ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೀದಿ ವ್ಯಾಪಾರಿಗಳ ನಿಯೋಗದಿಂದ ಮನವಿ
ಕಲಬುರಗಿ,ಜು.೨೯- ನಗರದ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪರಸ್ತರಿಗೆ ಈಗಲೇ ಪಾಲಿಕೆ ಗುರುತಿಸಿರುವ ನಿಗದಿತ ಸ್ಥಳದಲ್ಲಿ ವ್ಯಾಪಾರ ಕೈಗೊಳ್ಳಲು ಅಲ್ಲಿ ಕುಡಿಯುವ ನೀರು, ವಿದ್ಯುತ, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ನೆತೃತ್ವದ ನಿಯೋಗ ಭೇಟಿ ಮಾಡಿ ಬೇಡಿಕೆಯ ಮನವಿ ಸಲ್ಲಿಸಿದೆ.
ಮಹಾನಗರದ ಹಳೆ ಜೇಲು ಚೌಪಾಟಿ ಬಳಿ ಬೀದಿ ವ್ಯಾಪಾರಿಗಳಿಗೆ ಸ್ಥಳವನ್ನು ಗುರುತಿಸಲಾಗಿದೆ ಆದರೇ ಅಲ್ಲಿ ಮೂಲ ಸೌಕರ್ಯಗಳಿಲ್ಲದ ಕಾರಣ ಸುಪರ ಮಾರುಕಟ್ಟೆಯಲ್ಲಿ ಸರಾಫ ಬಜಾರ, ಕಿರಾಣಾ ಚಪ್ಪಲ ಬಜಾರ, ಕಪಡಾ, ಜನತಾ ಬಜಾರ, ದತ್ತ ಬಜಾರ, ಸಿಟಿ ಬಸ್ ನಿಲ್ದಾಣ ಸೇರಿದಂತೆ ಕಲಬುರಗಿ ನಗರದಾದ್ಯಂತ ಪ್ರಮುಖ ರಸ್ತೆಗಳ ಬೀದಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಅಲ್ಲಿಂದ ನಿಗದಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಮುನ್ನ ಅಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
ಕಳೆದ ೨೦೧೪ ಮತ್ತು ೨೦೧೯ ರ ಕಾಯ್ದೆಯನ್ವಯ ದಿನಾಂಕ: ೦೨.೦೮.೨೦೧೭ ರಂದು ಅಂದಿನ ನಗರಾಭಿವೃದ್ಧಿ ಸಚಿವರಾದ ರೋಷನ್ ಬೇಗ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹಾಗೂ ಮಹಾನಗರ ಪಾಲಿಕೆ ಆಯುಕ್ತರು
ಸೂಪರ ಮಾರುಕಟ್ಟೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಹಳೆ ಜೈಲು ಪ್ರದೇಶದ ಸ್ಥಳದಲ್ಲಿ ವ್ಯಾಪಾರ ಮಾಡಲು ಅಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೌಕರ್ಯಗಳನ್ನು ಒದಗಿಸಬೇಕೆಂದು ನಗರಾಭಿವೃದ್ಧಿ ಸಚಿವರು ಪಾಲಿಕೆಯ ಆಯುಕ್ತರಿಗೆ ನಿರ್ದೇಶನ ನಿಡಿದ್ದರು ಅದರೇ ಇಲ್ಲಿಯವರೆಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಕೂಡ ಒದಗಿಸಿಲ್ಲ.
ಅಲ್ಲದೇ ಕಳೆದ ೨೦೧೭ ರಿಂದ ಪಾಲಿಕೆಯ ವಲಯ-೧, ೨ ಮತ್ತು ೩ ರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಐ.ಟಿ.ಐ. ಕಾಲೇಜು ಎದುರುಗಡೆ, ಎಂ.ಎಸ್.ಕೆ.ಮಿಲ್ ರಸ್ತೆ ಕಲಬುರಗಿ, ಡಂಕಾ ವೃತ್ತದಿಂದ ಪಾಕಿಜಾ ವೈನ್ ಶಾಪ್ ವರೆಗೆ, ಕೆ.ಎಂ.ಎಫ್ ಡೈರಿ’ ಎದುರುಗಡೆ, ಆಣಕಲ್ ಪೆಟ್ರೋಲ್ ಬಂಕ್ ಎದುರುಗಡೆ, ಅಂಡರÀಬ್ರಿಜ್ ಪಂಚಶೀಲ ನಗರ, ಆಳಂದ ಚೆಕ್‌ಪೊಸ್ಟ, ಸೂಪರ ಮಾರ್ಕೆಟ್ ಹೀಗೆ ಒಟ್ಟು ಏಳು ಪ್ರದೇಶಗಳಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಆಯಾ ನಿಗದಿತ ಸ್ಥಳಗಲ್ಲಿಯೇ ವ್ಯಾಪಾರ ಕೈಗೊಳ್ಳಲು ತುರ್ತಾಗಿ ಮೂಲ ಸೌಕರ್ಯ ಕಲ್ಪಿಸಬೇಕು.
ಬೀದಿಬದಿ ಕುರಳಿತು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಂದ ವಾಹನ ಸಂಚಾರಕ್ಕೆ, ಜನಸಂದಣಿಯ ಓಡಾಟಕ್ಕೆ ಸಹಜವಾಗಿ ತುಂಬಾ ತೊಂದರೆಗಳು ಆಗುತ್ತವೆ. ವಿಶೇಷವಾಗಿ ದಸರಾ, ದೀಪಾ, ಗಣೇಶ ಉತ್ಸವ, ರಮ್‌ಜಾನ್ ಇತರ ಧಾರ್ಮಿಕ ಹಬ್ಬಗಳ ದಿನಗಳಲ್ಲಿ ಸಾರ್ವಜನಿಕರು ಸಾಮಗ್ರಿಗ ಖರಿದಿಗಾಗಿ ಸುಪರ ಮಾರುಕಟ್ಟೆಗೆ ಬರುತ್ತಾರೆ ಆಗ ಜನಸಂದಣಿಯಿAದ ಹಣ, ವಸ್ತು ಮೊಬೈಲ್ ಕಳ್ಳತನಗಳು ಹೆಚ್ಚಾಗಿ ನಡೆಯುತ್ತವೆ ಇದನ್ನು ತಡೆಯಲು ಪೊಲೀಸ ಇಲಾಖೆ ಅಗತ್ಯ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ನಿಯೋಗದಲ್ಲಿ ಚÀಂದ್ರಶೇಖರ ಪಾಟೀಲ, ಚಂದ್ರಗಸ ಚಿತ್ರ, ಲಿಂಗರಾಜ ಕಡೆ. ಆಶೋಕ ರಡ್ಡಿ, ಬಾಬು ಪರೀಟ, ವೆಂಕಟೇಶ, ಕಂಬಳ, ವಿಕ್ರಂ ಪವಾರ, ತಿಳಗೋಳ ಮತ್ತು ಕನ್ನಡ ಪರ ಹೋರಾಟಗಾರರಾದ ಮಂಜುನಾಥ ಸಾಲವಾರಕರ, ದತ್ತು, ಭಾಸಗಿ, ರಾಭವೇಂದ್ರ ಕುಲಕರ್ಣಿ ಸೇರಿದಂತೆ ಹಲವರಿದ್ದರು.