ವ್ಯಾಪಾರದ ಜೊತೆ ದಾನ ಧರ್ಮದಲ್ಲಿ ತೊಡಗಿಸಿಕೊಳ್ಳಲು ಕರೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಜು.೨೯ ವ್ಯಾಪಾರ ಎನ್ನುವುದು ನಮ್ಮ ಸಮುದಾಯದ ಧರ್ಮ ಜೊತೆಗೆ ಬಡವರಿಗೆ ಅನುಕೂಲವಾಗುವಂತಹ ದಾನ ಧರ್ಮ ನೀಡುವ ಮೂಲಕ ಸಾರ್ಥಕ ಮೆರೆಯಿರಿ ಎಂದು ಬೆಂಗಳೂರಿನ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ವಾಸವಿ ಯುವಜನ ಸಂಘ, ಆರ್ಯವೈಶ್ಯ ಸಂಘ ಟ್ರಸ್ಟ್, ಆರ್ಯವೈಶ್ಯ ಮಹಿಳಾ ಸಂಘ ಹಾಗೂ ವಾಸವಿ ವನಿತಾ ಸಂಘಗಳು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ, ವಿಜಯನಗರ ವಿಭಾಗೀಯ ೩ನೇ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಯಾವುದೇ ಕೆಲಗಳಲ್ಲಿ ಕೀಳಿರಿಮೆಗಳು ಬೇಡ, ಸಮುದಾಯದ ಸಂಘಟನೆಯ ಕೊರತೆ ಬಹಳ ಕಾಡುತ್ತಿದೆ. ಈ ಭಾಗದಲ್ಲಿ ಉತ್ತಮವಾಗಿರಬಹುದು, ರಾಜ್ಯದೆಲ್ಲೆಡೆ ಇಂತಹ ಸಂಘಟನೆ ಕಮಡು ಬರುತ್ತಿಲ್ಲ. ಯುವಜನತೆ ಜಾಗೃತರಾಗಿ ಸಂಘಟನೆಗೆ ಮುಂದಾಗಿ. ನಿಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಗಳನ್ನು ನೀಡುವ ಮೂಲಕ ಸಮಾಜಕ್ಕೆ ಮಾರಿಯಾಗುವಂತೆ ಕೊಡುಗೆ ನೀಡಿ ಎಂದರು.
ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿ ಮಾತನಾಡಿ, ಸಮಾಜದಲ್ಲಿ ಯಾರನ್ನು ನೋಯಿಸಬೇಡಿ ಎಲ್ಲರನ್ನು ಸಮಾನವಾಗಿ ಕಾಣಬೇಕು. ಹೆಣ್ಣು, ಗಂಡು ಎಂದು ಮಕ್ಕಳಲ್ಲಿಯೇ ತಾರತಮ್ಯ ಮಾಡದೆ, ಒಂದೇ ದೃಷ್ಠಿಯಿಂದ ಬೆಳೆಸಿ, ಅದರಲ್ಲೂ ದೇವರ ಅವಕೃಪೆಯಿಂದ ಹುಟ್ಟಿದ ನಮ್ಮಂತವರನ್ನು ತಿರಸ್ಕೃತಭಾವನೆಯಿಂದ ನೋಡಬೇಡಿ, ಅವರಿಗೂ ನಿಮ್ಮಗಳ ಪ್ರೀತಿ ಬೇಕೇಬೇಕು. ಇದೇ ಪಟ್ಟಣದಲ್ಲಿ ನಾನು ಅಂಗಡಿ ಅಂಗಡಿಗಳಿಗೆ ಬರುವಾಗ ಮುಂದಕ್ಕೆ ಹೋಗುವಂತೆ ಹೇಳಿದವರು ಇದ್ದಾರೆ. ಆದರೆ, ಅದೇ ಸ್ಥಾನಮಾನಗಳು ಬಂದಾಗ ಗೌರವ ಕೂಡ ಸಿಕ್ಕಿದೆ ಎಂದು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.
ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭೆಯ ರಾಜ್ಯಾಧ್ಯಕ್ಷ ಎಸ್.ಸುನಿಲ್ ಕಾರ್ಯಕ್ರಮ ಉದ್ಘಾಟಿಸಿ, ಸಮುದಾಯದ ಯುವಜನತೆ ಒಗ್ಗಟ್ಟಿನಿಂದ ಕೂಡಿದಲ್ಲಿ ಇಂತಹ ಸಂಘಟಿತ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ, ಹಿರಿಯರಿಗೆ ಗೌರವ ನೀಡಿ, ಯಾವುದೇ ದುಶ್ಚಟಗಳಿಗೆ ಒಳಗಾಗದೆ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ ಎಂದರು.
ಮಹಾಸಭೆಯ ವಿಜಯನಗರ ವಿಭಾಗದ ಉಪಾಧ್ಯಕ್ಷರಾದ ರಾಕೇಶ್ ಆರ್.ಪಾನಘಂಟಿ ಅಧ್ಯಕ್ಷತೆ ವಹಿಸಿ, ನಮ್ಮ ಸಮುದಾಯ ಹಿಂದುಳಿದ ಸಮುದಾಯವಾಗಿದ್ದು, ನಮ್ಮಲ್ಲೂ ಆರ್ಥಿಕ ಪರಿಸ್ಥಿತಿಯಲ್ಲಿ ಬಡವರಿದ್ದಾರೆ. ಯಾವುದೇ ಸಔಲಭ್ಯಗಳನ್ನು ಹೋರಾಟದ ಮೂಲಕ ಪಡೆಯುತ್ತಿದ್ದೇವೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಘಟಿಸುವ ಮೂಲಕ, ಜಾಗೃತರಾಗಿ ಆರ್ಥಿಕವಾಗಿ ಸದೃಢರಾಗಿ ಎಂದರು.
ಈ ವೇಳೆ ಮಹಾಮಂಡಳಿಯ ಪ್ರಧಾನ ಕಾರ್ಯದರ್ಶಿ ಪೆಂಡಕೂರ್ ಗಿರೀಶ್, ಟ್ರಸ್ಟ್ನ ಅಧ್ಯಕ್ಷ ಜಿ.ಲಕ್ಷ್ಮೀಪತಿ, ಯುವಜನ ಸಂಘದ ರಾಜ್ಯ ಕಾರ್ಯದರ್ಶಿ ಜಿ.ವಿ ಭರತ್, ತಾಲೂಕು ಅಧ್ಯಕ್ಷ ಬಿ.ಪ್ರವೀಣ್, ಜಿ.ಬಿ.ಕೋಟೇಶ್ವರ್, ಡಿ.ವಿ.ಸತ್ಯನಾರಾಯಣ, ಎಸ್.ಎನ್.ಶಬರೀಶ್, ಜಿ.ಪಿ.ನಾಗೇಶ್, ಜಿ.ಮಂಜಣ್ಣ, ಪ್ರಭಾಕರ ಶೆಟ್ರು, ನಾಗೇಂದ್ರ ಕುಮಾರ್, ಹೆಗ್ಡಾಳ್ ಶ್ರೀನಿವಾಸ್, ಕೆ.ವೆಂಕಟಾ ಚಲಪತಿ, ಡಿ.ಗೊಪಾಲ ಕೃಷ್ಣ, ಕೆ.ಲಕ್ಷ್ಮೀಪತಿ, ಡಿ.ರಮೇಶ್, ಬೆಲ್ಲಂಕೊಂಡ ರಮೇಶ್, ಬನ್ನಿಕಲ್ಲು ವೇಣುಗೋಪಾಲ್,  ಮಂಗನಹಳ್ಳಿ ರಾಘವೇಂದ್ರ, ಕೋರಗಲ್ ಗಿರಿರಾಜ್, ಎಸ್.ಪ್ರಕಾಶ್, ಕಾತ್ರಿಕಿ ಬಸವರಾಜ್, ಮೋಹನ್ ಶೆಟ್ಟಿ, ಪವನ ಹರ್ಷ ಗಂಗಾವತಿ, ಮಾದವಿ ಚಿದ್ರಿ, ಹೆಗ್ಡಾಳ್ ಭಾರತಿ, ವಿಜಯಲಕ್ಷಿö್ಮ ಮತ್ತಿತರರು ಇದ್ದರು.