ಇಟಗಿ ಗ್ರಾಮಕ್ಕೆ ಪ್ರವಾಹ ಭೀತಿ
ಲಕ್ಷೆ÷್ಮÃಶ್ವರ,ರಿu.೨೯: ಶಿರಹಟ್ಟಿ-ಕಳೆದ ೧೫ ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಲೆನಾಡು ಮತ್ತು ಪಶ್ಚಿಮ ಘಟ್ಟದ ಮಳೆಯಿಂದಾಗಿ ತುಂಗಭದ್ರಾ ನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದ್ದು Ä ತಾಲೂಕಿನ ಇಟಗಿ ಗ್ರಾಮದಲ್ಲಿ ಪ್ರವಾಹದ ಭೀತಿಯನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ.
ಶಿರಹಟ್ಟಿ ತಾಲೂಕಿನ ಇಟಗಿ ಗ್ರಾಮದಲ್ಲಿ ತುಂಗಭದ್ರಾ ನದಿ ಅತ್ಯಂತ ರಭಸದಿಂದ ಹರಿಯುತ್ತಿದ್ದು ನದಿಯ ನೀರು ಅಕ್ಕ ಪಕ್ಕದ ಜಮೀನುಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ ಉಂಟಾಗಿದೆ.
ನದಿ ಪಕ್ಕದ ಜಮೀನಿನಲ್ಲಿರುವ ಭತ್ತ ಮತ್ತು ಗೋವಿನ ಜೋಳದ ಬೆಳೆಗಳು ನೀರಿನಲ್ಲಿ ನಿಂತಿದ್ದು ರೈತರು ಆತಂಕದಲ್ಲಿದ್ದಾರೆ, ದಿನದಿಂದ ದಿನಕ್ಕೆ ನೀರಿನ ಮಟ್ಟ ಏರುತ್ತಿದ್ದು ಗ್ರಾಮಸ್ಥರಲ್ಲಿ ಪ್ರವಾಹದ ಭೀತಿ ಉಂಟಾಗಿದೆ.
ಅದೇ ರೀತಿ ಇಟಗಿ ಗ್ರಾಮ ಈಗ ವರದಾ ನದಿಯ ಪ್ರವಾಹದಲ್ಲಿ ಇಟಗಿ ಗುತ್ತಲ ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿದ್ದು ಇಟಗಿ ಗ್ರಾಮದಿಂದ ಗುತ್ತಲಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿನ ಸೇತುವೆ ಮೇಲೆ ನೀರು ಹರಿಯುತ್ತರದಿಂದ ಇಟಿಗಿ ಗ್ರಾಮಸ್ಥರು ತೆರೆದಹಳ್ಳಿ ಮೇವುಂಡಿ ಗುಲ್ಗಂಧಿ ನೀರಲಗಿ ಬೆಳವಗಿ ಮಾರ್ಗವಾಗಿ ಗುತ್ತಲ ಹಾವೇರಿ ರಾಣೆಬೆನ್ನೂರಿಗೆ