ಪತ್ರಿಕೆ ಹೆಸರಿನಲ್ಲಿ ಬ್ಲಾಕ್‌ಮೇಲ್ ಮಾಡುವವರು ಪತ್ರಕರ್ತರಲ್ಲ: ಯತ್ನಾಳ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೯ : ಸರ್ಕಾರಗಳು ತಪ್ಪಿದಾಗ ಎಚ್ಚರಿಸುವ ಕೆಲಸ ಮಾಡುವ ಪತ್ರಕರ್ತರ ಜೀವನ ಮಾತ್ರ ಕಷ್ಟಕರವಾಗಿದೆ. ಹಗಲು ರಾತ್ರಿ ಎನ್ನದೇ ದುಡಿಯುವ ಪತ್ರಕರ್ತರು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುವಂತಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದAತೆ ಮಾಧ್ಯಮ ರಂಗ ನಾಲ್ಕನೇ ಅಂಗವಾಗಿ ತನ್ನ ಜವಾಬ್ದಾರಿ ನಿಭಾಯಿಸುತ್ತಿದೆ, ಪತ್ರಕರ್ತರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಪತ್ರಕರ್ತರಿಗಾಗಿ ಬಿಎಲ್‌ಡಿಇ ಸಂಸ್ಥೆಯ ವತಿಯಿಂದ ಆರೋಗ್ಯ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಬಸವಾದಿ ಶರಣರ ವಿಚಾರಗಳನ್ನು ಬೆಳಕಿಗೆ ತಂದ ಶ್ರೇಯಸ್ಸು ಡಾ.ಹಳಕಟ್ಟಿ ಅವರಿಗೆ ಸಲ್ಲುತ್ತದೆ, ಇಂತಹ ಶ್ರೇಷ್ಠ ವ್ಯಕ್ತಿ ಡಾ.ಹಳಕಟ್ಟಿ ಪತ್ರಕರ್ತರ ಬಳಗಕ್ಕೆ ಸೇರಿದವರು ಎಂಬುದು ಸಹ ಪತ್ರಕರ್ತರಿಗೆ ಹಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ
ಪತ್ರಿಕೆ ಹೆಸರಿನಲ್ಲಿ ಬ್ಲಾಕ್ ಮಾಡುವವರು ಕಾರ್ಯನಿರತ ಪತ್ರಕರ್ತರಲ್ಲ, ಅವರು ಕಿಸೆ ಕತ್ತರಿಸುವ ಪತ್ರಕರ್ತರು. ನಾನು ಸತ್ಯವನ್ನೇ ಮಾತನಾಡುತ್ತೇನೆ. ಯಾರೊಂದಿಗೂ ನಾನು ಅಡ್ಜೆಸ್ಟಮೆಂಟ್ ರಾಜಕಾರಣ ಮಾಡುವುದಿಲ್ಲ, ಒಳ್ಳೆಯದು ಮಾಡಿದರೆ ಅದನ್ನು ಹೊಗಳುತ್ತೇನೆ, ಕೆಟ್ಟದ್ದು ಮಾಡಿದರೆ ಅದನ್ನು ಟೀಕಿಸುತ್ತೇನೆ. ನಮ್ಮವರೇ ಇರಲಿ ಯಾರೇ ಇರಲಿ. ನಾನು ಎಂದಿಗೂ ಮುಖ್ಯಮಂತ್ರಿಗಳ ಕಚೇರಿಗೆ ಹೋಗಿ ನಿಲ್ಲುವುದಿಲ್ಲ ಎಂದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್
ಮುಖ್ಯಮಂತ್ರಿಗಳ ಪ್ರಧಾನ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಮಾತನಾಡಿ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಹಾಗೂ ಪತ್ರಕರ್ತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಗೃಹ ಮಂಡಳಿಯಲ್ಲಿ ಶೇ.೫ ರಷ್ಟು ನಿವೇಶನಗಳನ್ನು ಪತ್ರಕರ್ತರಿಗೆ ಮೀಸಲಿರಸಲಾಗುತ್ತದೆ, ಈ ಸೌಲಭ್ಯವನ್ನು ಈ ಭಾಗದ ಪತ್ರಕರ್ತರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವ್ಯಕ್ತಿ ಕೇಂದ್ರಿತ ಸುದ್ದಿಗಳೇ ಇಂದು ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ, ಶ್ರೀಮಂತ ಕುಟುಂಬಗಳ ಮದುವೆಗಳು ಗಂಟೆಗಟ್ಟಲೇ ಬಿತ್ತರವಾಗುತ್ತಿವೆ. ಈ ಎಲ್ಲದರ ಮಧ್ಯೆ ಮಾಧ್ಯಮಗಳ ಮೇಲೆ ವಿಶ್ವಾಸಾರ್ಹತೆಯೂ ಕಡಿಮೆಯಾಗುತ್ತಾ ಸಾಗಿದೆ ಎಂದರು.
ರೈತರ, ಜನಸಾಮಾನ್ಯರ ಸಮಸ್ಯೆಗಳು ಮಾಧ್ಯಮಗಳಲ್ಲಿ ಬೆಳಕು ಚೆಲ್ಲುವ ಕೆಲಸ ನಡೆಯುತ್ತಿಲ್ಲ. ಒಂದು ರೀತಿ ಮಾಧ್ಯಮಕ್ಕೂ ಕಾರ್ಪೋರೇಟ್ ಸಂಸ್ಕೃತಿ ಕಾಲಿಟ್ಟಿದೆ. ವ್ಯಕ್ತಿ ಕೇಂದ್ರಿತ ಸುದ್ದಿಗಳು, ಬ್ರೇಕಿಂಗ್ ನ್ಯೂಸ್ ಅಬ್ಬರದಲ್ಲಿ ವಿಶ್ವಾಸಾರ್ಹತೆಯ ಕೊರತೆಯಾಗುತ್ತಿದೆ, ಹೀಗಾಗಿ ವಿಶ್ವಾಸಾರ್ಹತೆಯನ್ನು ಪುನರ್ ಸ್ಥಾಪಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಬೇಕಿದೆ ಎಂದರು.
ಅಭಿವ್ಯಕ್ತಿಯ ಸ್ವಾತಂತ್ರö್ಯವೇ ಪತ್ರಕರ್ತರ ಶಕ್ತಿ. ಆದರೆ ಈ ಸ್ವಾತಂತ್ರö್ಯ ದುರಪಯೋಗವಾದರೆ ದೊಡ್ಡ ದುರಂತವೇ ನಡೆದು ಹೋಗುತ್ತದೆ. ಪತ್ರಕರ್ತರು ಒಂದು ರೀತಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ರೀತಿ ಇರಬೇಕು, ಯತ್ನಾಳರು ತಾವು ಪ್ರತಿನಿಧಿಸುವ ಪಕ್ಷದವರು ತಪ್ಪು ಮಾಡಿದರೂ ಎತ್ತಿ ತೋರಿಸುತ್ತಾರೆ, ಸರ್ಕಾರ ತಪ್ಪು ಮಾಡಿದರೂ ಅದನ್ನು ಎಚ್ಚರಿಸುತ್ತಾರೆ, ಆ ರೀತಿ ಪತ್ರಕರ್ತರು ತಪ್ಪುಗಳನ್ನು ಎತ್ತಿ ತೋರಿಸಬೇಕು ಎಂದರು.
ಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಜಿಲ್ಲಾಧಿಕಾರಿ ಟಿ. ಭೂಬಾಲನ್, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಕಾನಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಕಾನಿಪ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವನೆ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಕಾನಿಪ ರಾಜ್ಯ ಪದಾಧಿಕಾರಿ ದೇವರಾಜ್, ಡಾ.ಎಂ.ಎಸ್. ಮದಭಾವಿ ಮೊದಲಾದವರು ಉಪಸ್ಥಿತರಿದ್ದರು.