ಏಕ ಭಾರತಕ್ಕಾಗಿ ಪಾಮಡಿಯಿಂದ ಮುಂಬೈಗೆಪಾದಯಾತ್ರೆ ಹೊರಟ  ಸತೀಶ್ ಕುಮಾರ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,29- ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಏಕ್ ಭಾರತ್ ಸಂಕಲ್ಪದೊಂದಿಗೆ ಹಿಂದು ಧ್ಜಜ ಹಿಡಿದು  900 ಕಿಲೋ ಮೀಟರ್ ದೂರದ ಮುಂಬೈಗೆ ಪಾದಯಾತ್ರೆ ಬೆಳಸಿದ್ದಾರೆ 63 ವರ್ಷದ ಸತೀಶ್ ಕುಮಾರ್ ಉತ್ತರ್ಕರ್ ಆಂದ್ರಪ್ರದೇಶದ ಗುತ್ತಿ ತಾಲೂಕಿನ ಪಾಮಡಿ ಗ್ರಾಮದಿಂದ.
ಅಟೋಮೊಬೈಲ್ ಷಾಪ್ ಇಟ್ಟುಕೊಂಡು ವ್ಯಾಪಾರಿಯಾಗಿರುವ  ಇವರು ಜು.25 ರಂದು  ಪಾಮಡಿಯಿಂದಲೇ ಪಾದಯಾತ್ರೆ ಆರಂಭ ಮಾಡಿದ್ದಾರೆ.
ಪ್ರತಿದಿನ 25 ರಿಂದ 30 ಕಿಲೋ ಮೀಟರ್  ನಡೆಯುವ ಇವರು ಬಳ್ಳಾರಿ ಯಿಂದ ಕೊಪ್ಪಳ, ಜಳಕಿ ಮೂಲಕ  ಮಹರಾಷ್ಟ್ರ ಪ್ರವೇಶ ಮಾಡಿ ಪಂಡರಾಪುರ, ಪುಣೆ ಮೂಲಕ ಸೆ.5 ರ ವೇಳೆಗೆ ಮುಂಬೈಗೆ ತೆರಳಲಿದ್ದಾರಂತೆ.
ಪಾದಯಾತ್ರೆ ಸಂದರ್ಭದಲ್ಲಿ ದೇವಾಲಯಗಳ ದರ್ಶನ ಜೊತೆಗೆ ಭೇಟಿ ಮಾಡುವ ಜನರಿಗೆ ನಮ್ಮ ದೇಶದ ಸಂರಕ್ಷಣೆ, ಅದಕ್ಕಾಗಿ ನಮ್ಮದೇ ಕೊಡುಗೆ ನೀಡುವ ಕಾರ್ಯ ಆಗಬೇಕು ಎಂದು ತಿಳಿಸುವೆ ಎನ್ನುತ್ತಾರೆ  ಸಂಜೆವಾಣಿಯೊಂದಿಗೆ ಮಾತನಾಡಿದ ಸತೀಶ್. ಮುಂಬೈಗೆ ತೆರಳಿ ಶ್ರೀ ಲಾಲ್ ಬಾಗ್ ರಾಜ್ ಗಣೇಶ್ ಟ್ರಸ್ಟ್ ಅಧ್ಯಕ್ಷರನ್ನು ಭೇಟಿ ಮಾಡಲಿದೆ.
ನನ್ನ ಪಾದಯಾತ್ರೆ ಈಗ ನಾಲ್ಕು ದಿನದಲ್ಲಿ 100 ಕಿಲೋ ಮೀಟರ್ ಕ್ರಮಿಸಿರುವೆ ಮಾರ್ಗ ಮಧ್ಯದಲ್ಲಿ ಬರುವ ಗ್ರಾಮಗಳ ನಗರ, ಪಟ್ಟಣಗಳ ಜನತೆ ಉತ್ತಮ ರೀತಿಯಲ್ಲಿ ಸ್ಪದಿಸುತ್ತಿದ್ದಾರೆಂದರು.
ಪತ್ನಿ ಯು.ಚಂದ್ರಕಲಾ ಮತ್ತು ಮಕ್ಕಳು ನನಗೆ ಬೆಂಬಲ‌ ನೀಡಿ ಯಶಸ್ವಿಯಾಗಿ ಬನ್ನಿ ಎಂದು ಹರಿಸಿದ್ದಾರೆಂದರು.
ಇಂದು ಬಳ್ಳಾರಿ ನಗರಕ್ಕೆ ಬಂದು ದುರ್ಗಮ್ಮ ದರ್ಶನ ಪಡೆದು. ನಗರದ ಸೇಂಟ್ ಫಿಲೋಮಿನ,  ಸೇಂಟ್ ಜಾನ್, ವಾರ್ಡ್ ದಲ್ಲಿ  ಪಿಯು ಅಭ್ಯಾಸ ಮಾಡಿದ್ದ ಇವರನ್ನು ಸ್ನೇಹಿತರಾದ ಕಲ್ಗುಡಿ ಮಂಜುನಾಥ್, ವಿಶ್ವನಾಥ್ ಗುಪ್ತ, ಶ್ರೀಕಾಂತ್ ಹರ್ಲಾಲ್ಕ, ಬಿ.ರವಿಶಂಕರ್ ಅಗರವಾಲ್, ಕೊಂಚಿಗೇರಿ ವಿಶ್ವನಾಥಗೌಡ,  ಸುದೇಶ್ ಹಿರೇಮಠ್,ಜುನೇಡ್ ಅಹಮ್ಮದ್ ಮೊದಲಾದವರು ಸ್ವಾಗತಿಸಿ  ಸ್ನೇಹಿತನ ಇಂತಹ ಪ್ರಯತ್ನಕ್ಕೆ ಶುಭ ಹಾರೈಸಿದರು.