ಕಣ್ಣಿನ ತಪಾಸಣೆ ಶಿಬಿರ
ಕೋಲಾರ,ಜು.೨೯- ರೋಟರಿ ಕ್ಲಬ್ ಕೋಲಾರ ಮತ್ತು ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆ ಕೋಲಾರ ಹಾಗೂ ನಳಂದ ವಿದ್ಯಾನಿಕೇತನ ಶಾಲೆಯ ಸಂಯುಕ್ತಾಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಏರ್ಪಡಿಸಿಲಾಗಿತ್ತು.
ಕಣ್ಣಿನ ತಜ್ಞೆ ಡಾ.ಶರ್ಮಿಳ ಅವರ ನೇತೃತ್ವದಲ್ಲಿ ಕಣ್ಣಿನ ಆರೈಕೆ ಹಾಗೂ ಕಣ್ಣಿನ ಕುರಿತು ವಿದ್ಯಾರ್ಥಿಗಳಿಗೆ ಇವರಿಂದ ನಮ್ಮ ಶಾಲೆಯ ಎಲ್ಲಾ ತರಗತಿಯ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರು, ನಳಂದ ವಿದ್ಯನಿಕೇತನ ಶಾಲೆಯ ಕಾರ್ಯದರ್ಶಿ ಟಿ.ಆರ್ ಜಯರಾಮ, ಖಜಾಂಜಿ ಎನ್. ಮಮತಾ, ಶಾಲೆಯ ಪ್ರಾಂಶುಪಾಲ ಡಾ.ಎಚ್.ಗೌರಿನಾಯ್ಡು ಇದ್ದರು.