ಅರಿವಿನ ಕಣಜವಾಗಿ ಸುಗತ ಮಾಸ ಪತ್ರಿಕೆ: ಬಸವರಾಜ ಕೊನೇಕ್
ಕಲಬುರಗಿ ಜು.28:ಸುಗತ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಸಿ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಮಾಲೀಕ ಶ್ರೀ ಬಸವರಾಜ ಕೊನೇಕ್ ಉದ್ಘಾಟಿಸಿ ಮಾತನಾಡಿದರು. ಪತ್ರಿಕೆಗಳು ಇಂದು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜವಾಬ್ದಾರಿ ಹಾಗೂ ಬದ್ಧತೆ ತೋರಬೇಕಾದ ಅಗತ್ಯತೆ ಇಂದು ಹೆಚ್ಚಿಗೆ ಕಾಣುತ್ತಿದೆ ಎಂದರು. ಗುಲ್ಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ.ಪೋತೆಯವರು ನಗರದ ಹೊರವಲಯದ ರಂಗಾಯಣದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುಗತ ಮಾಸ ಪತ್ರಿಕೆಯ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪತ್ರಿಕೆ ಓದುವ ಹಾಗೂ ಅದಕ್ಕೆ ಬರೆಯುವವರ ಸಂಖ್ಯೆಯೂ ಇಂದು ಹೆಚ್ಚಾಗಬೇಕಿದೆ. ಮಾನವೀಯ ಕಳಕಳಿಯ ವರದಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಗಳಿಗೆ ಆದ್ಯತೆ ನೀಡುವ ಕೆಲಸವಾಗಬೇಕು. ಪ್ರತಿಯೊಬ್ಬ ಬರಹಗಾರರನಿಗೂ ಜವಾಬ್ದಾರಿ ಇದ್ದು, ಸಮಾಜದ ಪ್ರಗತಿಗೆ ಪೂರಕವಾಗಿ ಶ್ರಮಿಸಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಲ್ಯಾಣ ಕರ್ನಾಟಕ ಭಾಗ ರಾಜ್ಯಕ್ಕೆ ಕಿರೀಟವಿದ್ದಂತೆ, ಇಲ್ಲಿನ ಬರಹಗಾರರ ಬರವಣಿಗೆ ಹೆಚ್ಚಿನ ವಿಮರ್ಶೆ, ಪ್ರಚಾರವಾಗಬೇಕಿದೆ. ಈ ನೆಲದಲ್ಲಿ ತಾಯ್ತನ ಇದೆ, ಸಂತ-ಸೂಫಿ ಪರಂಪರೆ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಡಾ.ಮುದೇನೂರ ನಿಂಗಪ್ಪ ಅಭಿಪ್ರಾಯಪಟ್ಟರು. ಅಕ್ಷರ ಎಂಬುದು ಸಾಂಸ್ಕೃತಿಕ ಶಕ್ತಿ, ಅರಿವು ಮೂಡಿಸುವ ಶಕ್ತಿ, ಸಾಹಿತ್ಯ ಹಾಗೂ ಪತ್ರಿಕೆ ಓದುವ ಹವ್ಯಾಸ ಇಂದಿನ ಯುವಪೀಳಿಗೆ ಬೆಳೆಸಿಕೊಳ್ಳಬೇಕಿದೆ. ಪತ್ರಿಕೆಗಳು ಓದುವುದರಿಂದ ಜ್ಞಾನದ ಹರಿವು ಹೆಚ್ಚಳವಾಗುತ್ತದೆ. ಪತ್ರಿಕೆಗಳು ಇಂದು ಬದುಕಿನ ಅವಿಭಾಜ್ಯ ಅಂಗಗಳAತಾಗಿದ್ದು, ಓದುವ ಸಂಸ್ಕೃತಿ ಉಳಿದರೆ ಅದರ ಜೊತೆಗೆ ಕನ್ನಡವೂ ಉಳಿಯುತ್ತದೆ ಎಂದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಮಾತನಾಡಿದರು. ಹೋರಾಟಗಾರ ಸುರೇಶ ಹಾದಿಮನಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸುಗತ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಶ್ರೀಶೈಲ ನಾಗರಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿದರು. ಸುಗತ ಪತ್ರಿಕೆಯ ಸಂಪಾದಕರಾದ ಡಾ.ಸೂರ್ಯಕಾಂತ ಸುಜ್ಯಾತ್ ವಂದಿಸಿದರು.
ಡಾ.ಸAಗಪ್ಪ ಹೊಸಮನಿ, ಡಾ.ಎಂ.ಬಿ.ಕಟ್ಟಿ, ಕಿರಣ ಪಾಟೀಲ್, ಸಂದೀಪ ಮಾಳಗಿ, ಮಹಾಂತೇಶ ನವಲಕಲ್, ದತ್ತಾತ್ರೇಯ ಇಕ್ಕಳಕಿ, ಡಾ.ನಾಗಪ್ಪ ಗೋಗಿ, ಡಾ.ಶರಣಪ್ಪ ಸೈದಾಪೂರ, ಡಾ.ಮಲ್ಲಿಕಾರ್ಜುನ ಶೆಟ್ಟಿ, ಡಾ.ಶರಣಬಸಪ್ಪ ವಡ್ಡನಕೇರಿ, ಡಾ.ಪ್ರಕಾಶ ಬಡಿಗೇರ, ಡಾ.ಪಂಡಿತ ಬಿ.ಕೆ., ಡಾ. ಅಮೃತಾ ಕಟಕೆ, ಡಾ.ಹಣಮಂತ ಮೇಲ್ಕೇರಿ, ಡಾ.ಪ್ರೇಮಾ ಅಪಚಂದ, ಡಾ. ಶಿವಪುತ್ರ ಮಾವಿನ್, ಡಾ.ಪ್ರಕಾಶ ಸಂಗಮ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.