೃಥ್ವಿ ಹೆಗಡೆಯು ಈ ಹಿಂದೆ ಕರ್ನಾಟಕ, ಕೆರಳ, ಉತ್ತರ ಪ್ರದೇಶ, ಮಹಾರಾಷ್ಟç, ಆಂಧ್ರ ಪ್ರದೇಶ, ಒಳಗೊಂಡು ಚಂದನ ವಾಹಿನಿಯಲ್ಲಿ ಹಾಗೂ ಶ್ರೀ ಬಸವ ವಾಹಿನಿಯಲ್ಲಿ ತಮ್ಮ ಭರತನಾಟ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದುಕೊಳ್ಳುವದರ ಜೊತೆಗೆ .ರಾಜ್ಯ ಮಟ್ಟದ, ಅಂತರಾಜ್ಯ ಮಟ್ಟದ, ರಾಷ್ಟಿçÃಯ, ಅಂತರಾಷ್ಟಿçÃಯ ಮಟ್ಟದ ಹಲವಾರು ಪ್ರಶಸ್ತಿ ಬಾಚಿಕೊಂಡಿದ್ದಾಳೆ. ಕಳೆದ 8 ವರ್ಷಗಳಿಂದ ತಾಳಿಕೋಟೆಯ ಶ್ರೀ ವಿರಕ್ತೇಶ್ವರ ಭರತನಾಟ್ಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ವಿನೋದ ಚಿಕ್ಕಮಠ ಒಳಗೊಂಡು ಪಾಲಕರು, ಪೊಷಕರು, ಅಲ್ಲದೇ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮಂಡಳಿಯು ಅಭಿನಂದಿಸಿದ್ದಾರೆ.