ಶತಮಾನಗಳಿಂದ ಕನ್ನಡ ಸಾಹಿತ್ಯ ಉಳಿಸುವಲ್ಲಿ ಸಾಹಿತ್ಯ ಪರಿಷತ್ತಿನ ಪಾತ್ರ ಅನನ್ಯ : ಮಸಬಿನಾಳ ಶ್ರೀ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೯:ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಪ್ರತಿ ಮನೆ ಮನಗಳಿಗೆ ಮುಟ್ಟಿಸುವ ಕೆಲಸ ಶ್ರೀ ಸಾಮನ್ಯರದು. ಕಬ್ಬಿಣದ ಕಡಲೆಯಂತಿರುವ ಕನ್ನಡ ಸಾಹಿತ್ಯವನ್ನು ಸರಳೀಕರಣಗೊಳಿಸಿ ಸಾಮನ್ಯರು ಅಪ್ಪಿಕೊಳ್ಳುವಂತ ಸಾಹಿತ್ಯವನ್ನು ರಚಿಸಿದವರು ವಚನಕಾರರು. ಇಂತಹ ವಚನಗಳನ್ನು ಉಳಿಸುವ ಕೆಲಸ ಶತಮಾನಗಳಿಂದಲೂ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತ ಬಂದಿದೆ ಎಂದು ಮಸಬಿನಾಳ ದಾಸೋಹ ವಿರಕ್ತಮಠದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಜಿಲ್ಲಾ ನಗರ ತಾಲೂಕ ಘಟಕಗಳ ಆಶ್ರಯದಲ್ಲಿ ದಿ. ಎಸ್.ಜಿ. ಬಗಲಿ, ಲಿಂ ಮುದಕಯ್ಯ ಮತ್ತು ಶಂಕರೆಮ್ಮೆ ಇವರ ಸ್ಮರಣಾರ್ಥ ಹಮ್ಮಿಕೊಂಡ ಎರಡು ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡುನುಡಿ, ನೆಲ, ಜಲ, ಭಾಷೆ, ಸಂಸ್ಕೃತಿ ಉಳಿಸಿ ಬೆಳಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಪರಿಷತ್ತಿನ ಕಾರ್ಯ ಅನನ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಚನ್ನಬಸವ ಸಾಹಿತ್ಯ ವೇದಿಕೆ ಅಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿ, ಕನ್ನಡ ಕಟ್ಟುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಪ್ರಕಟವಾಗದ ಅನೇಕ ಸಾಹಿಗಳ ಸಾಹಿತ್ಯ ಪ್ರಕಟಿಸುವ ಕಾರ್ಯ ಆಗಬೇಕಿದೆ. ವಿಶ್ವ ಬಂಧುತ್ವ ಸಾರುವ ಸಂದೇಶ ವಚನಗಳಲ್ಲಿ ಅಡಗಿದೆ ಎಂದರು.
ಕನ್ನಡ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಅನ್ನಪೂರ್ಣ ಚೋಳಕೆ, ಕನ್ನಡ ಸಾಹಿತ್ಯಕ್ಕೆ ಸುದೀರ್ಘ ಇತಿಹಾಸವಿದೆ. ಪಂಪನಿAದ ಸಿಂಪಿ ಲಿಂಗಣ್ಣ ವರೆಗೆ ಬೆಳದು ಬಂದಿದೆ. ನಮ್ಮ ಭಾಗದ ಸಿಂಪಿ ಲಿಂಗಣ್ಣ, ಜಯದೇವಿ ತಾಯಿ ಲಿಗಾಡೆ, ಫ.ಗು. ಹಳಕಟ್ಟಿ ಅವರು ಆಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೇಯಸ್ಸು ನಮ್ಮ ಜಿಲ್ಲೆಗೆ ಸಲ್ಲುತ್ತದೆ ಎಂದರು.
ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಚಡಚಣ ತಾಲೂಕ ವಿದ್ಯಾ ಕಲ್ಯಾಣಶೆಟ್ಟಿ, ವಚನ ಸಾಹಿತ್ಯ ಸಮುದ್ರದಂತೆ, ಮೊದಲಬಾರಿಗೆ ಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರ, ಜಾತಿ ವ್ಯವಸ್ಥೆ ಮತ್ತು ಮಹಿಳಾ ಸಮಾನತೆ ಕುರಿತು ಮಾತನಾಡಿದ್ದೇ ಶರಣ ಸಾಹಿತ್ಯ. ರಾಯಮ್ಮ, ಗೊಗ್ಗವ್ವೆ, ನಿಂಗಮ್ಮ, ಕಲ್ಯಾಣ್ಣಮ್ಮ, ಬೊಂತಾದೇವಿ, ಕೇಚಲದೇವಿರಂತ ವಚನ ರಚಿಸುವದರ ಮೂಲಕ ಸ್ತ್ರೀ ಕುಲಕ್ಕೆ ದಾರಿದೀಪವಾದರು ಎಂದರು.
ಅತಿಥಿಗಳಾದ ಸಮಾಜ ಚಿಂತಕ ಮುನ್ನಾ ಭಕ್ಷಿ ಹಾಗು ಹಿರಿಯ ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಮಾತನಾಡಿದರು.
ವೇದಿಕೆ ಮೇಲೆ ಉದ್ದ್ಯಮಿ ಪ್ರಕಾಶ ಚಿಕ್ಕಲಕಿ, ಧಾರ್ಮಿಕ ಚಿಂತಕ ಮಲ್ಲಿಕಾರ್ಜುನ ಕುಂಬಾರ, ಚೈತನ್ಯ ಮುದ್ದೇಬಿಹಾಳ ಪ್ರಾರ್ಥಿಸಿದರು, ಸುಭಾಷ್ ಕನ್ನೂರ ಸ್ವಾಗತಿಸಿದರು, ಡಾ ಸಂಗಮೇಶ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಮಾಧವ ಗುಡಿ ನಿರೂಪಿಸಿದರು, ಶೋಭಾ ಬಡಿಗೇರ ವಂದಿಸಿದರು.
ಇದೇ ಸಂದರ್ಭದಲ್ಲಿ ಸಹಕಾರಿ ಧುರೀಣ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಶಾಂತಪ್ಪ ಜತ್ತಿ ಅಕಾಲಿಕ ಮರಣ ಹೊಂದಿದ ನಿಮಿತ್ತ ಮೌನ ವಹಿಸಿ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಪದಾಧಿಕಾರಿಗಳಾದ ರಾಜೇಸಾಬ ಶಿವನಗುತ್ತಿ, ಕಮಲಾ ಮುರಾಳ, ವಿದ್ಯಾವತಿ ಅಂಕಲಗಿ, ವಿಜಯಲಕ್ಷ್ಮಿ ಹಳಕಟ್ಟಿ, ಜಿ.ಎಸ್. ಬಳ್ಳೂರ, ಬಸವರಾಜ ಆಜೂರ, ಅಬ್ದುಲ್‌ರಜಾಕ ಮುಲ್ಲಾ, ಕೆ.ಎಸ್. ಹಣಮಾಣಿ, ಕೆ.ಎಫ್. ಅಂಕಲಗಿ, ಪ್ರದೀಪ ಕುಲಕರ್ಣಿ, ಎಸ್.ಆಯ್. ಹೊನವಾಡ, ಆಶಾ ಬಿರಾದಾರ, ಅರ್ಜುನ ಶಿರೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಡಾ. ಡಿ.ಆರ್. ಪಾಟೀಲ, ಅಮೋಘಸಿದ್ಧ ಪೂಜಾರಿ, ಶ್ರೀಕಾಂತ ನಾಡಗೌಡ, ಮಹಾದೇವ ಸ್ವಾಮಿ ಆರ್, ರಿಯಾನ ಮಾಲಿಕ್ ಹಳ್ಳೂರ, ಭಾಗೀರಥಿ ಶಿಂಧೆ ಮುಂತಾದವರು ಉಪಸ್ಥಿತರಿದ್ದರು.