ಹದಗೆಟ್ಟ ರಸ್ತೆ ದುರಸ್ತಿಗೆ ಸಾರ್ವಜನಿಕರ ಆಗ್ರಹ
ಕಾಳಗಿ.ಜು.29: ತಾಲೂಕಿನ ಹೇರೂರ್ (ಕೆ) ದಿಂದ ಸಾತ್ಕೆಡ್ ಹೋಗುವ ಗ್ರಾಮದ ರಸ್ತೆಗಳಲ್ಲಿನ ತಗ್ಗು-ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎಂದು ಕಲಬುರಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಂಚಾಲಕರಾದ ಕಾಶಿನಾಥ ಶೆಳ್ಳಗಿ ಆರೋಪಿಸಿದ್ದಾರೆ.
ಈ ರಸ್ತೆ ಎರಡು ಬದಿಯಲ್ಲಿ ವಾಹನಗಳು ಎದುರು ಬದುರಾದರೆ ಸಾಕು ವಾಹನ ಬಿದ್ದೆ ಬಟ್ಟಿತ್ತು ಏನೋ ಎಂಬ ಭಯವಾಗಿ ಬಿಡುತ್ತದೆ. ಡಾಂಬರ್ ರಸ್ತೆ ಬದಿಯಲ್ಲಿ ಅಷ್ಟೊಂದು ಪ್ರಮಾಣದ ಕಚ್ಚಾ ರಸ್ತೆಯ ಮಣ್ಣು ಕಿತ್ತುಕೊಂಡು ಹೋಗಿದ್ದರು. ಸಹ ಕಳೆದ ಐದಾರು ವರ್ಷಗಳಿಂದ ರಸ್ತೆ ಬಲ ಮತ್ತು ಎಡ ಬದಿಯಲ್ಲಿ ನಿರ್ಮಾಣವಾದ ಆಳವಾದ ತಗ್ಗು ಗುಂಡಿಗಳನ್ನು ತುಂಬುವ ಕಾರ್ಯ ಮಾಡಿಲ್ಲ.
ಈ ರಸ್ತೆಯಲ್ಲಿ ಕಳೆದ ವರ್ಷಗಳಿಂದ ಸುಮಾರು ಮೂರು, ನಾಲ್ಕು ಜನ ದ್ವಿಚಕ್ರ ವಾಹನ ಸವಾರರು ಅಪಘಾತ ಸಂಭವಿಸಿ ಜೀವ ತೆತ್ತ ಉದಾಹರಣೆಗಳಿವೆ. ಅಲ್ಲದೆ ತಾಲೂಕಿನ ಅನೇಕ ರಾಜ್ಯ, ಜಿಲ್ಲಾ ರಸ್ತೆ ಬದಿಯಲ್ಲಿ ಅಪಘಾತಕ್ಕೆ ಸಂಬAಧಿಸಿದ ಮುಂಜಾಗೃತೆ ಮೂಡಿಸುವ ಫಲಕಗಳು ಅಳವಡಿಸಿರುವುದಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿ ಕಂಡು ಕಾಣದಂತೆ, ಕೇಳಿ ಕೇಳದಂತೆ ಮೂಕವಿಸ್ಮಿತರಾಗಿ ಬೇಜಾಬ್ದಾರಿತನದಿಂದ ಕುಳಿತಿದ್ದಾರೆ ಎಂದು ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ. ಇನ್ನಾದರೂ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೆ ರಸ್ತೆಸೈಡ್ ಪಟ್ಟಿ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದು ವಾಹನಗಳ ಸವಾರರಾದ ಹಾಗೂ ಮಾಲೀಕರಾದ ಆಗ್ರಹವಾಗಿದೆ.