ನ್ಯಾಯಾಲಯ ನೂತನ ಕಟ್ಟಡ ನಿರ್ಮಾಣಕ್ಕೆ ಮನವಿ
ಅಫಜಲಪುರ:ಜು.29: ತಾಲೂಕಾ ವಕೀಲರ ಸಂಘದ ಅಧ್ಯಕ್ಷರ ನೇತೃತದ ನಿಯೋಗವು ಅಫಜಲಪುರ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಎನ್.ವಿ ಅಂಜರಿಯಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಹರೀಷ್ ಎಚ್. ರವರು ಸೇರಿದಂತೆ ಸಂಘದ ಅಧ್ಯಕ್ಷ ಎಸ್.ಎಸ್ ಪಾಟೀಲ್, ಮಾಜಿ ಅಧ್ಯಕ್ಷ ಎಂ.ಎಲ್ ಪಟೇಲ್, ಸಿ.ಎಸ್ ಹಿರೇಮಠ, ಸಿದ್ದಾರ್ಥ ಬಸರಿಗಿಡ, ರಾಜೇಂದ್ರ ಸರ್ದಾರ, ಡಿ. ಮಂಜುನಾಥ, ಸುಧೀರ ಹತ್ತಿ, ಅನೀಲ ಜಮಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.