ಗುಡ್ಡ ಕುಸಿತ ಪ್ರದೇಶಕ್ಕೆ ಸಂಸದರ ಭೇಟಿ
ಚನ್ನಮ್ಮನ ಕಿತ್ತೂರು,ಜು.೨೯: ಕಾರವಾರ ಜಿಲ್ಲೆಗೆ ಒಳಪಡುವ ಶಿರೂರ ಗುಡ್ಡವು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕುಸಿದು ಹೆದ್ದಾರಿ ಮೇಲೆ ಮಣ್ಣು ಬಿದ್ದಿದ್ದರಿಂದ ವಾಹನ ಮತ್ತು ಬೈಕ್ ಸವಾರರಿಗೆ ತೊಂದರೆಯಾಗಿದೆ. ಸ್ಥಳಕ್ಕೆ ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ೨ನೇ ಬಾರಿಗೆ ಭೇಟಿನೀಡಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಿಮಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಸರ್ಕಾರದಿಂದ ಮಾಡಿಸಿಕೊಡುತ್ತೇನೆ. ಆದಷ್ಟು ತ್ವರಿತಗತಿಯಲ್ಲಿ ರಸ್ತೆಯ ಮೇಲಿದ್ದ ಮಣ್ಣನ್ನು ಹೊರಹಾಕಿ ಪ್ರಯಾಣಿಕರಿಗೆ ಅನುವು ಮಾಡಿಕೊಡಿ ಎಂದು ಸೂಚಿಸಿದರು.
ಈ ವೇಳೆ ಕಾರವಾರ-ಅಂಕೋಲಾ ಮಾಜಿ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ಮುಖಂಡರುಗಳು, ಪಿಡಬ್ಲೂಡಿ, ಪೋಲಿಸ್ ಇಲಾಖೆ ಸೇರಿದಂತೆ ಇನ್ನೂಳಿದ ಜಿಲ್ಲಾ-ತಾಲೂಕಮಟ್ಟದ ಅಧಿಕಾರಿಗಳು, ಪ್ರಯಾಣಿಕರು, ಸಾರ್ವಜನಿಕರಿದ್ದರು.