ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಬೇಕಿದೆ: ರಾಜ್ಯಾಧ್ಯಕ್ಷ ಶಿವಾನಂದ ತಗಡೂರ
ವಿಜಯಪುರ,ಜು.29: ಬ್ರೇಕಿಂಗ್ ಅಬ್ಬರದಲ್ಲಿ ಪತ್ರಕರ್ತರ ವಿಶ್ವಾಸಾರ್ಹತೆಯ ಪ್ರಶ್ನೆ ಮಾಡುವ ಪರಿಸ್ಥಿತಿ ಒಂದೆಡೆ ಸೃಜನೆಯಾದರೆ, ನಾನು ಪತ್ರಕರ್ತ, ನಾನು ಪತ್ರಕರ್ತ ಎಂಬ ಹೆಸರು ಹೇಳುವವರ ಸಂಖ್ಯೆ ಅಧಿಕವಾಗುತ್ತಿದೆ. ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕುವುದು ಅತ್ಯಂತ ಅವಶ್ಯವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಹೇಳಿದರು.
ವಿಜಯಪುರದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಪತ್ರಕರ್ತರು ಎಂದು ಹೇಳಿ ಬ್ಲಾಕ್‌ಮೇಲ್ ಮಾಡುವವರ ಸಂಖ್ಯೆಯೂ ಇದೆ. ಈ ರೀತಿ ವೃತ್ತಿಗೆ ದ್ರೋಹ ಎಸಗುವ ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕುವ ಕೆಲಸ ನಡೆಯಬೇಕಿದೆ. ಎಂದೋ ಒಂದು ದಿನ ಪತ್ರಿಕೆ ಹೊರತಂದು ಪತ್ರಕರ್ತರ ಎಂದು ಹೇಳಿಕೊಳ್ಳುವವರು ಇದ್ದಾರೆ ಎಂದರು.
ಶ್ರೇಷ್ಠ ಸಾಹಿತಿ ಡಾ.ಡಿ.ವಿ. ಗುಂಡಪ್ಪ ಅವರು ಸ್ಥಾಪಿಸಿದ ಕಾನಿಪ ಇಂದು ಹೆಮ್ಮರವಾಗಿ ಬೆಳೆದು ಕೇರಳ, ಮಹಾರಾಷ್ಟç ಮೊದಲಾದ ರಾಜ್ಯಗಳಲ್ಲಿ ವ್ಯಾಪಿಸಿಕೊಂಡು ವಿಸ್ತಾರವಾಗಿ ಬೆಳೆಯುತ್ತಾ ಸಾಗಿದೆ ಎಂದರು.
ಖಾದ್ರಿ ಶಾಮಣ್ಣ, ಎಸ್.ವಿ. ಜಯಶೀಲ್‌ರಾವ್ ಸೇರಿದಂತೆ ಅನೇಕ ಮಹಾನುಭಾವರು ಈ ಸಂಘದ ಸಾರಥ್ಯ ವಹಿಸಿ ಸಂಘವನ್ನು ಮುನ್ನಡೆಸಿದ ಪರಿಣಾಮ ಸಂಘ ಎತ್ತರಕ್ಕೆ ಬೆಳೆದಿದೆ. ಸುದೀರ್ಘ ಇತಿಹಾಸವುಳ್ಳ ಬೃಹತ್ ಸಂಘಟನೆಯಾಗಿ ತನ್ನ ಜವಾಬ್ದಾರಿಯನ್ನು ಕಾನಿಪ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದರು.
ಸದನದಲ್ಲಿಯೂ ಪತ್ರಕರ್ತರ ಹಿತರಕ್ಷಣೆಯ ಬಗ್ಗೆ ಚರ್ಚೆಯಾಗುತ್ತಿದೆ. ಪತ್ರಕರ್ತರ ಹಿತರಕ್ಷಣೆಗೆ ಪೂರಕವಾದ ಸೌಲಭ್ಯ ಕಲ್ಪಿಸುವಂತೆ ಸರ್ಕಾರ, ಸಂಬAಧಿಸಿದ ಇಲಾಖೆಗಳಿಗೆ ನಿರಂತರವಾಗಿ ಮನವಿ, ಮನವರಿಕೆ ಮಾಡಿಕೊಡುವ ಕೆಲಸವನ್ನು ಸಂಘ ಮುಂಚೂಣಿಯಲ್ಲಿ ನಿಂತು ಮಾಡುತ್ತಿದೆ ಎಂದರು.
