ದೇವಸ್ಥಾನ ಜೀರ್ಣೋದ್ಧಾರಕ್ಕೆ ಮನವಿ
ಬ್ಯಾಡಗಿ,ಜು.೨೯: ತಾಲೂಕಿನ ಶಿಡೇನೂರ ಹಾಗೂ ಬಿದರಕಟ್ಟಿ ಗ್ರಾಮಗಳ ವ್ಯಾಪ್ತಿಯಲ್ಲಿನ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿರುವ ಶ್ರೀ ಗವಿಸಿದ್ದೇಶ್ವರ ದೇವಸ್ಥಾನವನ್ನು ದೈವಿವನ ಮಾದರಿಯ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಪಡಿಸಬೇಕು ಎಂದು ಶಿಡೇನೂರ ಗ್ರಾಮಸ್ಥರು ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಳೆಗೆ ಹಾನಿಯಾದ ಮನೆಗಳನ್ನು ವೀಕ್ಷಿಸಲು ಶಿಡೇನೂರ ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಶಾಸಕರಿಗೆ ಸನ್ಮಾನಿಸಿ ಮನವಿ ಪತ್ರವನ್ನು ಸಲ್ಲಿಸಿದ ಗ್ರಾಮಸ್ಥರು ಮಾತನಾಡಿ, ದೇವಸ್ಥಾನವು ಬಹಳಷ್ಟು ಶಿಥಿಲಗೊಂಡು ಬೀಳುವ ಅಂಚಿನಲ್ಲಿದೆ. ಬಹು ಪುರಾತನ ಕಾಲದ ಈ ದೇವಸ್ಥಾನಕ್ಕೆ ಕಾಯಕಲ್ಪ ಅಗತ್ಯವಾಗಿದೆ. ತಾವು ಸದ್ಯ ಅರಣ್ಯ ನಿಗಮದ ಅಧ್ಯಕ್ಷರಾಗಿದ್ದು ದೇವಸ್ಥಾನಕ್ಕೆ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ದೈವಿವನ ಮಾದರಿಯಲ್ಲಿ ದೇವಸ್ಥಾನವನ್ನು ಅಭಿವೃಧ್ದಿ ಪಡಿಸುವುದು. ದೇವಸ್ಥಾನಕ್ಕೆ ಹೋಗಲು ರಸ್ತೆ ಮತ್ತು ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದಾನಪ್ಪ ಚೂರಿ, ರಮೇಶ ಸುತ್ತಕೋಟಿ, ಎಚ್.ಡಿ.ಗಡಿಗೋಳ. ಚನಬಸಪ್ಪ ಹುಲ್ಲತ್ತಿ, ಕಿರಣ ಗಡಿಗೋಳ, ಪರಮೇಶ್ವರಪ್ಪ ತೆವರಿ, ಭುಜಲಿಂಗಪ್ಪ ಯೋಗಿಕೊಪ್ಪ, ವೀರನಗೌಡ ಮಲ್ಲಾಡದ, ರುದ್ರಪ್ಪ ಹಲಗೇರಿ, ಶಿವನಗೌಡ ಪಾಟೀಲ, ಡಿ.ಎಚ್.ಬುಡ್ಡನಗೌಡ್ರ, ಬೀರಪ್ಪ ಬಣಕಾರ, ಮಾರುತಿ ಅಚ್ಚಿಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.