ಹುಲಿ ಸಂತತಿ ಸಂರಕ್ಷಣೆ ಜಾಗೃತಿ
ಬೆಂಗಳೂರು: ಅಂತರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್‌ಲೈಟ್ ಫೌಂಡೇಶನ್ ವತಿಯಿಂದ ಸಂಸ್ಥಾಪಕಿ ಡಾ.ಅಂಬಿಕಾ.ಸಿ ನೇತೃತ್ವದಲ್ಲಿ ‘ವಿಶ್ವ ಹುಲಿ ದಿನಾಚರಣೆ’ ಕಾರ್ಯಕ್ರಮ ಆಯೋಜಿಸಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಜಯನಗರದ ಬಿಬಿಎಂಪಿ ಆಟದ ಮೈದಾನದಲ್ಲಿ ಹುಲಿ ಸಂರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ತಜ್ಞರು ನಶಿಸುತ್ತಿರುವ ಹುಲಿ ಸಂತತಿ ಹಾಗೂ ಅದರ ರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಇದೇ ವೇಳೆ ಸುಮಾರು ೨೫೦ಕ್ಕೂ ಹೆಚ್ಚು ಶಾಲಾ ಮಕ್ಕಳು ಹುಲಿಯ ಮುಖವನ್ನು ಹೋಲುವ ಕಾಗದದ ಮುಖವಾಡಗಳನ್ನು ತೊಟ್ಟು, ವಿಶ್ವ ಹುಲಿ ದಿನವನ್ನು ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಸದಸ್ಯ ಲಕ್ಷ್ಮಿಕಾಂತ್,
ನಟ ನಿರ್ಮಾಪಕ ಗಂಡಸಿ ಸದನಂದ ಸ್ವಾಮಿ, ಪರಿಸರವಾದಿ ಸಂತೋಷ್.ಆರ್ ಸುತಾರ್, ನಿವೃತಾ ಅರಣ್ಯ ಅಧಿಕಾರಿ ನಾಗಭೂಷಣ್, ವನ್ಯಜೀವಿ ಛಾಯಾಗ್ರಹಕ ಶಿವಕುಮಾರ್ ನಟರಾಜನ್, ಮಂಜುಳಾ ಚಂದ್ರು, ಶಾಲಾ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.