ಮುಡಾ ೫೦:೫೦ ನಿವೇಶನದ ಬಗ್ಗೆ ಮಾತನಾಡುವಂತೆ ಸವಾಲು
ಸಂಜೆವಾಣಿ ನ್ಯೂಸ್
ಮೈಸೂರು: ಜು.೨೯:- ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಸಂಸದರಾದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ) ಮಂಜೂರು ಮಾಡಿರುವ ನಿವೇಶನ ಕೇಳುತ್ತಿದ್ದಾರೇ ಹೊರತು ೫೦:೫೦ ಅನುಪಾತ ನಿವೇಶನ ಕೇಳುತ್ತಿಲ್ಲ ಎಂದು ಮಾಜಿ ಮೇಯರ್ ಎಂ.ಜೆ.ರವಿಕುಮಾರ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಬೆಳಗ್ಗೆದ್ದ ತಕ್ಷಣ ಹಗರಣಗಳನ್ನು ನೋಡುವಂತಾಗಿದ್ದು, ವಾಲ್ಮೀಕಿ ಹಗರಣದ ಮೂಲಕ ಎಸ್‌ಸಿ, ಎಸ್‌ಟಿ ಜನರ ಏಳಿಗೆಗೆ ಬಳಸಬೇಕಾ ಹಣವನ್ನು ಹೈದರಬಾದ್‌ಗೆ ಹೋಗಿದೆ. ಇದನ್ನು ಎಸ್‌ಸಿ, ಎಸ್‌ಟಿ ಸಮುದಾಯ ಇದನ್ನು ಪ್ರಶ್ನಿಸಬೇಕು ಎಂದರು.
ಮತ್ತೊಂದೆಡೆ ಮುಡಾ ಹಗರಣದಲ್ಲಿ ಎಂ.ಲಕ್ಷ್ಮಣ್ ಮತ್ತು ಭೈರತಿ ಸುರೇಶ್ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರನ್ನು ಇಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ಆದರೆ, ೧೯೮೩ರಲ್ಲಿ ಕುಮಾರಸ್ವಾಮಿ ಅವರು ಕೈಗಾರಿಕೆ ಸ್ಥಾಪಿಸಲು ನಿವೇಶನಕ್ಕೆ ಕೋರಿ ಮುಡಾಗೆ ಅರ್ಜಿ ಸಲ್ಲಿಸಿದರು. ೧೯೮೪ರಲ್ಲಿ ಮೈಸೂರಿನ ಜೆ.ಪಿ.ನಗರದಲ್ಲಿ ೨೮೦*೭೫ ಅಳತೆಯ ನಿವೇಶನವನ್ನು ಮುಡಾ ಮಂಜೂರು ಮಾಡಿತು. ಈ ನಿವೇಶನಕ್ಕೆ ೩೭,೩೩೪ ರೂ.ಗಳನ್ನು ಕಟ್ಟಿದ್ದಾರೆ. ಆದರೆ, ಅವರು ಹಕ್ಕು ಪತ್ರ ಕೇಳುವ ಸಂದರ್ಭದಲ್ಲಿ ಈ ನಿವೇಶನದ ಅರ್ಧ ಭಾಗವನ್ನು ಬೇರೆ ಅವರಿಗೆ ಮಂಜೂರು ಮಾಡಿರುವ ಬಗ್ಗೆ ತಿಳಿದು ೨೦೧೭ರಲ್ಲಿ ಮುಡಾ ಆಯುಕ್ತರಿಗೆ ಪತ್ರ ಬರೆದು ಸದರಿ ನಿವೇಶನದ ಹಕ್ಕು ಪತ್ರ ನೀಡಬೇಕುಂದು ಅಥವಾ ಬದಲಿ ನಿವೇಶನದ ಹಕ್ಕು ಪತ್ರವನ್ನಾದರೂ ನೀಡುವಂತೆ ಮನವಿ ಮಾಡಿದರು.
