ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಅತ್ಯಗತ್ಯ: ಆಶಾ ಪಾಟೀಲ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೯:ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರವೂ ಅಗತ್ಯವಾಗಿದೆ. ನಮ್ಮ ಸುಂದರ ಬದುಕಿಗೆ ಪರಿಸರವರವನ್ನು ಪೋಷಿಸಿ ಬೆಳೆಸುವ ಜವಬ್ದಾರಿ ನಮ್ಮದಾಗಿದೆ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರು ಮತ್ತು ಬೃಹತ್ ಕೈಗಾರಿಕೆ, ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ. ಪಾಟೀಲ ಅವರ ಪತ್ನಿ ಆಶಾ ಎಂ. ಪಾಟೀಲ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಆವರಣದಲ್ಲಿನ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಮಹಾವಿದ್ಯಾಲಯದ ಐಕ್ಯೂಎಸಿ, ಹಸಿರು ಸಿರಿ ಘಟಕ, ವೃಕ್ಷ ಅಭಿಯಾನ ಪ್ರತಿಷ್ಠಾನ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಡುವ ಮೂಲಕ ‘ಹಸಿರು ಸಿರಿ’ ಘಟಕ ಮತ್ತು ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ಸಹಯೋಗದಲ್ಲಿ ಶನಿವಾರ ದಿನದಂದು ಜರುಗಿದ ಸಸಿ ನೆಟ್ಟು ನೀರುಣಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಈ ಸಮಾಜದಲ್ಲಿ ಬದುಕುತ್ತಿರುವ ನಾವುಗಳು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪರಿಸರವನ್ನು ಬೆಳೆಸಿ ಪೋಷಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ನಮ್ಮ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು ಅದರಂತೆ ವೃಕ್ಷವೂ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣವೂ ಎಷ್ಟು ಮುಖ್ಯವೂ ಅಷ್ಟೇ ಪರಿಸರ ಸಂರಕ್ಷಣೆಯು ಅಷ್ಟೇ ಅವಶ್ಯಕತೆ ಇದೆ. ಮಹಾವಿದ್ಯಾಲಯದ ಆವರಣದಲ್ಲಿನ ಅರಳಿ, ಆಲ, ಬೇವು, ನೇರಳೆ, ಹುಣಸೆ, ಸರಸ್ವತಿ ಸ್ವರೂಪ ಮತ್ತು ಸುವರ್ಣಕ ಮುಂತಾದ ಮೂವತ್ತಕ್ಕೂ ವಿವಿಧ ಪ್ರಭೇದಗಳನ್ನೊಳಗೊಂಡು ಒಟ್ಟು ಎರಡು ನೂರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಪ್ರತಿಯೊಬ್ಬರು ಗಿಡಗಳನ್ನು ಪೋಷಿಸಿ ಸುಂದರ ಪರಿಸರವಾಗುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎಂ. ಮಿರ್ದೆ, ಪಿಯುಸಿ ಪ್ರಾಚಾರ್ಯÀ ಪ್ರೊ. ಸಿ.ಬಿ. ಪಾಟೀಲ, ಡಾ. ಎಂ.ಬಿ. ಪಾಟೀಲ ಕಿರಿಯ ಸುಪುತ್ರರಾದ ಧ್ರುವ ಎಂ. ಪಾಟೀಲ, ವೃಕ್ಷ ಅಭಿಯಾನ ಪ್ರತಿಷ್ಠಾನದ ಸಂಯೋಜಕÀ ಪ್ರೊ. ಮುರಗೇಶ ಪಟ್ಟಣಶೆಟ್ಟಿ, ಐಕ್ಯೂಎಸಿ ನಿರ್ದೇಶಕÀ ಡಾ. ಪಿ.ಎಸ್. ಪಾಟೀಲ, ಮಹಿಳಾ ಸಬಲೀಕರಣ ಘಟಕದ ಪ್ರೊ. ವಿದ್ಯಾ ಪಾಟೀಲ, ಪ್ರೊ. ಆರ್.ಡಿ. ಜೋಷಿ, ಪ್ರೊ. ಶ್ವೇತಾ ಸವನೂರ, ಪ್ರೊ. ಎಸ್.ಡಿ. ಪಾಟೀಲ, ಡಾ. ಗಿರಿಜಾ ನಿಂಬಾಳ, ಐಕ್ಯೂಎಸಿ ನಿರ್ದೇಶಕÀ ಡಾ. ಪಿ.ಎಸ್. ಪಾಟೀಲ,’ಹಸಿರು ಸಿರಿ’ಘಟಕದ ಸಂಯೋಜಕÀ ಪ್ರೊ. ಕೃಷ್ಣಾ ಮಂಡ್ಲಾ, ಪ್ರೊ. ಪವನ್ ಮಹೀಂದ್ರಕರ, ಡಾ. ಕೆ. ಮಹೇಶಕುಮಾರ, ಡಾ. ಅನೀಲ ನಾಯಕ, ಡಾ. ಶ್ರೀನಿವಾಸ ದೊಡ್ಡಮನಿ, ಎಸ್.ಎಂ. ಕಲಕೋಟಿ, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.