ಶಿಕ್ಷಣದಿಂದ ಮಾತ್ರ ತಾರತಮ್ಯ ನಿವಾರಣೆ ಸಾಧ್ಯ
ಕೋಲಾರ,ಜು,೨೯- ಶಿಕ್ಷಣದಿಂದ ಮಾತ್ರ -ಸಮಾಜದಲ್ಲಿನ ತಾರತಮ್ಯ ನಿವಾರಣೆ ಮಾಡಲು ಸಾಧ್ಯವಿದೆ. ಪ್ರಸ್ತುತ ಸರಕಾರಿ ಉದ್ಯೋಗ, ರಾಜಕೀಯ ಸ್ಥಾನಮಾನಗಳಿಗೆ ಹೋರಾಟ ಅನಿವಾರ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ಪಟ್ಟರು.
ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿಯಿಂದ ದಿ||ಸಿ.ಆರ್ ಮಾಲಾ ಜ್ಞಾಪಕಾರ್ಥವಾಗಿ ೨೦೨೩-೨೪ ನೇ ಸಾಲಿನ ಎಸ್ಸಿ, ಎಸ್ಟಿ, ಹಾಗೂ ಅಲ್ಪಸಂಖ್ಯಾತರ ವಿಧ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೌಲಭ್ಯಗಳಿಗಾಗಿ ಸಂವಿಧಾನ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ ಅದನ್ನು ಸದ್ಬಳಿಸಿ ಕೊಳ್ಳಬೇಕು ಜೊತೆಗೆ ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಅರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಸಮುದಾಯವನ್ನು ತರುವಂತಾಗ ಬೇಕು ಇದಕ್ಕೆ ನಮ್ಮಲ್ಲಿನ ವೈಮನಸ್ಸು ಬಿಟ್ಟು ಎಲ್ಲರೂ ಸಂಘಟಿತರಾಗ ಬೇಕೆಂದು ಕರೆ ನೀಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಜನಪರವಾದ ಯೋಜನೆಗಳನ್ನು ರೂಪಿಸಿದ್ದಾರೆ. ಜೊತೆಗೆ ವಿಧ್ಯಾರ್ಥಿಗಳ ಉತ್ಸಾಹ ಮತ್ತು ಹುಮ್ಮಸ್ಸು ಹೆಚ್ಚಾಗಲು ಇಂತಹ ಪೋತ್ಸಾಹದ ಕಾರ್ಯಕ್ರಮಗಳನ್ನು ನಿರಂತರವಾಗಿ ಮುನ್ನೆಡೆಸಿ ಕೊಂಡು ಹೋಗಬೇಕು ಅವಕಾಶಗಳು ಯಾವಾಗಲೂ ಸಿಗುವುದಿಲ್ಲ. ಸಿಕ್ಕಾಗ ಸದುಪಯೋಗ ಪಡಿಸಿ ಕೊಳ್ಳಬೇಕು. ವಾಲ್ಮೀಕಿ ಸಮುದಾಯವು ಇತರೆ ಸಮುದಾಯಗಳನ್ನು ಗೌರವಯುತವಾಗಿ ಕಾಣುವಂತಾಗಿ ಜೊತೆಯಲ್ಲಿ ಕರೆದುಕೊಂಡು ಹೋಗುವಂತಾಗ ಬೇಕೆಂದು ಕಿವಿ ಮಾತು ತಿಳಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ ಮನುಷ್ಯನಿಗೆ ಅವಶ್ಯಕತೆ ಇರುವುದನ್ನು ಕೇಳದೇ ಪ್ರಶ್ನೆ ಮಾಡದೇ ಪಡೆಯಲು ಸಾಧ್ಯವಿಲ್ಲ. ಅವಕಾಶಗಳಿಗಾಗಿ ಕೆಲವು ಸಂದರ್ಭದಲ್ಲಿ ಹೋರಾಟವು ಅನಿವಾರ್ಯವಾಗಲಿದೆ. ಮುಖ್ಯ ಮಂತ್ರಿಗಳು ಸಿದ್ದರಾಮಯ್ಯನವರು ಎಲ್ಲಾ ಜಾತಿ ಸಮುದಾಯಗಳನ್ನು ಜೊತೆಗೆ ಕರೆದುಕೊಂಡು ಸಮಾನತೆಗೆ ಒತ್ತು ಇದ್ದಾರೆ ಅವರ ವಿರುದ್ಧವೂ ಸಂಚು ನಡೆಯುತ್ತಿರುವುದು ವಿಪರ್ಯಸವಾಗಿದೆ ಎಂದರು
