ಹಿಂದುಳಿದ ಜಾತಿಗಳ ಒಕ್ಕೂಟದ ಸಭೆಸಂಘಟನೆಗೆ ಪದಾಧಿಕಾರಿಗಳ ಆಯ್ಕೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಜು29 : ನಗರದ ಶ್ರೀ ಯಲ್ಲಾ ಲಿಂಗೇಶ್ವರ ಮಠದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಸಂಘಟನಾ ಸಭೆ ನಡೆಸಿ ಸಂಘಟನೆಯ ಬಲವರ್ಧನೆಗೆ  ಸಂಚಾಲನ ಸಮಿತಿಯನ್ನು ರಚಿಸಲಾಯಿತು.
ಭಾನುವಾರ ನಡೆದ ಸಭೆಯಲ್ಲಿ ಉಪನ್ಯಾಸಕ ದೇವಣ್ಣ ಮಾತನಾಡಿ  ಹಿಂದುಳಿದ 198 ಜಾತಿಗಳು ಒಗ್ಗಟ್ಟಾಗದಿದ್ದರೆ ಮುಂದಿನ ಪೀಳಿಗೆಗೆ ಸರಕಾರಿ ಸೌಲಭ್ಯಗಳು ಮತ್ತು ಸರಕಾರಿ ಉದ್ಯೋಗಗಳು ಮರಿಚಿಕಿಯಾಗಲಿವೇ. ರಾಜಕಾರಣದಲ್ಲಿ ಅವಕಾಶಗಳು ಕೈ ಬಿಟ್ಟು ಹೋಗಲಿವೆ ಎಂದರು. ಹಿಂದುಳಿದ ಜಾತಿಗಳನ್ನು ಒಗ್ಗಟ್ಟಾಗಲು ಬಿಡದ ಷ್ಟ ಶಕ್ತಿಗಳ ಕೈವಶದಲ್ಲಿ ಹಿಂದುಳಿದ ಜಾತಿಯ ನಾಯಕರು ಇರುವುದರಿಂದ ಹಿಂದುಳಿದ ಜಾತಿಯವರು ಕೇವಲ ಮತ ಬ್ಯಾಂಕ್ ಆಗಿ ಬಳಕೆಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಹಿಂದುಳಿದ ಜಾತಿಗಳ ಮೀಸಲಾತಿ ಕಿತ್ತುಕೊಳ್ಳಲು ಕೆಲವು ಮೇಲ್ವರ್ಗದ ಜಾತಿಯ ಜನರು ಹಿಂದುಳಿದ ವರ್ಗಕ್ಕೆ ಸೇರ್ಪಡೆಯಾಗಲು ಹಾವಣಿಸುತ್ತಿದ್ದಾರೆ ಇದನ್ನು ಒಗ್ಗಟ್ಟಿನಿಂದ ಖಂಡಿಸುವ ಅಗತ್ಯವಾಗಿದೆ ಎಂದರು.
ಸಭೆಯಲ್ಲಿ  ದೇವಣ್ಣ. ಲಿಂಗರಾಜ್ ಯಾದವ್ ಕುಬೇರಪ್ಪ ದಲ್ಲಾಲಿ. ಮಾರೇಶ್ ಮಡಿವಾಳ. ಲಕ್ಕಜ್ಜಿ ಮಲ್ಲಿಕಾರ್ಜುನ್. ರಾಘವೇಂದ್ರ ಮಂಜುನಾಥ್ ಮಾತನಾಡಿದರು.
ಪದಾಧಿಕಾರಿಗಳು:  ಹಿಂದುಳಿದ ಜಾತಿಗಳ ಒಕ್ಕೂಟಕ್ಕೆ ಜಿಲ್ಲಾಧ್ಯಕ್ಷರನ್ನಾಗಿ ಬುಡ್ಡಿ ಬಸವರಾಜ್ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರನ್ನಾಗಿ. ಗುರುಲಿಂಗಪ್ಪ. ಕೋಶಾಧ್ಯಕ್ಷರಾಗಿ. ಮಾರೇಶ್ ಮಡಿವಾಳ. ಕಾರ್ಯದರ್ಶಿಯನ್ನಾಗಿ ಲಕ್ಕಚ್ಚಿ ಮಲ್ಲಿಕಾರ್ಜುನ್ ಇವರನ್ನು ಆಯ್ಕೆ ಮಾಡಿದರು. ಸಂಘಟನಾ ಸಭೆಯಲ್ಲಿ ಕೂಡ್ಲಿಗಿ ಕೊಟ್ಟೂರು ಹರಪನಹಳ್ಳಿ ಹಗರಿಬೊಮ್ಮನಹಳ್ಳಿ ಹೊಸಪೇಟೆ ತಾಲೂಕಿನ ನೂರಾರು ಜನ ಭಾಗವಹಿಸಿದ್ದರು ವೆಂಕಪ್ಪ .ಮೈನಹಳ್ಳಿ ಶಿವರಾಜ್.ಹನುಮಂತಪ್ಪ. ಸೋಮಣ್ಣ. ರಾಘವೇಂದ್ರ .ಮಂಜುನಾಥ. ಸಿ ನಾಗೇಶ್. ಕೋಡಿಹಳ್ಳಿ ಮಲ್ಲಿಕಾರ್ಜುನ. ಬಾರಿಕರ ಹುಲುಗಪ್ಪ. ಸಿದ್ದೇಶ್. ಉಚಿನಿ ವೆಂಕಟೇಶ್. ಗೋಪಾಲಪ್ಪ ಪಾಂಡುರಂಗ. ದೊಡ್ಡದುರ್ಗಪ್ಪ. ಶಿರವಿ ಕುಮಾರಸ್ವಾಮಿ ಇತರರು ಪಾಲ್ಗೊಂಡಿದ್ದರು.