ಮಹಿಳೆಯನ್ನ ಕೊಲೆ ಮಾಡಿ ಶವ ಸುಟ್ಟು ಹಾಕಿದ ಪ್ರಕರಣ: ಆರೋಪಿ ಬಂಧನ
ಕಲಬುರಗಿ,ಜು.29-ಜಿಲ್ಲೆಯ ಕಮಲಾಪುರ ತಾಲ್ಲೂಕಿನ ನಾಗೂರ ಗ್ರಾಮದ ಹೊರವಲಯದ ನಿರ್ಜನ ಪ್ರದೇಶದ ರಸ್ತೆ ಬದಿಯಲ್ಲಿ ಮಹಿಳೆಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಮಹಾಗಾಂವ ಪೊಲೀಸರು ಈ ಸಂಬAಧ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ಎಸ್‌ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ಎಸ್‌ಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದ ಅವರು, ಈ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರಾಜಕುಮಾರ ಬಿರಾದಾರ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಹಿನ್ನೆಲೆ
ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಹೊರವಲಯದ ನಿರ್ಜನ ಪ್ರದೇಶದ ರಸ್ತೆ ಬದಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಗ್ರಾಮಸ್ಥರು ತಕ್ಷಣವೇ ಮಹಾಗಾಂವ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಂದು ನೋಡಿದಾಗ ಮೃತದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ವೇಳೆ ಮೃತದೇಹದ ಬಳಿ ಅರೆಬರೆ ಸುಟ್ಟ ಆಧಾರ್ ಕಾರ್ಡ್ನಲ್ಲಿನ ವಿಳಾಸ ಪತ್ತೆ ಹಚ್ಚಿದಾಗ, ಕೊಲೆಯಾದ ಮಹಿಳೆ ಕಲಬುರಗಿ ನಗರದ ಜಗತ್ ಬಡಾವಣೆಯ ನಿವಾಸಿ ಬಸಮ್ಮ ಎನ್ನುವುದು ತಿಳಿದಿತ್ತು.
ತಕ್ಷಣವೇ ಅಲರ್ಟ್ ಆದ ಪೊಲೀಸರು ತನಿಖೆ ಶುರು ಮಾಡಿದ್ದರು. ಆದರೆ, ಏನು ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಆಕೆಯ ಬಗ್ಗೆ ಇಂಚಿAಚು ಮಾಹಿತಿ ಕಲೆ ಹಾಕಿದ್ದಾರೆ. ಅವಾಗ ಆಕೆ ಕೆಲ ವರ್ಷಗಳಿಂದ ಬಡ್ಡಿ ವ್ಯವಹಾರ ಮಾಡುತ್ತಿದ್ದಳು ಎಂಬ ಮಾಹಿತಿ ದೊರೆತಿತ್ತು. ಹೀಗಾಗಿ ಯಾರೋ ಈಕೆಯಿಂದ ಹಣ ಪಡೆದವರೇ ಕೊಲೆ ಮಾಡಿರಬಹುದು ಎಂದು ಅಂದಾಜಿದ್ದ ಪೊಲೀಸರು ಅದೇ ಆ್ಯಂಗಲ್‌ನಲ್ಲಿ ತನಿಖೆ ಚುರುಕುಗೊಳಿಸಿದರು. ಆಗ ಪೊಲೀಸರ ಬಲಿಗೆ ಬಿದ್ದಿದ್ದು ರಾಜಕುಮಾರ ಬಿರಾದಾರ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಈತ ಗೌಂಡಿ ಕೆಲಸ ಮಾಡಿಕೊಂಡಿದ್ದ. ಬಸಮ್ಮಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದನು. ಈ ವೇಳೆ ಬಸಮ್ಮ ತನ್ನ ಬಳಿಯಿದ್ದ 48 ಗ್ರಾಂಗೂ ಅಧಿಕ ಚಿನ್ನ ಮತ್ತು ಹಣವನ್ನ ಈತನ ಬಳಿ ಕೊಟ್ಟಿದ್ದಳಂತೆ. ಆ ಚಿನ್ನವನ್ನ ರಾಜಕುಮಾರ್ ಫೈನಾನ್ಸ್ವೊಂದರಲ್ಲಿ ಅಡವಿಟ್ಟು 2 ಲಕ್ಷಕ್ಕೂ ಅಧಿಕ ಹಣ ಸಾಲ ಪಡೆದಿದ್ದನು. ಕೆಲ ದಿನಗಳ ಬಳಿಕ ನನ್ನ ಚಿನ್ನಾಭರಣ ಕೊಡು ಎಂದು ರಾಜಕುಮಾರಗೆ ಬಸಮ್ಮ ಕೇಳಿದ್ದಾಳೆ. ಎಷ್ಟೋ ಸಾರಿ ಚಿನ್ನ ಕೇಳಿದಾಗ ಏನಾದರೊಂದು ನೆಪ ಹೇಳುತ್ತಿದ್ದ ಹಂತಕ, ಜುಲೈ 14 ರಂದು ಬಾ ಊಟ ಮಾಡಿಸಿ ಕೊಡ್ತಿನಿ ಎಂದು ತನ್ನದೇ ಸ್ಕೂಟಿ ಮೇಲೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ನಾಗೂರ ಗ್ರಾಮದ ಬಳಿ ಬಸಮ್ಮಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ಬಳಿಕ ಸಾಕ್ಷಿ ನಾಶಪಡಿಸಲು ಪೆಟ್ರೋಲ್ ಸುರಿದು ಶವವನ್ನ ಸುಟ್ಟುಹಾಕಿದ್ದಾನೆ.
ಯಾವುದೇ ಸುಳಿವಿಲ್ಲದೇ ಇದ್ದ ಈ ಕೊಲೆ ಪ್ರಕರಣವನ್ನ ಗ್ರಾಮೀಣ ಸಿಪಿಐ ನಾರಾಯಣ್ ನೇತೃತ್ವದಲ್ಲಿ ಮಹಾಗಾಂವ ಠಾಣೆ ಪೊಲೀಸರು ಭೇದಿಸಿದ್ದಾರೆ. ಇಷ್ಟೆಲ್ಲ ಸಾಕ್ಷಾಧಾರಗಳನ್ನ ಸಂಗ್ರಹಿಸಿ ಬಸವರಾeನನ್ನ ಮಹಾಗಾಂವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣವನ್ನ ಭೇದಿಸಿರುವ ಮಹಾಗಾಂವ ಠಾಣೆ ಪೊಲೀಸರಿಗೆ ಎಸ್ಪಿ ಅಡ್ಡೂರು ಶ್ರೀನಿವಾಸುಲು ಪ್ರಶಂಸನ ಪತ್ರ ನೀಡಿ ಗೌರವಿಸಿದರು.