ಗಂಗಾ ಕಲ್ಯಾಣ ಯೋಜನೆಗೆ ಶಾಸಕ ಚಾಲನೆ
ಹೊಸಕೋಟೆ.ಜು.೨೯-ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ಖಾಜಿಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಮನಹಳ್ಳಿ ಗ್ರಾಮದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ವೈಯಕ್ತಿಕ ಕೊಳವೆ ಬಾವಿ ಹಾಗೂ ಬೊಮ್ಮನಬಂಡೆ ಗ್ರಾಮದಲ್ಲಿ ವಿವೇಕಾ ಯೋಜನೆಯಡಿ ೧೫ ಲಕ್ಷ ವೆಚ್ಚದ ಶಾಲಾ ಕೊಠಡಿಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು.
ನಂತರ ಮಾತನಡಿದ ಅವರು, ೨೦೨೧-೨೨ರಲ್ಲಿ ಮಂಜೂರಾಗಿದ್ದ ಗಂಗಾಕಲ್ಯಾಣ ಯೋಜನೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಿದ್ದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಹೆಚ್ಚು ಗಂಗಾಕಲ್ಯಾಣ ಯೋಜನೆಯಡಿ ಹೊಸಕೋಟೆ ತಾಲ್ಲೂಕಿನಲ್ಲಿಯೇ ಕೊಳವೆ ಬಾವಿ ಕೊರೆಯಿಸಿ ಹೆಗ್ಗಳಿಕೆ ನಮಗಿದೆ. ತಾಲ್ಲೂಕಿನಲ್ಲಿ ಮಂಜೂರಾಗಿದ್ದು ೧೧ ಕೊಳವೆ ಬಾವಿಗಳಲ್ಲಿ ೭ ಕೊಳವೆ ಬಾವಿಗಳನ್ನು ಈಗಾಗಲೇ ಕೊರೆಯಿಸಿದ್ದು ಎಲ್ಲಾ ಕೊಳವೆ ಬಾವಿಗಳಲ್ಲೂ ಉತ್ತಮ ನೀರು ದೊರೆತಿದ್ದು. ಇದರಿಂದ ಗ್ರಾಮೀಣ ಭಾಗದ ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ ಎಂದರು.
ಬಳಿಕ ಖಾಜಿಹೊಸಹಳ್ಳಿ ಗ್ರಾಮ ಪಂಚಾಯ್ತಿ ಅದ್ಯಕ್ಷ ಪರಮನಹಳ್ಳಿ ರಾಮಣ್ಣ ಮಾತನಾಡಿ, ಈಗಾಗಲೇ ಶಾಸಕ ಶರತ್ ಬಚ್ಚೇಗೌಡರು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಿದ್ದು. ಈಗ ಗಂಗಾಕಲ್ಯಾಣ ಯೋಜನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ನಾನು ಸಹ ೨೧ ವರ್ಷಗಳಿಂದ ಈ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ ಅರ್ಹನಾಗಿದ್ದೆ ಆದರೆ ೨೧ ವರ್ಷಗಳ ನಂತರ ನನಗೆ ಈ ಗಂಗಾ ಕಲ್ಯಾಣ ಕೊಳವೆ ಬಾವಿ ಮಂಜೂರಿಗಿದ್ದು ಬಹಳ ಸಂತಸ ತಂದಿದೆ ಶಾಸಕರಾಧ ಶರತ್ ಬಚ್ಚೇಗೌಡರು ಸರಕಾರದ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಗೆ ದೊರಕಿಸಿಕೊಡುವಲ್ಲಿ ಹಗಲಿರುಳು ಶ್ರಮಿಸುತ್ತಾರೆ. ಪರಮನಹಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಇದ್ದಂತಹ ಸ್ಮಶಾಸನ ಜಾಗವನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಹೆಚ್ಚಿನ ಅನುಕೂಲ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್.ಎಫ್.ಸಿ.ಎಸ್.ಬ್ಯಾಂಕ್ ಅಧ್ಯಕ್ಷ ಕೋಡಿಹಳ್ಳಿ ಸುರೇಶ್, ಮಾಜಿ ಜಿ.ಪಂ. ಸದಸ್ಯ ಕೆ. ಕೃಷ್ಣಮೂರ್ತಿ, ಗ್ರಾ.ಪಂ. ಅಧ್ಯಕ್ಷರಾದ ಪರಮನಹಳ್ಳಿ ರಾಮಣ್ಣ, ಮಾಜಿ ಗ್ರಾ.ಪಂ ಅಧ್ಯಕ್ಷರಾದ ರವಿಕುಮಾರ್, ಗಂಗಾಕಲ್ಯಾಣ ಯೋಜನೆ ತಾಲ್ಲೂಕು ಅಧೀಕಾರಿ ಶಾರದ, ಇಓ ನಾರಾಯಣಸ್ವಾಮಿ, ಪಿಡಿಓ ಮುನಿರಾಜು, ವೆಂಕಟೇಶ್, ಮಂಜುನಾಥ್, ಸೇರಿದಂತೆ ಹಲವಾರು ಮುಖಂಡರಿದ್ದರು,