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಮಹಾ ಸ್ವಾಮೀಜಿ ಮಾತನಾಡಿ, ಜಾತಿ ಎಂಬ ಕಾರಣಗಳಿಂದಾಗಿ ಸಮಾಜದಲ್ಲಿ ತಾರತಮ್ಯದ ಮನೋಭಾವನೆಯಿಂದ ನೋಡುವಂತಾಗಿದೆ ಸಮುದಾಯವನ್ನು ಸ್ವಾಭಿಮಾನದಿಂದ ಬದುಕುವ ವಾತಾವರಣ ಸೃಷ್ಟಿಸಿಕೊಳ್ಳಬೇಕು ವಿಧ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪೋತ್ಸಾಹಿಸಬೇಕು ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಯಾವುದೇ ಸಮಾಜಕ್ಕೆ ಒಳ್ಳೆಯದು ಬಯಸುವುದಾದರೆ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ ಇತರೆ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಬೇಕು ಎಲ್ಲರೂ ಒಂದೇ ಎಂಬುದನ್ನು ಅರ್ಥಮಾಡಿಕೊಂಡು ಒಗ್ಗೂಡಿಸಿಕೊಂಡು ಕಾರ್ಯಕ್ರಮಗಳನ್ನು ಸಮಾಜದಲ್ಲಿ ನಡೆಸಬೇಕು. ಈ ಹಿಂದೆ ಇದೇ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನೆಯಲ್ಲೂ ಸಹ ರಾಜಕೀಯ ಮಾಡಿದರು ಆದರೆ ಇವತ್ತು ಭವನದಿಂದ ಎಲ್ಲರಿಗೂ ಅನುಕೂಲವಾಗುತ್ತಿದೆ ಪ್ರತಿಯೊಬ್ಬರೂ ಅಂಬೇಡ್ಕರ್ ವಾಲ್ಮೀಕಿ ಕುವೆಂಪು ಅವರ ಆಶಯಗಳನ್ನು ಮೈಗೂಡಿಸಿಕೊಂಡು ಒಳ್ಳೆಯ ಮಾರ್ಗದಲ್ಲಿ ಸಾಗುವಂತಾಗ ಬೇಕೆಂದರು.
ನಗರಸಭೆ ಸದಸ್ಯ ಎನ್.ಅಂಬರೀಶ್ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಉದ್ದೇಶದಿಂದ ಎಸ್ಸಿ ಎಸ್ಟಿ ಹಾಗೂ ಅಲ್ಪಸಂಖ್ಯಾತರ ವಿಧ್ಯಾರ್ಥಿಗಳನ್ನು ಅಭಿನಂದನೆ ಸಲ್ಲಿಸುವ ಕೆಲಸ ಮಾಡಿದ್ದೇವೆ ಇವತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟಾಗ ಸಮುದಾಯಗಳು ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸುಮಾರು ೮೦ ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಾಯಕ ಕಮೀಷನರ್ ಡಾ.ಮೈತ್ರಿ, ತಹಸೀಲ್ದಾರ್ ಹರ್ಷವರ್ಧನ್, ಕುಡಾ ಅಧ್ಯಕ್ಷ ಮಹಮ್ಮದ್ ಅನೀಫ್ , ಕೋಚಿಮುಲ್ ನಿರ್ದೇಶಕ ಷಂಷೀರ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರಾದ ಅಶೋಕ್, ಮುರಳಿ, ದಲಿತ ಮುಖಂಡ ಟಿ.ವಿಜಿಕುಮಾರ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಮುಖಂಡರಾದ ಬಾಲಗೋವಿಂದ್, ಮಾಲೂರು ವೆಂಕಟರಾಮ್, ಕುಡುವನಹಳ್ಳಿ ಆನಂದ್ ಇದ್ದರು.