ಮಾಧ್ಯಮಗಳಿಗೆ ಅದಮ್ಯ ಶಕ್ತಿ ಇದೆ, ಮಾಧ್ಯಮಕ್ಕೆ ಒಂದು ದೊಡ್ಡ ಜವಾಬ್ದಾರಿ ಇದೆ. ಒಂದು ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸಹ ಪತ್ರಿಕಾಗೋಷ್ಠಿ ನಡೆಸಿ ತಮ್ಮ ವಿಚಾರಗಳನ್ನು ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದ್ದರು ಎಂಬುದನ್ನು ಮರೆಯುವಂತಿಲ್ಲ ಎಂದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್
ಗ್ರಾಮೀಣ ಪತ್ರಕರ್ತರಿಗೆ ಸಂಚಾರಕ್ಕೆ ಅನುಕೂಲಕ್ಕಾಗಿ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಮಾಡಿ, ಖಂಡಿತವಾಗಿಯೂ ಈ ಸೌಲಭ್ಯಕ್ಕೆ ಹಸಿರು ನಿಶಾನೆ ಪಡೆದುಕೊಳ್ಳಲಾಗುವುದು ಎಂದು ತಗಡೂರ ಭರವಸೆ ನೀಡಿದರು.
ಉಪನ್ಯಾಸ ಮಂಡಿಸಿದ ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಎಂ.ಎಸ್. ಮಧಬಾವಿ,
ಶಾಸ್ತಿçÃಯ ಪದ್ಧತಿಯಲ್ಲಿ ವಚನಗಳನ್ನು ಪ್ರಕಟಿಸಿ ಜನರಿಗೆ ತಲುಪಿಸಿದ ಶ್ರೇಯಸ್ಸು ಡಾ.ಹಳಕಟ್ಟಿ ಅವರಿಗೆ ಸಲ್ಲುತ್ತದೆ, ಶಿವಾನುಭವ ಎಂಬ ಪತ್ರಿಕೆಯ ಮೂಲಕ ಬಸವಾದಿ ಶರಣರ ವಿಚಾರಗಳನ್ನು ಬಿತ್ತಿದರೆ, ಅವರು ಸ್ಥಾಪಿಸಿದ ನವ ಕರ್ನಾಟಕ ಎನ್ನುವ ಇನ್ನೊಂದು ಪತ್ರಿಕೆ ಕರ್ನಾಟಕದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಯ ಕೈಗನ್ನಡಿಯಾಗಿ ನವ ಕರ್ನಾಟಕ ರೂಪುಗೊಳ್ಳುವ ವಿಚಾರಗಳನ್ನು ಬಿತ್ತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು ಎಂದರು. ಈ ಅಪರೂಪದ ಹಾಗೂ ಅಪೂರ್ವವಾದ ನವ ಕರ್ನಾಟಕ ಸಂಗ್ರಹ ಪ್ರತಿಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಉಪಾಧ್ಯಕ್ಷರಾದ ಇಂದುಶೇಖ ಮಣೂರ, ಪ್ರಕಾಶ ಬೆಣ್ಣೂರ, ಪಿರೋಜ್ ರೋಜಿನದಾರ, ಪದಾಧಿಕಾರಿಗಳಾದ ಅವಿನಾಶ ಬಿದರಿ, ಶಕೀಲ್ ಬಾಗಮಾರೆ, ಮಲ್ಲು ಕೆಂಭಾವಿ, ರಾಹುಲ್ ಅಪ್ಟೆ, ದೀಪಕ ಶಿಂತ್ರೆ, ಐಎಫ್‌ಡಬ್ಲೂö್ಯಜೆ ನಾಮನಿರ್ದೇಶಿತ ಸದಸ್ಯ ಮಹೇಶ ಶೆಟಗಾರ, ಕೆ.ಕೆ. ಕುಲಕರ್ಣಿ, ಕೌಶಲ್ಯಾ ಪನಾಳಕರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಪಾಲ್ಗೊಂಡಿದ್ದರು.
ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ ಸ್ವಾಗತಿಸಿದರು. ಕಾನಿಪ ರಾಜ್ಯ ಸಮಿತಿ ಸದಸ್ಯ ಡಿ.ಬಿ. ವಡವಡಗಿ ಕಾರ್ಯಕ್ರಮ ನಿರೂಪಿಸಿದರು.