ದೊಡ್ಡದನ್ನು ತಿಳಿದವನೇ ದೊಡ್ಡವನು: ಕಾಶಿ ಜಗದ್ಗುರು
ಕಲಬುರಗಿ:ಜು.29:ದೊಡ್ಡವನೆಂದೆನಿಸಿಕೊಳ್ಳಬೇಕಾದರೆ ಎಲ್ಲಕ್ಕೂ ದೊಡ್ಡದಾದ ತತ್ವವನ್ನು ತಿಳಿದುಕೊಳ್ಳಬೇಕು ಆ ದೊಡ್ಡ ತತ್ವವೇ ಪರಬ್ರಹ್ಮ ತತ್ವವು. ಯಾರು ಆ ಪರಬ್ರಹ್ಮ ತತ್ವವನ್ನುತನ್ನ ಆತ್ಮವನ್ನಾಗಿ ತಿಳಿದುಕೊಳ್ಳುತ್ತಾರೆಯೋ ಅವರೇ ಪರಸ್ಥಲದ ಶಿವಯೋಗಿಯು. ಅವರೇ ಎಲ್ಲರಿಗಂತಲೂ ದೊಡ್ಡವರು ಎಂಬ ವಿಚಾರವನ್ನು ಶ್ರೀ ಕಾಶಿ ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.