ಪತ್ರಕ್ಕೆ ಪ್ರತಿಕ್ರಿಯಿಸಿದ ಮುಡಾ ಆಯುಕ್ತರು ಬದಲಿ ನಿವೇಶನ ನೀಡಲು ಸಮ್ಮತಿಸಿದ್ದರು. ಆದರೆ, ಈವರೆಗೂ ಅವರಿಗೆ ಯಾವುದೇ ನಿವೇಶನ ನೀಡಿಲ್ಲ. ಇದನ್ನು ಅವರು ಕೇಳುತ್ತಿದ್ದಾರೆ ಹೊರತು ಅವರು ೫೦:೫೦ ಅನುಪಾತದಲ್ಲಿ ನಿವೇಶನ ಕೇಳಿಲ್ಲ. ಅವರಿಗೆ ನಿವೇಶನ ಮಂಜೂರು ಆದ್ದಾಗ ಭೈರತಿ ಸುರೇಶ್ ಇನ್ನೂ ಚಿಕ್ಕ ಹುಡುಗ ಅವರಿಗೇನು ಗೊತ್ತು ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿದ್ದು, ೨೦೦೮ರಲ್ಲಿ ನರ್ಮ್ ಯೋಜನೆ ಬಂದಿದ್ದು, ಲಕ್ಷ್ಮಣ್ ಹೇಳಿಕೊಳ್ಳುತ್ತಾರೆ ನರಸಿಂಹರಾಜ ಕ್ಷೇತ್ರದಿಂದ ಓಟ್ ಹೆಚ್ಚು ಬಂದಿದೆ. ಎಂದು. ಆದರೆ ಕುಮಾರಸ್ವಾಮಿ ಅವರು ಇಲ್ಲಿನ ಸ್ಲಮ್ ಜನತೆಗೆ ನರ್ಮ್ ಯೋಜನೆ ತಂದಿರುವುದರಿಂದ ಲಕ್ಷ್ಮಣ್‌ಗೆ ಹೆಚ್ಚು ಓಟು ಬಂದಿದೆ. ಕುಮಾರಸ್ವಾಮಿ ಅವರ ವಿರುದ್ಧ ಯಾವುದೇ ಹಗರಣವಿಲ್ಲ ಎಂದು ಸ್ಪಷ್ಟಪಡಿಸಿದರು.
ನಂತರ ಮಾಜಿ ಮೇಯರ್ ಆರ್.ಲಿಂಗಪ್ಪ ಮಾತನಾಡಿ, ಮುಡಾ ಹಗರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಅಧಿಕಾರಿಗಳು ಸೈಟುಗಳನ್ನು ಮಾರಾಟ ಮಾಡಿ ನಿಮ್ಮ ಪಕ್ಷಕ್ಕೆ ಎಷ್ಟು ಕೊಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ಎರಡು ಕೈ ಸೇರಿದರೆ, ಹೇಗೆ ಚಪ್ಪಾಳೆಯಾಗುತ್ತದೆ ಹಾಗೇ ಈ ಹಗರಣದಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾತ್ರವೇನು ಎಂಬುದು ತಿಳಿಯುತ್ತದೆ ಎಂದರು.
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪ ಸರಿಯಲ್ಲ. ವಾಸ್ತವವಾಗಿ ಈಗಾಗಲೇ ಕೇಂದ್ರ ಸರ್ಕಾರ ರೈಲ್ವೆ ವಲಯಕ್ಕೆ ೭,೫೫೯ ಕೋಟಿ ನೀಡಿದೆ. ಇದೇ ವೇಳೆ ಗೃಹ ಲಕ್ಷ್ಮಿ ಯೋಜನೆಯಿಂದ ರಾಜ್ಯ ಸರ್ಕಾರ ಪಾಪರ್ ಆಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಎನ್.ಆರ್. ರವಿಚಂದ್ರೇಗೌಡ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಕೆ.ಟಿ.ಚಲುವೇಗೌಡ, ಪಿ.ಮಂಜುನಾಥ್, ರಾಮು, ಬೋರೇಗೌಡ, ಮುದ್ದುರಾಜ್ ಉಪಸ್ಥಿತರಿದ್ದರು.