ವಿಶೇಷಚೇತನ ಮಕ್ಕಳ ಆಟೋಟಗಳಿಗಾಗಿ ವಿಶೇಷ ತರಬೇತಿ ಶ್ಲಾಘನೀಯ; ಮಾಜಿ ಸಚಿವೆ ಶಶಿಕಲಾ ಜೊಲ್ಲೆ
ದಾವಣಗೆರೆ.ಜು.೨೯: ಬೌದ್ಧಿಕ ಸವಾಲು ಎದುರಿಸುತ್ತಿರುವ ಮಕ್ಕಳ ದೈಹಿಕ, ಮಾನಸಿಕ ಹಾಗು ಸಾಮಾಜಿಕ ಅಭಿವೃದ್ಧಿಗಾಗಿ ಆಟೋಟಗಳ ತರಬೇತಿಗೆ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ವಿಶೇಷ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.ಸ್ಪೆಷಲ್ ಒಲಂಪಿಕ್ಸ್ ಭಾರತ್ ಹಾಗೂ ದಾವಣಗೆರೆ ಜಿಲ್ಲಾ ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕ ವತಿಯಿಂದ ನಗರದ  ನೇತಾಜಿ ಸುಭಾಷ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ  ಆಯೋಜಿಸಿರುವ ರಾಜ್ಯ ಮಟ್ಟದ ಬೂಚಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.ರಾಜ್ಯದ 31 ಜಿಲ್ಲೆಯ ಪೈಕಿ 28 ಜಿಲ್ಲೆಯಲ್ಲಿ ವಿಶೇಷ ತರಬೇತಿ, ಕಾರ್ಯಾಗಾರ ನಡೆಸ ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಜಿಲ್ಲೆಯಲ್ಲಿ ತರಬೇತಿ, ಕಾರ್ಯಾಗಾರ ನಡೆಸ ಲಾಗುವುದು ಎಂದು ತಿಳಿಸಿದರು.ವಿಶೇಷ ಮಕ್ಕಳಿಗೆ ಕ್ರೀಡಾ ತರಬೇತಿಗಾಗಿಯೇ ವಿಶೇಷ ತರಬೇತುದಾರ ನೇಮಕ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ವಿಶೇಷ ಮಕ್ಕಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಮಂಜುನಾಥ್, ಡಾ. ಕೆ.ಕೆ. ಪ್ರಕಾಶ್,ಸ್ಪೆಷಲ್‌ ಒಲಂಪಿಕ್ಸ್ ಭಾರತ್ ಕರ್ನಾಟಕದ ಖಜಾಂಚಿ ನಾಗರಾಜ್ ಶಿವನಪ್ಪನವರ್,  ರೂಪ್ ಸಿಂಗ್,ಅಮರೇಂದ್ರ ಅಂಜನಪ್ಪ, ಹೀರಾವತಿ, ಶಾಂತಾಭಟ್, ರಮಣ್ ಲಾಲ್ ಸಂಘವಿ, ಸುರೇಂದ್ರನಾಥ್ ನಿಶಾನಿಮಠ್, ನಾಗರಾಜ್ ಇತರರು ಇದ್ದರು.