ಜೇವರ್ಗಿ ಕಲ್ಕತದೇವಿಯ ಸಂಭ್ರಮದಿAದ ನಡೆದ ಪರ್ವ
ಜೇವರ್ಗಿ:ಜು.೨೯: ಪಟ್ಟಣದ ಆರಾಧ್ಯ ದೇವತೆ ಕಲ್ಕತದೇವಿಯ ಮಹಾಪರ್ವ ಶುಕ್ರವಾರ ದಂದು ಸಡಗರ ಸಂಭ್ರಮದಿAದ ನಡೆಯಿತು. ಶಾಸಕ ಡಾ. ಅಜಯಸಿಂಗ್ ಶ್ರೀ ಕಲ್ಕತದೇವಿಯ ದರ್ಶನವನ್ನು ಪಡೆದರು.
ಜೇವರ್ಗಿ ಪಟ್ಟಣದಲ್ಲಿ ಸುಮಾರು ಐದು ವಾರಗಳ ವರೆಗೆ ದೇವಿಯ ಹೇಸರಿನಲ್ಲಿ ವಾರಗಳನ್ನ ಮಾಡುತ್ತಾರೆ. ೩ ಶುಕ್ರವಾರ ಹಾಗೂ ೨ ಮಂಗಳವಾರ ದೇವಿಗೆ ನೀರು ಮತ್ತು ಪುಷ್ಪ ಹಾಕುವುದರ ಮುಖಾಂತರ ಪುಜೆಸಲ್ಲಿಸುತ್ತಾರೆ. ೩ ಶುಕ್ರವಾರ ಹಾಗೂ ೨ ಮಂಗಳವಾರ ಉರಲ್ಲಿ ಯಾರು ಕಡ ರೋಟ್ಟಿಯನ್ನ ಮಾಡುವುದಿಲ್ಲ. ೩ ನೇ ಶುಕ್ರವಾರದಂದು ದೇವಿಯ ತಳದಲ್ಲಿ ತಾಲೂಕಿನ ಜನರು ಸೇರಿಕೊಂಡು ಪರ್ವ ಆಚರಿಸುತ್ತಾರೆ.
ಏಳುರು ಸೀಮೆಯಲ್ಲಿ ಇರುವ ಶ್ರೀ ಕಲ್ಕತದೇವಿಯ ದೇವಸ್ಥಾನದಲ್ಲಿ ಶುಕ್ರವಾರ ಪರ್ವ ಜರುಗಿತು. ಪ್ರತಿ ವರ್ಷದಂತೆ ಈ ವರ್ಷವು ಆಷಾಡ ಮಾಸದಲ್ಲಿ ಶ್ರೀ ಕಲ್ಕತದೇವಿಯ ಪರ್ವ ಆಚರಿಸಲಾಯಿತು. ದೇವಿಗೆ ವಿಶೇಷ ಪೂಜೆ , ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಟ್ಟಣವು ಸೇರಿದಂತೆ ತಾಲೂಕಿನ ಹಾಗೂ ಬೇರೆ ಗ್ರಾಮಗಳಿಂದ ಭಕ್ತರು ಆಗಮಿಸಿ ತಾಯಿ ಕಲ್ಕತದೇವಿಯ ದರ್ಶನವನ್ನು ಪಡೆದರು. ಅದರಂತೆ ಶಾಸಕ ಡಾ. ಅಜಯಸಿಂಗ್ , ಮಾಜಿ ಶಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೊಳ, ಬಿಜೆಪಿಯ ಕಲಬುರಗಿ ಗ್ರಾಮಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ, ಡಾ. ಸಿದ್ದು ಪಾಟೀಲ್ ಸೇರಿದಂತೆ ಅನೇಕ ರಾಜಕಿಯ ಮುಖಂಡರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ವಿಶೇಷವಾಗಿ ಹೊಳಿಗಿ, ಕರಿಗಡುಬು, ತುಪ್ಪ, ಸಜ್ಜಿ ರೋಟ್ಟಿ, ಜೋಳದ ರೋಟ್ಟಿ, ಸೇರಿದಂತೆ ವಿವಿಧ ಖಾದ್ಯಗಳನ್ನು ದೇವಿಗೆ ನೈವೇಧ್ಯ ನೀಡಿದ ನಂತರ ಅಪಾರ ಭಕ್ತರು ಪ್ರಸಾಧ ಸೇವಿಸಿದರು. ಆಯಿತಳದ ಬಳಿ ಭಕ್ತರಿಗೆ ಕುಡಿಯುವ ನೀರು ಸೀರಿದಂತೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ರಾಷ್ಟಿçÃಯ ಹೆದ್ದಾರಿಯಿಂದ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿತ್ತು. ಕಾಲ್ನಡಿಗೆಯ ಮೂಲಕ ಭಕ್ತರು ಸಾಗಿ ದರ್ಶನ ಪಡೆದರು.
ಕಲ್ಕತದೇವಿಯ ಮಹಾಪರ್ವದಲ್ಲಿ ಯಾವುದೆ ರೀತಿಯ ಅಹೀತಕರ ಘಟನೆ ನಡೆಯದಂತೆ ಸಿ ಪಿ ಐ ರಾಜೇಸಾಬ್ ನಧಾಫ್, ಪಿ ಎಸ್ ಐ ಸುರೇಶಕುಮಾರ ಚೌವ್ಹಾಣ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸಿತು.