ಸೀಟು ಹಂಚಿಕೆ: ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆಯ್ಕೆ ಮಾಡಿಕೊಳ್ಳಿ ನಾಲ್ಕು ಕೋರ್ಸಗಳ ಅಧ್ಯಯನಕ್ಕೆ ಅವಕಾಶ
ಬೀದರ್:ಜು.29: ಇಲ್ಲಿಯ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನಾಲ್ಕು ಕೋರ್ಸಗಳ ಅಧ್ಯಯನಕ್ಕೆ ಅವಕಾಶ ಇದೆ ಎಂದು ಕಾಲೇಜು ಪ್ರಾಚಾರ್ಯ ಡಾ. ದೇವೇಂದ್ರ ಹಂಚೆ ತಿಳಿಸಿದ್ದಾರೆ.
ಕಾಲೇಜಿನಲ್ಲಿ ಹಿಂದೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಯಿಂಡ್ ಡಾಟಾ ಸೈನ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ಆಯಿಂಡ್ ಎಂಜಿನಿಯರಿAಗ್ ಕೋರ್ಸಗಳಷ್ಟೇ ಇದ್ದವು. ಪ್ರಸಕ್ತ ಸಾಲಿನಿಂದ ಎಲೆಕ್ಟ್ರಾನಿಕ್ಸ್ ಆಯಿಂಡ್ ಕಮ್ಯುನಿಕೇಷನ್ ಎಂಜಿನಿಯರಿAಗ್ ಹಾಗೂ ಸಿವಿಲ್ ಎಂಜಿನಿಯರಿAಗ್ ಕೋ ರ್ಸಗಳಿಗೂ ಅನುಮತಿ ಕೊಡಲಾಗಿದೆ. ಸಿವಿಲ್ ಎಂಜಿನಿಯರಿAಗನಲ್ಲಿ 30 ಹಾಗೂ ಉಳಿದ ಕೋ ರ್ಸಗಳಲ್ಲಿ ತಲಾ 60 ಸ್ಥಾನಗಳಿವೆ ಎಂದು ಹೇಳಿದ್ದಾರೆ.
ಕಾಲೇಜಿನಲ್ಲಿ ಸಕಲ ಸೌಕರ್ಯಗಳು ಇವೆ. ವಿದ್ಯಾರ್ಥಿ ವಸತಿ ನಿಲಯವೂ ಇದೆ. ಈಗಾಗಲೇ ಎಂಜಿನಿಯರಿAಗ್ ಸೀಟುಗಳ ಹಂಚಿಕೆ ಆರಂಭವಾಗಿರುವ ಕಾರಣ ಜಿಲ್ಲೆಯ ವಿದ್ಯಾರ್ಥಿಗಳು ಮೊದಲ ಆದ್ಯತೆಯಾಗಿ ಕಾಲೇಜು (ಕೆಸಿಇಟಿ ಕಾಲೇಜು ಕೋಡ್ ಇ292) ಆಯ್ಕೆ ಮಾಡಿಕೊಳ್ಳಬೇಕು ಎಂದು ಕೋರಿದ್ದಾರೆ.
ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆಯ ಪ್ರಮಾಣ ಪತ್ರ ಹೊಂದಿದ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶದಲ್ಲಿ ಶೇ 80 ರಷ್ಟು ಮೀಸಲು ಇದೆ. ವಾರ್ಷಿಕ ರೂ. 42,116 ಸಾವಿರ ಶುಲ್ಕ ಮಾತ್ರ ಇದೆ. ಶಿಷ್ಯವೇತನ ಸೌಲಭ್ಯ ಇದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನದಿಂದ ಶುಲ್ಕ ಭರಿಸಲು ಅವಕಾಶ ಇದೆ ಎಂದು ಹೇಳಿದ್ದಾರೆ.
ಬಡ ವಿದ್ಯಾರ್ಥಿಗಳು ಲಾಭ ಪಡೆಯಲಿ
ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನ ಲಾಭ ಪಡೆಯಬೇಕು. ಕಾಲೇಜಿನಲ್ಲಿ ಪ್ರವೇಶ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.
ರೇವಣಸಿದ್ಧ ಜಾಡರ್
ಎಬಿವಿಪಿ ಹಿರಿಯ ಮುಖಂಡ