ಸಮಾರೋಪಗೊಂಡ ದಂತ ವೈದ್ಯರ ರಾಜ್ಯ ಮಟ್ಟದಷಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿ
ಬಳ್ಳಾರಿ:ಜು,28- ಭಾರತೀಯ ದಂತ ವೈದ್ಯಕೀಯ ಸಂಘದ  ಜಿಲ್ಲಾ ಶಾಖೆಯು ಆತಿಥ್ಯ ವಹಿಸಿಕೊಂಡು  ಎರೆಡು ದಿನಗಳ ಕಾಲ ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಬಳಿಯ ಕ್ರೀಡಾ ಸಮುಚ್ಚಯದಲ್ಲಿ ನಡೆದ
ರಾಜ್ಯ ಮಟ್ಟದ ದಂತ ವೈದ್ಯರ ಷಟಲ್ ಬ್ಯಾಡ್ ಮಿಂಟಂನ್ ಪಂದ್ಯಾವಳಿ ಇಂದು  ಸಮಾರೋಪಗೊಂಡಿದೆ.
ನಾಕೌಟ ಹಂತದಲ್ಲಿ ನಡೆದ ಪಂದ್ಯಗಳಲ್ಲಿ  ರಾಜ್ಯದ ವಿವಿಧ ಜಿಲ್ಲೆಗಳಿಂದ 58 ಕ್ಕೂ  ಕ್ರೀಡಾಪಟುಗಳು  ಪಾಲ್ಗೊಂಡಿದ್ದರು.
ಅಂತಿಮ‌ ಪಂದ್ಯದಲ್ಲಿ:
ಮಹಿಳೆಯರ ವಿಭಾಗದಲ್ಲಿ:
40 ವರ್ಷದೊಳಗಿನ ಮಹಿಳೆಯರ  ಡಬಲ್ಸ್ ನಲ್ಲಿ ಬೆಳಗಾವಿಯ ಡಾ.ದೀಪಾಎಂ ಮತ್ತು ಹುಬ್ಬಳ್ಳಿಯ ಡಾ.ಪೂಜಾ ಅವರು ಬಳ್ಲಕಾರಿಯ  ಡಾ. ವಿಜಯಲಕ್ಷ್ಮಿ ಡಾ‌ ದೀಪಾ ಪಿ ಅವರನ್ನು  ನೇರ ಸೆಟ್ ನಿಂದ (2-0) 21-08, 21-02 ಅಂಕಗಳಿಂದ ಮಣಿಸಿದರು.
40 ವರ್ಷ ಮೇಲ್ಪಟ್ಟ ಮಹಿಳೆಯರ ಸಿಂಗಲ್ಸ್ ನಲ್ಲಿ ಉತ್ತರ ಕನ್ನಡದ ಡಾ ಅರ್ಪಣಾ ಅವರು ಡಾ.ಕೋಕಿಲಾ ಹೆಗಡೆ ಅವರನ್ನು  21-16 ಮತ್ತು 21-12 ಅಂಕಗಳಿಂದ ಮಣಿಸಿದರು.
40 ವರ್ಷ ಮೇಲ್ಪಟ್ಟ ಮಹಿಳೆಯರ ಡಬಲ್ಸ್ ನಲ್ಲಿ ಬೆಳಗಾವಿಯ ಡಾ.ದೀಪ ಎಂ ಮತ್ತು ಉತ್ತರ ಕನ್ನಡದ ಡಾ. ಅರ್ಪಣಾ ಅವರು  ಉತ್ತರ ಕನ್ನಡದ ಡಾ.ಸಂಗೀತಾ ಮತ್ತು ಡಾ.ಕೋಕಿಲಾ ಅವರನ್ನು 21-17, 21-16 ಅಂಕಗಳಿಂದ ಸೋಲಿಸಿದರು.
40 ವರ್ಷ ಕೆಳಗಿನ ಮಿಕ್ಸ್ ಡಬಲ್ಸ್ ನಲ್ಲಿ ಬೆಂಗಳೂರಿನ ಡಾ.ಶಶಿಧರ ಮತ್ತು ಹುಬ್ಬಳ್ಳಿಯ  ಡಾ.ಪೂಜಾ ಅವರು ಬಳ್ಳಾರಿಯ ಡಾ.ಸುರೇಶ್ ಮತ್ತು ಡಾ.ದೀಪಾ ಪಿ ಅವರನ್ನು ನೇರ ಸೆಟ್ ನಿಂದ ಮಣಿಸಿ  21-15, 22-20 ಅಂಕಗಳಿಂದ ವಿಜಯ ಸಾಧಿಸಿದ್ದಾರೆ.
40 ವರ್ಷ ಕೆಳಗಿನ ಮಹಿಳಾ ಸಿಂಗಲ್ಸ್ ನಲ್ಲಿ ಹುಬ್ಬಳ್ಳಿಯ ಡಾ.ಪೂಜಾ ಅವರು ಬಳ್ಳಾರಿಯ ಡಾ.ದೀಪಾ ಪಿ ಅವರನ್ನು 21-07, 21-05 ಅಂಕಗಳಿಂದ ಮಣಿಸಿ ವಿಜಯಿಯಾದರು.
ಪುರುಷರ ವಿಭಾಗದಲ್ಲಿ:
40 ವರ್ಷ ಮೇಲ್ಪಟ್ಟ  ಪುರುಷರ ಸಿಂಗಲ್ಸ್‌ನಲ್ಲಿ  ಬೆಂಗಳೂರಿನ ಡಾ.ರಾಘವ ಭಟ್ ಅವರು, ಶಿವಮೊಗ್ಗದ ಡಾ.ಶೈಲೇಂದ್ರ ಅವರನ್ನು 15-04, 15-05 ಅಂಕಗಳಿಂದ ಮಣಿಸಿದರು.
40 ವರ್ಷದೊಳಗಿನ ಪುರಯಷರ ಡಬಲ್ಸ್ ನಲ್ಲಿ ಬೆಂಗಳೂರಿನ ಡಾ.ಶಶಿಧರ ಮತ್ತು ಡಾ ರಾಘವ ಭಟ್ ಅವರು ಶಿವಮೊಗ್ಗದ ಡಾ.ಜೈ ಭಾರತ್ ರೆಡ್ಡಿ ಹಾಗು ಡಾ.ಶೈಲೇಂದ್ರ ಅವರನ್ನು 21-16 ಮತ್ತು 21-11 ಅಂಕಗಳಿಂದ ಮಣಿಸಿದರು.
ಇನ್ನುಳುದ ವಿಭಾಗಗಳ ಅಂತಿಮ‌ಪಂದ್ಯಗಳು ನಡೆದಿದ್ದವು. ನಂತರ ಟ್ರೋಪಿ ವಿತರಣೆ ಸಮಾರಂಭ ಹಮ್ಮಿಕೊಂಡಿದೆಂದು ದಂತ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಡಾ.ಮಧುಸೂಧನ ಅವರು ತಿಳಿಸಿದ್ದಾರೆ.