ಕಾರ್ಗಿಲ್ ವಿಜಯೋತ್ಸವ: ನಗರದಲ್ಲಿ ಮ್ಯಾರಥಾನ್ ಓಟ
ಸಂಜೆವಾಣಿ ನ್ಯೂಸ್
ಮೈಸೂರು: ಜು.೨೯:- ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆ ಕಾರ್ಗಿಲ್ ಬೆಟ್ಟದಲ್ಲಿ ಹಾರಡಿದ ತ್ರಿವರ್ಣ ಧ್ವಜ ದೊಂದಿಗೆ ಟಾರ್ಗೆಟ್ ಪಿಒಕೆ ಹೆಸರಿನಲ್ಲಿ ಮೈಸೂರು ನಗರದಲ್ಲಿ ಮ್ಯಾರಥಾನ್ ಓಟ. ಕಾರ್ಗಿಲ್ ಯುದ್ಧ ಗೆದ್ದು ೨೫ ವರ್ಷ ತುಂಬಿದ್ದ ಹಿನ್ನೆಲೆ ಯುವಾ ಬ್ರಿಗೇಡ್ ಸಂಘಟನೆ ಭಾನುವಾರ ಬೆಳಿಗ್ಗೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಟಾರ್ಗೆಟ್ ಪಿಒಕೆ ಎಂಬ ಹೆಸರಿನ ಮ್ಯಾರಥಾನ್ ಓಟವನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮಕ್ಕೆ ಕಾರ್ಗಿಲ್ ನ ಹುತಾತ್ಮ ಯೋಧ ಮೈಸೂರಿನ ಹೇಮ ಚಂದು ಅವರ ತಂದೆ ಮರಿಗೌಡರು ಹಾಗೂ ಮಾಜಿ ಸೈನಿಕ ಸುಬೇದಾರ್ ರಾಜೇಂದ್ರ ಬಸ್ಟಿನ್, ಡಾ.ಚಂದ್ರಶೇಖರ್ ರವರು ಕಾರ್ಗಿಲ್ ಬೆಟ್ಟದಲ್ಲಿ ಹಾರಡಿದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು.
ಕಾರ್ಗಿಲ್ ಬೆಟ್ಟದಲ್ಲಿ ಹಾರಡಿದ ತ್ರಿವರ್ಣ ಧ್ವಜವನ್ನು ಭಾರತೀಯ ಸೇನಾ ಅಧಿಕಾರಿಗಳಿಂದ ಕಾರ್ಗಿಲ್ ನಲ್ಲಿ ಹಸ್ತಾಂತರಿಸಿಕೊಂಡು ಚಕ್ರವರ್ತಿ ಸೂಲಿಬೆಲೆ ಅವರು ತಂದಿದ್ದ ಧ್ವಜ.೩೦೦ ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ್ದ ರಾಷ್ಟ್ರದ ಭಕ್ತ ಯುವಕರ ದಂಡು ಶೀಘ್ರವಾಗಿ ಪಿ.ಓ.ಕೆ ಭಾರತದ ವಶಕ್ಕೆ ಬರುವಂತಾಗಲಿ ಎಂದು ಸಂಕಲ್ಪಮಾಡಿ ಓಪನ್ ಜೀಪ್ ನಲ್ಲಿ ಸಾಗುತ್ತಿದ್ದ ಕಾರ್ಗಿಲ್ ನ ಬೆಟ್ಟದಲ್ಲಿ ಹಾರಡಿದ ವಿಜಯ ಪತಾಕೆಯನ್ನು ಹಿಂಬಾಲಿಸುತ್ತ ಕೋಟೆಯ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಭಾರತ ಮಾತೆಗೆ, ಹುತಾತ್ಮ ಯೋಧರಿಗೆ ಜೈಕಾರ ಹಾಕುತ್ತ ಓಟ ಆರಂಭಿಸಿದ ಯುವಕರು ಗಾಂಧಿ ಚೌಕ, ಚಿಕ್ಕ ಗಡಿಯಾರ,ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ನೂರಡಿ ರಸ್ತೆ, ಗನ್ ಹೌಸ್, ಹಾರ್ಡಿಂಜ್ ವೃತ್ತ ಬಳಸಿ ಕೋಟೆ ಆಂಜನೇಯ ಸ್ವಾಮಿ ದೇವಾಲಯ ತಲುಪುವುದರೊಂದಿಗೆ ೪ ಕಿ.ಮೀ ಟಾರ್ಗೆಟ್ ಪಿ.ಓ.ಕೆ ಓಟದ ಗುರಿ ತಲುಪಿ ವಿಜಯ ಪತಾಕೆ ಯೊಂದಿಗೆ ಪೋಟೋ, ಸೆಲ್ಫಿಗಳನ್ನು ತೆಗೆದುಕೊಂಡ ಸಂಭ್ರಮಿಸಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಯುವಾ ಬ್ರಿಗೇಡ್ ಸಂಘಟಕ ಚಂದ್ರಶೇಖರ್ ಕಾರ್ಗಿಲ್ ಯುದ್ಧದ ಕುರಿತು ಮಾಹಿತಿ ನೀಡುವುದರ ಜೊತೆಗೆ ಪಿ.ಒ.ಕೆ ಭಾರತದ ಭಾಗವಾಗ ಬೇಕೆಂಬ ನಮ್ಮ ಇಂದಿನ ಸಂಕಲ್ಪ ಸದ್ಯದಲ್ಲೇ ಈಡೇರಿದರು ಆಶ್ಚರ್ಯವಿಲ್ಲ ಏಕೆಂದರೆ ಇದು ಹೊಸ ಭಾರತ, ರಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಹಾಗೂ ಭಾರತ ವಿಶ್ವದ ಮುಂಚೂಣಿ ದೇಶವಾಗಿ ಹೊರಹೊಮ್ಮಿದೆ ಎಂದರು.
ಕಾರ್ಯಕ್ರಮದಲ್ಲಿ ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ನಿತಿನ್, ನಗರ ಸಂಚಾಲಕ ಸಾಗರ್, ರಾಮಾನುಜಂ, ರುದ್ರೇಶ್, ಪ್ರಶಾಂತ್, ಮಹೇಂದ್ರ, ಶ್ಯಾಮ್,ನಿಂಗರಾಜ್, ನಾರಾಯಣ, ಜಯರಾಮ್, ತೇಜಸ್ ಸುಬ್ಬು, ಸೇರಿದಂತೆ ಹಲವರು ಭಾಗಿಯಾಗಿದ್ದರು.