ಬಸ್ ಡಿಕ್ಕಿ: ಬೈಕ್ ಸವಾರರಿಬ್ಬರ ಸಾವು
ಕಲಬುರಗಿ,ಜು.29-ಬಸ್ ಡಿಕ್ಕಿ ಹೊಡೆದು ಬೈಕ್ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಗೆ ಸಮೀಪದ ನಂದಿಕೂರ ಹತ್ತಿರ ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಜೇವರ್ಗಿ ತಾಲ್ಲೂಕಿನ ಶಖಾಪುರ (ಎಸ್.ಎ) ಗ್ರಾಮದ ನಿವಾಸಿಗಳಾದ ಅಭಿಷೇಕ ತಂದೆ ರಾಮಚಂದ್ರಗೌಡ ಮಾಲಿಪಾಟೀಲ (17) ಮತ್ತು ತನೋಜ್ ತಂದೆ ಶ್ರೀಮಂತ ತಳವಾರ (17) ಎಂದು ಗುರುತಿಸಲಾಗಿದೆ. ಯಶಪಾಲ್ ರೆಡ್ಡಿ ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಭಿಷೇಕ, ತನೋಜ್ ಮತ್ತು ಯಶಪಾಲ್ ರೆಡ್ಡಿ ಸ್ನೇಹಿತರಾಗಿದ್ದು, ಕಾಶಿಯಿಂದ ಆಗಮಿಸಿದ್ದ ಯಶಪಾಲ್ ರೆಡ್ಡಿ ಅವರನ್ನು ಕರೆದುಕೊಂಡು ಬೈಕ್ ಮೇಲೆ ಜೇವರ್ಗಿ ಕಡೆಗೆ ಹೋಗುತ್ತಿದ್ದಾಗ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.
ಈ ಸಂಬAಧ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.