ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಬಿಸಲವಾಡಿ ಉಮೇಶ್ ಆಯ್ಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.೨೯- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ನಿರ್ದೇಶಕರಾಗಿ ಅಧಿಕ ಮತಗಳನ್ನು ಪಡೆದು ಆಯ್ಕೆಯಾದ ಬಿಸಲವಾಡಿ ಎಸ್. ಉಮೇಶ್ ಅವರನ್ನು ಪೂಜ್ಯರು ಹಾಗೂ ಮುಖಂಡರು ಅಭಿನಂದಿಸಲಾಯಿತು.
ಬಿಸಲವಾಡಿ ಗ್ರಾಮದ ಮಾಜಿ ಗ್ರಾ.ಪಂ. ಅಧ್ಯಕ್ಷ ಬಿ.ಶಾಂತಮಲ್ಲಪ್ಪ ಅವರ ಪುತ್ರ ಬಿಸಲವಾಡಿ ಉಮೇಶ್ ಅವರು ಮಹಾಸಭಾದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿ, ಜಿಲ್ಲೆಯ ಹೆಚ್ಚಿನ ವೀರಶೈವ ಲಿಂಗಾಯತ ಸಮಾಜದ ಬಂಧುಗಳ ಒಲವುಗೊಳಿಸಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜದ ಸೇವೆಯನ್ನು ಮಾಡಲಿ ಎಂದು ಮುಖಂಡರಾದ ಕೊತ್ತಲವಾಡಿ ಸೋಮಲಿಂಗಪ್ಪ ಆಶಿಸಿದರು.
ನೂತನ ನಿರ್ದೇಶಕ ಬಿಸಲವಾಡಿ ಉಮೇಶ್ ಮಾತನಾಡಿ, ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಹೆಚ್ಚಿನ ಮತಗಳನ್ನು ನೀಡಿ ನನ್ನನ್ನು ಆಯ್ಕೆ ಮಾಡಿದ್ದು ಅವರೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ. ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗೂಡಿ ಬಸವ ಭವನ, ಬಸವ ಪುತ್ಥಳಿ ನಿರ್ಮಾಣ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡುವ ಮೂಲಕ ಸಮಾಜಕ್ಕೆ ಅಳಿವು ಸೇವೆ ಸಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ ಮಹಾಸಭಾದ ತಾಲೂಕು ಅಧ್ಯಕ್ಷ ಬಾಲಚಂದ್ರಮೂರ್ತಿ, ಮುಖಂಡರಾದ ಆಲೂರು ಮಲ್ಲು, ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ, ಬಲಚಲವಾಡಿ ನಟೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿಸಲವಾಡಿ ಗಿರೀಶ್, ತೊರವಳ್ಳಿ ಕುಮಾರ್, ಬಿಸಲವಾಡಿ ನಂಜಪ್ಪ, ಅಮಚವಾಡಿ ಲೋಕೇಶ್, ಚಂದ್ರಪ್ಪ, ಸಿದ್ದರಾಜು, ಚನ್ನಪ್ಪನಪುರ ನಾಗೇಂದ್ರ, ಯಾಲಕ್ಕೂರು ಮಧು, ಇತರರು ಇದ್ದರು.