ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ
ಹೊಸಕೋಟೆ.ಜು.೨೯-ತಾಲ್ಲೂಕಿನ ಖಾಜಿಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೊಮ್ಮನಬಂಡೆ ಗ್ರಾಮದಲ್ಲಿ ಶಿಥಿಲವಾಗಿದ್ದ ಶಾಲಾ ಕೊಠಡಿ ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ನೀಡಿದ ಹಿನ್ನೆಲೆ ಶಿಥಿಲವಾಗಿದ್ದ ಶಾಲಾ ಕೊಠಡಿಯನ್ನು ನೆಲಸಮ ಗೊಳಿಸಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿಸಿದ್ದು ಅತೀ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ಬೊಮ್ಮನಬಂಡೆ ಗ್ರಾಮದ ಶಾಲಾ ಆವರಣದಲ್ಲಿ ಅಮ್ಮಿಕೊಂಡಿದ್ದ ಭೂಮಿ ಪೂಜೆಯಲ್ಲಿ ಮಾತನಾಡಿದ ಅವರು, ಶಿಥಿಲವಾಗಿದ್ದ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದು ಈಗ ನೂತನವಾಗಿ ೧೪ ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣದ ಜೊತೆಗೆ ಸ್ಥಳೀಯವಾಗಿ ಕಂಪನಿಗಳ ಸಹಭಾಗಿತ್ವ ಪಡೆದು ಸಿ.ಎಸ್.ಆರ್. ಅನುದಾನದಡಿಯಲ್ಲಿ ೨ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲು ಚಾಲನೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು ವಿದ್ಯಾರ್ಥಿಗಳು ಉತ್ತಮ ಕಲಿಕೆ ನಡೆಸಲು ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸದರು.
ಬಳಿಕ ಗ್ರಾಮದ ಯುವ ಮುಕಂಡ ಹಾಗು ಗುತ್ತಿಗೆದಾರ ನಾಗೇಶ್ ಮಾತನಾಡಿ, ಸುಮಾರು ದಿನಗಳ ಕಾಲ ಶಿಥಿಲವಾಗಿದ್ದ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದನ್ನು ಕಂಡು ಶಾಸಕರಲ್ಲಿ ಮನವಿ ಮಾಡಿದ ತಕ್ಷಣ ನಮ್ಮ ಸಮಸ್ಯೆಗೆ ಸ್ಪಂದಿಸಿ ವಿವೇಕಾ ಯೋಜನೆಯಡಿಯಲ್ಲಿ ಹಾಗೂ ಸ್ಥಳೀಯವಾಗಿ ಸಿ.ಎಸ್.ಆರ್. ಅನುದಾನದಲ್ಲಿ ನೂತನ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲು ಭೂಮಿ ಪೂಜೆ ಮಾಡಿದ್ದಾರೆ. ಇದರಿಂದ ಬೊಮ್ಮನಬಂಡೆ ಗ್ರಾಮಕ್ಕೆ ಹೆಚ್ಚಿನ ಅನುಕೂಲವಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೋಡಿಹಳ್ಳಿ ಸುರೇಶ್, ಮಾಜಿ ಜಿ.ಪಂ. ಸದಸ್ಯ ಕೆ. ಕೃಷ್ಣಮೂರ್ತಿ, ಗ್ರಾ.ಪಂ. ಅಧ್ಯಕ್ಷರಾದ ಪರಮನಹಳ್ಳಿ ರಾಮಣ್ಣ, ಮಾಜಿ ಅಧ್ಯಕ್ಷರಾದ ರವಿಕುಮಾರ್, ಇ.ಓ ನಾರಾಯಣಸ್ವಾಮಿ, ಪಿಡಿಓ ಮುನಿರಾಜು, ಹಿರಿಯ ಮುಖಂಡರಾದ ತಿಮ್ಮರಾಯಪ್ಪ, ಜೋಗಪ್ಪ, ನಾರಾಯಣಸ್ವಾಮಿ, ಕೃಷ್ಣಪ್ಪ, ಮುಖಂಡರಾದ ಗುತ್ತಿಗೆದಾರ ನಾಗೇಶ್, ರಮೇಶ್, ಕಿರಣ, ಡಿ. ನಾಗೇಶ್, ಮುನಿರಾಜು, ಮಾರೇಗೌಡ ಕಟ್ಟಿಗೇನಹಳ್ಳೀ ಶರೀಪ್, ಹಾಗೂ ಇತರರು ಉಪಸ್ಥಿತರಿದ್ದರು.